ರಾಜ್ಯ

ಅಧಿಕಾರಿಗಳೊಂದಿಗೆ ಬಿಬಿಎಂಪಿ ಆಯುಕ್ತ ಸಭೆ: ಪ್ರತಿ ಇಲಾಖೆಯ ಪ್ರಗತಿ ಶೀಲನೆ, ಶೀಘ್ರದಲ್ಲೇ ಡಿಸಿಎಂಗೆ ವರದಿ ಸಲ್ಲಿಕೆ

Manjula VN

ಬೆಂಗಳೂರು: ಬಿಬಿಎಂಪಿಗೆ ಸೇರಿದ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಶನಿವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ವಿವಿಧ ಕಾರ್ಯಕ್ರಮ ಹಾಗೂ ಯೋಜನೆಗಳ ಕುರಿತು ಮಾಹಿತಿ ಪಡೆದುಕೊಂಡರು.

ಸಭೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ರಾಜಕಾಲುವೆ ಅಭಿವೃದ್ಧಿ, ಒತ್ತುವರಿ ತೆರವು ಕಾರ್ಯಾಚರಣೆ, ರಸ್ತೆ ಅಗಲೀಕರಣ, ಅಂಡರ್ ಪಾಸ್, ಫ್ರೈಓವರ್, ಕಸ ನಿರ್ವಹಣೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಮುಖ್ಯ ಆಯುಕ್ತರು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿಗಳ ಸಭೆಯಲ್ಲಿ ಸಾರ್ವಜನಿಕ ಸಮಸ್ಯೆ ಪರಿಹಾರ ಮಾಡಲು ಬಿಬಿಎಂಪಿಗೆ ಇರುವ ಅಡೆತಡೆಗಳುಕ ತೊಂದರೆಗಳ ಬಗ್ಗೆ ಡಿಕೆ.ಶಿವಕುಮಾರ್ ಅವರ ಗಮನಕ್ಕೆ ತರಲಾಗುವುದು. ಜೊತೆಗೆ, ಬಿಬಿಎಂಪಿಯು ಮುಂದಿನ 5 ವರ್ಷಗಳಲ್ಲಿ ಕೈಗೊಳ್ಳುವ ಯೋಜನೆ, ಕಾರ್ಯಕ್ರಮಗಳ ಮುನ್ನೋಟದ ವರದಿ ಸಿದ್ಧಪಡಿಸಿ ಸಭೆಯಲ್ಲಿ ಮಂಡಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಬಿಬಿಎಂಪಿ ವಿಶೇಷ ಆಯುಕ್ತರಾದ ಆರ್‌ಎಲ್ ದೀಪಕ್ (ಕಂದಾಯ), ಪ್ರೀತಿ ಗೆಹ್ಲೋಟ್ (ಎಸ್ಟೇಟ್ ಮತ್ತು ಶಿಕ್ಷಣ), ಪಿಎನ್ ರವೀಂದ್ರ (ಮೂಲಸೌಕರ್ಯ), ಡಾ ತ್ರಿಲೋಕ್ ಚಂದ್ರ (ಆರೋಗ್ಯ) ಮತ್ತು ಇತರ ಅಧಿಕಾರಿಗಳು ಭಾಗವಹಿಸಿದ್ದರು.

SCROLL FOR NEXT