ಸಾಂದರ್ಭಿಕ ಚಿತ್ರ 
ರಾಜ್ಯ

ಇನ್ನೂ 10 ದಿನ ಒಣಹವೆ ಮುಂದುವರಿದರೆ ಕರ್ನಾಟಕ ಜಲ ಬಿಕ್ಕಟ್ಟು

ಮುಂಗಾರು ಮಳೆ ಆಗಮನ ವಿಳಂಬ ಹಾಗೂ ಮುಂಗಾರು ಪೂರ್ವ ಮಳೆಯ ಕೊರತೆಯಿಂದಾಗಿ ಬಹುತೇಕ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಮತ್ತು ರಾಜ್ಯದಲ್ಲಿನ ಜಲಾಶಯಗಳು ತೀವ್ರವಾಗಿ ಕುಸಿದಿವೆ.

ಬೆಂಗಳೂರು: ಮುಂಗಾರು ಮಳೆ ಆಗಮನ ವಿಳಂಬ ಹಾಗೂ ಮುಂಗಾರು ಪೂರ್ವ ಮಳೆಯ ಕೊರತೆಯಿಂದಾಗಿ ಬಹುತೇಕ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಮತ್ತು ರಾಜ್ಯದಲ್ಲಿನ ಜಲಾಶಯಗಳು ತೀವ್ರವಾಗಿ ಕುಸಿದಿವೆ.

ಇದೇ ಪರಿಸ್ಥಿತಿ ಮುಂದಿನ 10 ದಿನಗಳ ಕಾಲ ಮುಂದುವರಿದರೆ ನಗರ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ ಮತ್ತು ರಾಜ್ಯಾದ್ಯಂತ ಬಿತ್ತನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. 

ಕೊಪ್ಪಳ, ರಾಯಚೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕಲುಷಿತ ನೀರಿನ ಸಮಸ್ಯೆಯಿಂದ ಜನರು ಮೃತಪಟ್ಟ ಹಿನ್ನೆಲೆಯಲ್ಲಿ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶೀಲನಾ ಸಭೆ ನಡೆಸಿದರು. ಮುಖ್ಯಮಂತ್ರಿಗಳ ಕಚೇರಿ ಮೂಲಗಳ ಪ್ರಕಾರ ಜೂನ್ 10 ರಂದು ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸಿದ್ದು, ಜೂನ್ 1 ರಿಂದ ಜೂನ್ 11 ರವರೆಗಿನ ಮಳೆಯ ಪ್ರಕಾರ ಶೇಕಡಾ 67ರಷ್ಟು ಕೊರತೆಯಿದೆ. 

ಕೆಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆಯ ಬಗ್ಗೆ ಸರ್ಕಾರಕ್ಕೆ ತಿಳಿದಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ (KSNDMC) ಅಂಕಿಅಂಶಗಳ ಪ್ರಕಾರ, 13 ಜಲಾಶಯಗಳಲ್ಲಿ 166 ಟಿಎಂಸಿ ನೀರು ಲಭ್ಯವಿದೆ, ಅವುಗಳ ಒಟ್ಟು ಸಾಮರ್ಥ್ಯ 865 ಟಿಎಂಸಿಯಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಪರಿಸ್ಥಿತಿ ಭೀಕರವಾಗಿದೆ. 

022ರಲ್ಲಿ ಕೃಷ್ಣರಾಜ ಸಾಗರ, ಹಾರಂಗಿ, ಹೇಮಾವತಿ ಮತ್ತು ಕಬಿನಿ ಅಣೆಕಟ್ಟುಗಳಲ್ಲಿ 64.51 ಟಿಎಂಸಿ ಅಡಿ ನೀರು ಇತ್ತು. ಜೂನ್ 9 ರಂದು ಈ ಅಣೆಕಟ್ಟುಗಳು ಕೇವಲ 33.73 ಟಿಎಂಸಿ ಅಡಿಗಳನ್ನು ಹೊಂದಿದ್ದವು. ಕೃಷ್ಣಾ ಜಲಾನಯನ ಪ್ರದೇಶದ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ಜಲಾನಯನ ಪ್ರದೇಶದ ಅಣೆಕಟ್ಟುಗಳಲ್ಲಿ ಕಳೆದ ವರ್ಷ 170 ಟಿಎಂಸಿ ಅಡಿ ನೀರಿದ್ದು, ಈ ವರ್ಷ 78 ಟಿಎಂಸಿ ಅಡಿಗೆ ಇಳಿದಿದೆ. 

ಘಟಪ್ರಭಾ, ತುಂಗಭದ್ರಾ, ಮಲಪ್ರಭಾ, ಆಲಮಟ್ಟಿ, ನಾರಾಯಣಪುರ ಮತ್ತು ಭದ್ರಾ ಜಲಾಶಯಗಳು ಕೃಷ್ಣಾ ಜಲಾನಯನ ಪ್ರದೇಶದಲ್ಲಿವೆ. ಜಲಾನಯನ ಪ್ರದೇಶದ ಬಹುತೇಕ ಭಾಗಗಳಲ್ಲಿ ನದಿಗಳು ಶೀಘ್ರವಾಗಿ ಬತ್ತಿ ಹೋಗುತ್ತಿವೆ.ಮಲೆನಾಡು ಮತ್ತು ಕೊಡಗು ಪ್ರದೇಶಗಳಲ್ಲಿಯೂ ಸಹ ಮುಂಗಾರು ಪೂರ್ವ ಮಳೆಯ ಕೊರತೆ ದಾಖಲಾಗಿದೆ ಎಂದು ತಜ್ಞರು ಹೇಳಿದ್ದಾರೆ. 

ಕೆಎಸ್‌ಎನ್‌ಡಿಎಂಸಿ ಕಾರ್ಯನಿರ್ವಹಿಸುವ ಕಂದಾಯ ಇಲಾಖೆಯ ಮೂಲಗಳು ಜೂನ್ 9, 2023 ರಂತೆ 13 ಪ್ರಮುಖ ಅಣೆಕಟ್ಟುಗಳು ಕಳೆದ ವರ್ಷ ಇದೇ ಅವಧಿಯಲ್ಲಿ 277 ಟಿಎಂಸಿ ಅಡಿ ನೀರು ದಾಖಲಾಗಿದ್ದರೆ 166 ಟಿಎಂಸಿ ಅಡಿ ನೀರು ಇತ್ತು. 2021ರಲ್ಲಿ ಡಿಸೆಂಬರ್‌ವರೆಗೆ ಉತ್ತಮ ಮಳೆಯಾಗಿತ್ತು. ಇದು ರಾಜ್ಯದ ಅಣೆಕಟ್ಟುಗಳು ಮತ್ತು ಜಲಾಶಯಗಳಲ್ಲಿ ಸಾಕಷ್ಟು ನೀರಿನ ಸಂಗ್ರಹಣೆಗೆ ಸಹಾಯ ಮಾಡಿತು. 

ಇದರ ನಂತರ, 2022 ರಲ್ಲಿ ರಾಜ್ಯವು ಶೇಕಡಾ 100ರಷ್ಟು ಪೂರ್ವ ಮುಂಗಾರು ಪೂರ್ವ ಮಳೆಯನ್ನು ಪಡೆದಿದೆ. ಕಳೆದ ವರ್ಷ ಮತ್ತು ಈ ವರ್ಷ ರಾಜ್ಯವು ಕೊರತೆಯ ಮುಂಗಾರು ಪೂರ್ವ ಮಳೆಯನ್ನು ಕಂಡಿದೆ. ಈ ವರ್ಷ, ಮಲೆನಾಡು ಮತ್ತು ಕರಾವಳಿ ಪ್ರದೇಶಗಳು ತೀವ್ರ ಕೊರತೆಯನ್ನು ಎದುರಿಸುತ್ತಿವೆ. ಈ ಪ್ರದೇಶಗಳಲ್ಲಿ ಪಶ್ಚಿಮಕ್ಕೆ ಹರಿಯುವ ನದಿಗಳು ಈಗ ಬಹುತೇಕ ಒಣಗಿವೆ. ಮೋಡಗಳು ದುರ್ಬಲವಾಗಿ ಕಾಣಿಸುತ್ತಿದ್ದು, ಇದರಿಂದ ರಾಜ್ಯಾದ್ಯಂತ ಉತ್ತಮ ಮಳೆಯಾಗದಿರಬಹುದು. ಒಂದು ವಾರ ಅಥವಾ ಇನ್ನೂ 10 ದಿನ ಇದೇ ಪರಿಸ್ಥಿತಿ ಮುಂದುವರಿದರೆ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಇದು ಕೃಷಿಯ ಮೇಲೂ ಪರಿಣಾಮ ಬೀರಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಬಿಪರ್‌ಜೋಯ್ ಚಂಡಮಾರುತವು ಮಳೆಯ ಮೋಡಗಳನ್ನು ಗುಜರಾತ್‌ಗೆ ಎಳೆದೊಯ್ದಿದೆ ಎಂದು ಕೃಷಿ ಪವನಶಾಸ್ತ್ರಜ್ಞ ಮತ್ತು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ (UAS) ಮಾಜಿ ರಿಜಿಸ್ಟ್ರಾರ್ ಪ್ರೊ.ಎಂ.ಬಿ.ರಾಜೇಗೌಡ ಹೇಳಿದ್ದಾರೆ. ಇದು ಕರ್ನಾಟಕದ ಮೇಲೆ ಪರಿಣಾಮ ಬೀರಿದೆ. ಮುಂಗಾರು ವಿಳಂಬ ಮತ್ತು ಚದುರಿದ ಮಳೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು. 

ಬೀದರ್, ಬೆಳಗಾವಿ, ಚಾಮರಾಜನಗರ, ಮೈಸೂರು, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಬೆಳೆದ ಬೆಳೆಗಳು ಹಾನಿಗೊಳಗಾಗಬಹುದು. ಆದಾಗ್ಯೂ, ಖಾರಿಫ್ ಬಿತ್ತನೆಯನ್ನು ಜುಲೈ ಮಧ್ಯದಲ್ಲಿ ಮಾಡಲಾಗುತ್ತಿದೆ. ಆ ವೇಳೆಗೆ, ಮುಂಗಾರು ಸರಿಯಾಗಿ ಆರಂಭವಾಗಬಹುದು ಎಂದು ರಾಜೇಗೌಡ ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

ಬಿಜೆಪಿ ನಿಯೋಗದಿಂದ ರಾಜ್ಯಪಾಲರ ಭೇಟಿ: 'ದ್ವೇಷ ಭಾಷಣ ತಡೆ' ಮಸೂದೆಗೆ ಅಂಕಿತ ಹಾಕದಂತೆ ಮನವಿ!

SCROLL FOR NEXT