ಮೂರು ರೈಲುಗಳ ಭೀಕರ ಅಪಘಾತ 
ರಾಜ್ಯ

ಒಡಿಶಾ ರೈಲು ದುರಂತ: ಕರ್ನಾಟಕದ ಎಲ್ಲಾ ಪ್ರಯಾಣಿಕರು ಸುರಕ್ಷಿತ; ಅಪಘಾತ ಸ್ಥಳಕ್ಕೆ ತೆರಳಲು ತಂಡ ರಚನೆ

ಒಡಿಶಾದ ಬಾಲಸೋರ್ ಬಳಿ ಅಪಘಾತಕ್ಕೀಡಾದ ರೈಲಿನಲ್ಲಿದ್ದ ರಾಜ್ಯದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಕರ್ನಾಟಕ ರೈಲ್ವೆ ಡಿಐಜಿ ಶಶಿಕುಮಾರ್ ಶನಿವಾರ ಇಲ್ಲಿ ತಿಳಿಸಿದ್ದಾರೆ.

ಬೆಂಗಳೂರು: ಒಡಿಶಾದ ಬಾಲಸೋರ್ ಬಳಿ ಅಪಘಾತಕ್ಕೀಡಾದ ರೈಲಿನಲ್ಲಿದ್ದ ರಾಜ್ಯದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಕರ್ನಾಟಕ ರೈಲ್ವೆ ಡಿಐಜಿ ಶಶಿಕುಮಾರ್ ಶನಿವಾರ ಇಲ್ಲಿ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಶಶಿಕುಮಾರ್, ಕರ್ನಾಟಕದಿಂದ ಹೊರಟಿದ್ದ ರೈಲಿಗೆ ಹಾನಿಯಾಗಿದೆ. ರೈಲಿನ 23 ಕೋಚ್‌ಗಳ ಪೈಕಿ ಮೂರು ಬೋಗಿಗಳಿಗೆ ತೊಂದರೆಯಾಗಿದೆ ಎಂದರು.

ಸದ್ಯಕ್ಕೆ ಈ ಬೋಗಿಗಳಲ್ಲಿ ರಾಜ್ಯದ ಯಾವುದೇ ಪ್ರಯಾಣಿಕರು ಇರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಪಘಾತದ ನಂತರ ರೈಲ್ವೆ ಅಧಿಕಾರಿಗಳು ಒಡಿಶಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಡಿಐಜಿ ತಿಳಿಸಿದ್ದಾರೆ.

ನಾಲ್ಕು ಸ್ಥಳಗಳಲ್ಲಿ ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ ಮತ್ತು ರಾಜ್ಯದ ಯಾವುದೇ ಪ್ರಯಾಣಿಕರು ಗಾಯಗೊಂಡಿರುವ ಅಥವಾ ಸತ್ತಿರುವ ಬಗ್ಗೆ ಈವರೆಗೆ ವರದಿಯಾಗಿಲ್ಲ ಎಂದು ಅವರು ಪುನರುಚ್ಚರಿಸಿದರು.

ಘಟನೆಯಲ್ಲಿ ಕರ್ನಾಟಕದ ಜನರು ಪ್ರಯಾಣಿಸಿದ ಬೋಗಿಗಳಿಗೆ ಹಾನಿಯಾಗಿಲ್ಲ. ಡಿವೈಎಸ್ಪಿ ಮತ್ತು ಇತರರ ಶ್ರೇಣಿಯ ಅಧಿಕಾರಿಗಳ ತಂಡವನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗುವುದು ಎಂದು ವಿವರಿಸಿದರು.

ನಾವು ನಾಲ್ಕು ಸಹಾಯ ಕೇಂದ್ರಗಳನ್ನು ಪ್ರಾರಂಭಿಸಿದ್ದೇವೆ ಮತ್ತು ಇಲ್ಲಿಯವರೆಗೆ ಯಾವುದೇ ಕರೆಗಳನ್ನು ಸ್ವೀಕರಿಸಿಲ್ಲ. ಸುಳ್ಳು ಮಾಹಿತಿ ನೀಡಬಾರದು ಮತ್ತು ಇದುವರೆಗೂ ಕರ್ನಾಟಕದ ಪ್ರಯಾಣಿಕರ ಸಾವಿನ ಸುದ್ದಿ ಬಂದಿಲ್ಲ ಎಂದು ಡಿಐಜಿ ಹೇಳಿದರು.

ಶುಕ್ರವಾರ ಅಪಘಾತಕ್ಕೀಡಾದ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (ಬೆಂಗಳೂರು)- ಹೌರಾ ಎಕ್ಸ್‌ಪ್ರೆಸ್ ರೈಲಿನಲ್ಲಿ ರಾಜ್ಯದ 110 ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ಮೂಲಗಳು ವಿವರಿಸಿವೆ. ಅದೃಷ್ಟವಶಾತ್ ದುರಂತದಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರಯಾಣಿಕರು ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದವರಾಗಿದ್ದು, ಬೆಂಗಳೂರಿನಿಂದ ಎಸ್ 5, ಎಸ್ 6 ಮತ್ತು ಎಸ್ 7 ಬೋಗಿಗಳಲ್ಲಿ ಪ್ರಯಾಣಿಸಿದ್ದರು.

ಎಂಜಿನ್ ಬದಲಾಯಿಸಿದ ನಂತರ, ಅವರೆಲ್ಲರನ್ನೂ ಎಂಜಿನ್ ನಂತರ ಮೊದಲ ಕೋಚ್‌ಗೆ ಸ್ಥಳಾಂತರಿಸಲಾಯಿತು. ಇನ್ನೊಂದು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ರೈಲಿನ ಕೊನೆಯ ನಾಲ್ಕು ಬೋಗಿಗಳಿಗೆ ತೀವ್ರ ಹಾನಿಯಾಗಿದೆ ಎಂದು ಮೂಲಗಳು ವಿವರಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಶಕ್ತಿ, ಜ್ಞಾನ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಸಿಎಂ ಡಿಕೆ ಶಿವಕುಮಾರ್