ಫಸ್ಟ್​​ ನೈಟ್​ಗೆ ಶುಭ ಕೋರಿದ ಬ್ಯಾನರ್ ವೈರಲ್! 
ರಾಜ್ಯ

ಮಂಗಳೂರು: ಮುಂಜಾನೆ ತ್ರಾಣ ಇರುವ ತನಕ ಹೋರಾಡಿ ಗೆದ್ದು ಬಾ ಗೆಳೆಯಾ; ಫಸ್ಟ್​​ ನೈಟ್​ಗೆ ಶುಭ ಕೋರಿದ ಬ್ಯಾನರ್ ವೈರಲ್!

ಮದುವೆ, ಹುಟ್ಟಿದ ಹಬ್ಬಕ್ಕೆ ಬ್ಯಾನರ್‌ಗಳನ್ನು ಹಾಕಿ ಶುಭಹಾರೈಸುವುದು ಸಾಮಾನ್ಯ, ಆದರೆ ಇಲ್ಲೊಂದೆಡೆ ಇದೆಲ್ಲಕ್ಕಿಂತ ವಿಭಿನ್ನವಾಗಿ, ವಿಚಿತ್ರವಾಗಿ  ಗೆಳೆಯನಿಗೆ ಫಸ್ಟ್‌ನೈಟ್‌ಗೆ ಶುಭಕೋರಿ ಸ್ನೇಹಿತರೆಲ್ಲಾ ಸೇರಿ ವಿಶ್ ಮಾಡಿ ಬ್ಯಾನರ್ ಹಾಕಿದ್ದಾರೆ.

ಮಂಗಳೂರು: ಮದುವೆ, ಹುಟ್ಟಿದ ಹಬ್ಬಕ್ಕೆ ಬ್ಯಾನರ್‌ಗಳನ್ನು ಹಾಕಿ ಶುಭಹಾರೈಸುವುದು ಸಾಮಾನ್ಯ, ಆದರೆ ಇಲ್ಲೊಂದೆಡೆ ಇದೆಲ್ಲಕ್ಕಿಂತ ವಿಭಿನ್ನವಾಗಿ, ವಿಚಿತ್ರವಾಗಿ  ಗೆಳೆಯನಿಗೆ ಫಸ್ಟ್‌ನೈಟ್‌ಗೆ ಶುಭಕೋರಿ ಸ್ನೇಹಿತರೆಲ್ಲಾ ಸೇರಿ ವಿಶ್ ಮಾಡಿ ಬ್ಯಾನರ್ ಹಾಕಿದ್ದಾರೆ.

ಹೀಗೆ ಮದುವೆಯ ಮೊದಲ ರಾತ್ರಿಗೆ ವಿಶ್ ಮಾಡಿ ಬ್ಯಾನರ್ ಅಳವಡಿಸಿರೋದು ಮಂಗಳೂರಿನಲ್ಲಿ. ಅದು ಕೂಡಾ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಪೊಲೀಸ್ ಠಾಣೆಯ ಕಾಂಪೌಂಡ್‌ಗೆ ತಾಗಿಕೊಂಡಂತೆ ಈ ಬ್ಯಾನರ್ ಹಾಕಲಾಗಿದೆ.

ಸದ್ಯ ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಕೆಲವರು ಇದನ್ನು ಜಸ್ಟ್‌ ಫಾರ್ ಫನ್‌ ಎಂದು ತಗೊಂಡ್ರೆ, ಮತ್ತೆ ಕೆಲವರು ಇವತ್ತಿನ ಯುವಜನರ ಮನಸ್ಥಿತಿಯನ್ನು ಟೀಕಿಸುತ್ತಿದ್ದಾರೆ, ಯುವಕನೊಬ್ಬನ ಮದುವೆಯ ಮೊದಲ ರಾತ್ರಿಯ ಸಂಭ್ರಮ ಎಂದು ಮತ್ತೊಂದು ಹೋರ್ಡಿಂಗ್ಸ್ ಹಾಕಲಾಗಿದೆ. ರಾತ್ರಿಯಿಡೀ ಹೋರಾಡಿ ಗೆದ್ದು ಬಾ ಎಂದು ಗೆಳೆಯರು ಹಾರೈಸಿ ಸರಕಾರಿ ಜಾಗದಲ್ಲಿ ದೊಡ್ಡ ಸಾಧನೆ ಎಂಬಂತೆ ಹೋರ್ಡಿಂಗ್ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ಈ ಬ್ಯಾನರ್ ನೋಡಿ ಜನರು ಇದು ತಮಾಷೆಯಲ್ಲ, ಸಾರ್ವಜನಿಕ ಪ್ರದೇಶದಲ್ಲಿ ಇಂಥಾ ಹೋರ್ಡಿಂಗ್ ಹಾಕಿಸಿರೋದು ಸರಿಯಲ್ಲ ಎಂದು ಟೀಕಿಸಿದ್ದಾರೆ.

'ನಮ್ಮ ಮುಗ್ಧ ಗೆಳೆಯ, ರಸಿಕ ಇಂದಿನ ಮದುಮಗ ಸುದರ್ಶನ್ ಇವರ ಮದುವೆ ನಂತರದ ಪ್ರಪ್ರಥಮ ಗಿಲಿಗಿಲಿ ಆಟ, ಮೊದಲ ರಾತ್ರಿಯ ಸಂಭ್ರಮ ದಿನಾಂಕ, 12 ಜೂನ್, ಕೆಪಿಟಿ ಮನೆಯಲ್ಲಿ, ಸಮಯ ರಾತ್ರಿ 12 ಗಂಟೆಯಿಂದ' ಎಂದು ಬರೆಸಲಾಗಿದೆ. ಮಾತ್ರವಲ್ಲ. ಮುಂಜಾನೆ ತ್ರಾಣ ಇರುವ ತನಕ ಎದ್ದು ಬಿದ್ದು ಹೋರಾಡಿ ಗೆದ್ದು ಬಾ ಗೆಳೆಯ, ನಿಮ್ಮ ಪ್ರಪ್ರಥಮ ರಾತ್ರಿಗೆ ಶುಭಕೋರುವ ಸುದರ್ಶನ್ ಅಭಿಮಾನಿ ಬಳಗ, ಕುಡ್ಲ, ಕತಾರ್‌, ದುಬೈ, ಕೀನ್ಯಾ, ಶ್ರೀಲಂಕಾ ಎಂದು ಹಾಕಿಸಲಾಗಿದೆ. ಫೋಟೋದ ಕೆಳಗಡೆ ಆಲ್‌ ದಿ ಬೆಸ್ಟ್ ಫಾರ್ ಯುವರ್ ಫಸ್ಟ್ ಮ್ಯಾಚ್ ಎಂದು ಸಹ ಹಾಕಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT