ರಾಜ್ಯ

ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ: ಸರ್ಕಾರದ ನಡೆಗೆ ಬೆಂಗಳೂರಿಗರು ಸಂತಸ!

Manjula VN

ಬೆಂಗಳೂರು: ಕೊಟ್ಚ ಮಾತಿನಂತೆಯೇ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಶುಕ್ರವಾರ ಘೋಷಣೆ ಮಾಡಿದ್ದು, ಸರ್ಕಾರದ ನಡೆಯನ್ನು ಬೆಂಗಳೂರಿಗರು ಸ್ವಾಗತಿಸಿದ್ದಾರೆ.

ಸರ್ಕಾರ ಈ ನಡೆ ಕಡಿಮೆ ಆದಾಯವುಳ್ಳ ಮಹಿಳೆಯರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

29 ವರ್ಷದ ರಂಜಿತಾ ಸಿಂಗ್ ಎಂಬುವವರು ಮಾತನಾಡಿ, ಪುರುಷರಿಗೆ ಹೋಲಿಸಿದರೆ ಬಸ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪ್ರಯಾಣಿಸುತ್ತಾರೆ. ಇದು ಅನುಕೂಲಕರ ನೀತಿಯಾಗಿದೆ ಎಂದು ಹೇಳಿದ್ದಾರೆ.

45 ವರ್ಷದ ಶಕುಂತಲಾ ದೇಬ್ ಎಂಬುವವರು ಮಾತನಾಡಿ, “ಕೆಲಸ ಮಾಡದ ಅನೇಕ ಮಹಿಳೆಯರು ತಮ್ಮ ದೈನಂದಿನ ಕೆಲಸಗಳನ್ನು ಪೂರ್ಣಗೊಳಿಸಲು ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಾರೆ. ಅವರ ಬಳಿ ಸೀಮಿತ ಹಣವಿರುತ್ತದೆ. ಉಚಿತ ಯೋಜನೆಯಿಂದ ಹೆಚ್ಚೆಚ್ಚು ಮಹಿಳೆಯರು ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಸುತ್ತಾರೆ ಎಂದು ಹೇಳಿದ್ದಾರೆ.

19 ವರ್ಷದ ಪ್ರಿಯಾ ಸಿಂಗ್ ಎಂಬುವವರು ಮಾತನಾಡಿ, ಉಚಿತ ಬಸ್ ಪ್ರಯಾಣ ಸೌಲಭ್ಯ ಪುರುಷ ಪ್ರಧಾನ ಮನಸ್ಥಿತಿಯಿಂದ ಹೊರಬರಲು ಒಂದು ಹೆಜ್ಜೆ ಮುಂದಿಟ್ಟಂತಾಗುತ್ತದೆ ಎಂದು ಹೇಳಿದ್ದಾರೆ.

21ರ ಹರೆಯದ ಸೋಫಿಯಾ ಲಿನ್ಷಿ ಎಂಬವವರು ಮಾತನಾಡಿ, "ಈ ಹಿಂದೆಯೂ ಸರ್ಕಾರದಿಂದ ಹಲವು ಯೋಜನೆಗಳನ್ನು ಘೋಷಿಸಲಾಗಿತ್ತು. ಈಗಿನ ಸರ್ಕಾರ ಏನು ಮಾಡುತ್ತದೆ ಎಂಬುದನ್ನು ಕಾದು ನೋಡೋಣ ಎಂದು ಹೇಳಿದ್ದಾರೆ.

SCROLL FOR NEXT