ಮಡಿಕೇರಿಯ ಮೈತ್ರಿ ಹಾಲ್ ಆರ್‌ಆರ್‌ಆರ್ ಕೇಂದ್ರದ ಹೊರಗೆ 'ಮೈ ಲೈಫ್ ಮೈ ಕ್ಲೀನ್ ಸಿಟಿ' ಉಪಕ್ರಮದ ಪ್ರಚಾರ ಫಲಕ 
ರಾಜ್ಯ

ಸಿಎಂಸಿಯ ನಿರ್ಲಕ್ಷ್ಯದಿಂದ ಮಡಿಕೇರಿಯ ಆರ್‌ಆರ್‌ಆರ್ ಕೇಂದ್ರಗಳು ನಿಷ್ಕ್ರಿಯ

ಕೇಂದ್ರ ಸರ್ಕಾರದ ಹಲವು ಯೋಜನೆಗಳು ಬಹುತೇಕ ಪ್ರದೇಶಗಳಲ್ಲಿ ಕೇವಲ ಪೇಪರ್‌ಗಳಲ್ಲಿ ಮತ್ತು ಫೋಟೋದಲ್ಲಿ ಮಾತ್ರ ನೋಡಬಹುದು ಎಂಬುದಕ್ಕೆ ಮಡಿಕೇರಿಯ ಆರ್‌ಆರ್‌ಆರ್ ಕೇಂದ್ರಗಳು ಸಾಕ್ಷಿಯಾಗಿ ನಿಂತಿವೆ.

ಮಡಿಕೇರಿ: ಕೇಂದ್ರ ಸರ್ಕಾರದ ಹಲವು ಯೋಜನೆಗಳು ಬಹುತೇಕ ಪ್ರದೇಶಗಳಲ್ಲಿ ಕೇವಲ ಪೇಪರ್‌ಗಳಲ್ಲಿ ಮತ್ತು ಫೋಟೋದಲ್ಲಿ ಮಾತ್ರ ನೋಡಬಹುದು ಎಂಬುದಕ್ಕೆ ಮಡಿಕೇರಿಯ ಆರ್‌ಆರ್‌ಆರ್ ಕೇಂದ್ರಗಳು ಸಾಕ್ಷಿಯಾಗಿ ನಿಂತಿವೆ.

ಮಡಿಕೇರಿ ನಗರ ಪಾಲಿಕೆ ಆಯುಕ್ತರು, ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನಗರದಲ್ಲಿ ಕಳೆದ ಮೇ 20 ರಂದು ಸ್ವಚ್ಛ ಭಾರತ್ ಮಿಷನ್ ನಗರ 2.0 ಯೋಜನೆಯಡಿ ‘ಮೈ ಲೈಫ್, ಮೈ ಕ್ಲೀನ್ ಸಿಟಿ’ ಉಪಕ್ರಮಕ್ಕೆ ಚಾಲನೆ ನೀಡಿದ್ದರು. ಅಲ್ಲದೆ ನಗರದಾದ್ಯಂತ ಐದು ಆರ್‌ಆರ್‌ಆರ್(ಕಡಿಮೆ ಮಾಡುವುದು, ಮರುಬಳಕೆ, ಪುನರ್ ಬಳಕೆ') ಕೇಂದ್ರಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು.

ಮೊಬೈಲ್ ವಾಹನಗಳಲ್ಲಿ ಅಳವಡಿಸಲಾದ ಲೌಡ್ ಸ್ಪೀಕರ್‌ಗಳು ಇನ್ನೂ ನಗರದಾದ್ಯಂತ ಸುತ್ತು ಹಾಕುತ್ತಿವೆ ಮತ್ತು ಹಳೆಯ ಪುಸ್ತಕಗಳು, ಇ-ತ್ಯಾಜ್ಯ ಹಾಗೂ ಇತರ ಮರುಬಳಕೆ ಮಾಡಬಹುದಾದ ಮತ್ತು ಸಂಸ್ಕರಿಸಬಹುದಾದ ವಸ್ತುಗಳನ್ನು ದಾನ ಮಾಡುವಂತೆ ಜನರಲ್ಲಿ ಮನವಿ ಮಾಡುತ್ತಿವೆ.

ಆದಾಗ್ಯೂ, ನಗರದಾದ್ಯಂತ ಇರುವ ಎಲ್ಲಾ ಐದು ಆರ್‌ಆರ್‌ಆರ್ ಕೇಂದ್ರಗಳು ನಿಷ್ಕ್ರಿಯಗೊಂಡಿವೆ. ಆದರೆ ಕೆಲವು ನಿವಾಸಿಗಳು ನೀಡಿದ ವಸ್ತುಗಳು ಆರ್‌ಆರ್‌ಆರ್ ಕೇಂದ್ರಗಳಲ್ಲಿ ಅನಾಥವಾಗಿ ಬಿದ್ದಿವೆ. ಮಡಿಕೇರಿಯ ಟೌನ್ ಹಾಲ್ ನಗರದ ಮಧ್ಯಭಾಗದಲ್ಲಿ, ನಿವಾಸಿಗಳು ದಾನವಾಗಿ ನೀಡಿದ ಸಾಮಗ್ರಿಗಳು ಜೂನ್ 5 ರ ವೇಳೆಗೆ ಕಸದ ಗುಂಡಿ ಸೇರುವ ಸಾಧ್ಯತೆಯಿದೆ.

ಜೂನ್ 5 ರ ವಿಶ್ವ ಪರಿಸರ ದಿನದವರೆಗೆ ಈ ಕೇಂದ್ರಗಳು ಕಾರ್ಯನಿರ್ವಹಿಸಬೇಕಾಗಿತ್ತು. ಆದರೆ ಸಿಎಂಸಿ ಅಧಿಕಾರಿಗಳ ನಿರಾಸಕ್ತಿಯಿಂದ ಮೊದಲ ದಿನದಿಂದಲೇ ಸಮರ್ಪಕವಾಗಿ ಕಾರ್ಯನಿರ್ವಹಿಸಲು ವಿಫಲವಾಗಿವೆ. 

ಡಂಪಿಂಗ್ ಯಾರ್ಡ್‌‌ಗೆ ಹೋಗುವ ತ್ಯಾಜ್ಯವನ್ನು ಕಡಿಮೆಗೊಳಿಸಿ, ಮರುಬಳಕೆ ಮತ್ತು ಪುನರ್ ಬಳಕೆಗೆ ಪ್ರೋತ್ಸಾಹ ನೀಡುವುದು ಈ ಆ‌ರ್‌ಆ‌ರ್‌ಆ‌ರ್‌ ಕೇಂದ್ರದ ಉದ್ದೇಶವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನಟ ದೇವರಾಜ್ 2ನೇ ಪುತ್ರ ನಟ ಪ್ರಣಮ್ ನಿಶ್ಚಿತಾರ್ಥ

Nepal Floods: ನೇಪಾಳದ ವಿನಾಶಕಾರಿ ಪ್ರವಾಹಕ್ಕೆ ಇದೇನಾ ಕಾರಣ? ಉಪಗ್ರಹ ಚಿತ್ರಗಳಲ್ಲಿ ಸ್ಫೋಟಕ ಸುಳಿವು!

'Chhatron Ki Goonj' ಕಾರ್ಯಕ್ರಮದ ವೇಳೆ Rahul Gandhi ಮಾಡಿದ 29 ತಪ್ಪುಗಳ ದಾಖಲೆ ನೀಡಿದ ಜೂಟ್ ಕಿ ಗೂಂಜ್ ವೆಬ್​ಸೈಟ್!

ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಾರ್ಯಕ್ರಮಕ್ಕೆ ವಿರೋಧ: ಮೇಯರ್ ಮಮ್ದಾನಿ ವಿರುದ್ಧ ಅಮೆರಿಕದ ಖ್ಯಾತ ಗಾಯಕಿ ಕಿಡಿ!