ರಾಜ್ಯ

ಬೆಂಗಳೂರು-ಹುಬ್ಬಳ್ಳಿ ನಡುವೆ ವಂದೇ ಭಾರತ್ ರೈಲು; ಜೂನ್ 28 ರಿಂದ ಸಂಚಾರ ಪ್ರಾರಂಭ ಸಾಧ್ಯತೆ

Ramyashree GN

ಬೆಂಗಳೂರು: ಬೆಂಗಳೂರಿನಿಂದ ಹುಬ್ಬಳ್ಳಿ-ಧಾರವಾಡಕ್ಕೆ ಸಂಪರ್ಕ ಕಲ್ಪಿಸುವ ಕರ್ನಾಟಕದ ವಿಶೇಷ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಎರಡು ದಿನಗಳ ನಂತರ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರಿನಿಂದ ಹುಬ್ಬಳ್ಳಿ-ಧಾರವಾಡ ಮಾರ್ಗದಲ್ಲಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಜುಲೈ 26ರಂದು ಚಾಲನೆ ನೀಡಲಿದ್ದು, ಜೂನ್ 28 ರಂದು ಹುಬ್ಬಳ್ಳಿ-ಧಾರವಾಡಕ್ಕೆ ರೈಲು ಕಾರ್ಯಾರಂಭ ಮಾಡಲಿದೆ.

ಆದಾಗ್ಯೂ, ಸ್ವಾಂಕಿ ರೈಲು ತನ್ನ ಸಾಮರ್ಥ್ಯಕ್ಕಿಂತ ಕಡಿಮೆ ವೇಗದಲ್ಲಿ ಚಲಿಸುತ್ತದೆ. ರೈಲು ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸಬಹುದಾದರೂ, ರಾಜ್ಯದಲ್ಲಿ ಅದರ ಗರಿಷ್ಠ ವೇಗ ಗಂಟೆಗೆ 120 ಕಿ.ಮೀ ದಾಟುವುದಿಲ್ಲ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದರ ಪರಿಣಾಮವಾಗಿ, ರೈಲು ಎರಡು ನಗರಗಳ ನಡುವಿನ ಅಂತರವನ್ನು (487.47 ಕಿಮೀ) 70.54 kmph ನಷ್ಟು ಸರಾಸರಿ ವೇಗದಲ್ಲಿ ಕ್ರಮಿಸುತ್ತದೆ. ಎರಡು ನಗರಗಳ ನಡುವಿನ ಪ್ರಯಾಣದ ಸಮಯವು ಸುಮಾರು ಏಳು ಗಂಟೆಗಳಿರುತ್ತದೆ. ಪ್ರಸ್ತುತ ಇತರೆ ವೇಗದ ರೈಲಿಗಿಂತ ಕೇವಲ ಒಂದು ಗಂಟೆ ಕಡಿಮೆ ಪ್ರಯಾಣ ಅವಧಿಯಿರುತ್ತದೆ.

ಯಶವಂತಪುರ ಮತ್ತು ಹುಬ್ಬಳ್ಳಿ ನಡುವಿನ ಪ್ರಯಾಣದ ಸಮಯವು 6 ಗಂಟೆ 15 ನಿಮಿಷಗಳಷ್ಟು ಗಣನೀಯವಾಗಿ ಕಡಿಮೆಯಾಗಲಿದೆ.
ಎಂಟು ಬೋಗಿಗಳ ವಂದೇ ಭಾರತ್ ರೈಲು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ನಿಂದ ಗುರುವಾರ ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ 7ಕ್ಕೆ ಆಗಮಿಸಿತು. ರಾತ್ರಿ 11 ಗಂಟೆಗೆ ಚಿಕ್ಕಬಾಣಾವರಕ್ಕೆ ತೆರಳಿದ್ದು, ಶುಕ್ರವಾರ ತಪಾಸಣೆ ನಡೆಯಲಿದೆ.

ಸ್ಥಳೀಯವಾಗಿ ತಯಾರಿಸಿದ ರೈಲನ್ನು ಜೂನ್ 19 ರಂದು ಪ್ರಾಯೋಗಿಕವಾಗಿ ನಡೆಸಲಾಗುವುದು. 'ಇದು ಎಂಟು ಕೋಚ್‌ಗಳು ಮತ್ತು ಎರಡು ಮೋಟಾರ್‌ಕಾರ್‌ಗಳನ್ನು ಹೊಂದಿರುವ ಮಿನಿ-ವಂದೇ ಭಾರತ್' ಎಂದು ಬೆಂಗಳೂರಿನ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ (ಆಡಳಿತ) ಕುಸುಮಾ ಹರಿಪ್ರಸಾದ್ ತಿಳಿಸಿದ್ದಾರೆ.

SCROLL FOR NEXT