ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ಸ್ಥಾಪಿತವಾಗಿರುವ ಆ್ಯಪಲ್ ಲ್ಯಾಬ್ 
ರಾಜ್ಯ

35 ಲಕ್ಷ ರೂ. ವೆಚ್ಚದಲ್ಲಿ ರಾಜ್ಯದ ಮೊದಲ ಆ್ಯಪಲ್ ಲ್ಯಾಬ್ ಮಂಡ್ಯದಲ್ಲಿ ಸ್ಥಾಪನೆ

ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ರಾಜ್ಯದಲ್ಲೇ ಮೊಟ್ಟಮೊದಲ ‘ಆ್ಯಪಲ್ ಲ್ಯಾಬ್’ (ಆ್ಯಪಲ್ ಕಂಪ್ಯೂಟರ್ ಪ್ರಯೋಗಾಲಯ) ಸ್ಥಾಪನೆಯಾಗಿದ್ದು, ಅದರ ಉದ್ಘಾಟನೆಯೂ ಆಗಿದೆ. 35 ಲಕ್ಷ ರೂ. ವೆಚ್ಚದಲ್ಲಿ ಅತ್ಯಾಧುನಿಕ ಲ್ಯಾಬ್ ಅನ್ನು ಸ್ಥಾಪಿಸಲಾಗಿದೆ.

ಮಂಡ್ಯ: ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ರಾಜ್ಯದಲ್ಲೇ ಮೊಟ್ಟಮೊದಲ ‘ಆ್ಯಪಲ್ ಲ್ಯಾಬ್’ (ಆ್ಯಪಲ್ ಕಂಪ್ಯೂಟರ್ ಪ್ರಯೋಗಾಲಯ) ಸ್ಥಾಪನೆಯಾಗಿದ್ದು, ಅದರ ಉದ್ಘಾಟನೆಯೂ ಆಗಿದೆ. 35 ಲಕ್ಷ ರೂ. ವೆಚ್ಚದಲ್ಲಿ ಅತ್ಯಾಧುನಿಕ ಲ್ಯಾಬ್ ಅನ್ನು ಸ್ಥಾಪಿಸಲಾಗಿದೆ.

ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲ್ಯಾಬ್‌ನಲ್ಲಿ ಆ್ಯಪಲ್ ಸಾಫ್ಟ್‌ವೇರ್ ಪ್ರೋಗ್ರಾಂ ತರಬೇತಿ ಪಡೆಯಲಿದ್ದಾರೆ. ಇದರಿಂದ ವಿಶ್ವದ ವಿವಿಧೆಡೆ ಉದ್ಯೋಗ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ.

ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಆ್ಯಪಲ್ ತಾಂತ್ರಿಕ ಜ್ಞಾನವನ್ನು ನೀಡುತ್ತದೆ. ಇದನ್ನು ಅಮೆರಿಕನ್ ಕಂಪನಿ ಕೂಪರ್‌ಟಿನೋ ಪ್ರಮಾಣೀಕರಿಸಿದೆ. ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿಯೂ ಉದ್ಯೋಗಾವಕಾಶಗಳನ್ನು ಪಡೆಯಬಹುದಾಗಿದೆ.

ಕಂಪನಿಯ ತರಬೇತುದಾರರು ಪ್ರತಿ ವಾರ ಎರಡರಿಂದ ಮೂರು ದಿನಗಳ ಕಾಲ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ. ಸದ್ಯ, ಲ್ಯಾಬ್‌ 20 ಕಂಪ್ಯೂಟರ್ ಸಿಸ್ಟಮ್‌ಗಳನ್ನು ಹೊಂದಿದ್ದು, ಪ್ರತಿ ಬ್ಯಾಚ್‌ನಲ್ಲಿ ಸುಮಾರು 40 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. 

ಮಂಡ್ಯ ವಿವಿ ಉಪಕುಲಪತಿ ಪುಟ್ಟರಾಜು ಮಾತನಾಡಿ, ಆ್ಯಪಲ್ ಇಂಕ್ ನೀಡಿರುವ ಪ್ರಮಾಣ ಪತ್ರಕ್ಕೆ ಹೆಚ್ಚಿನ ಮೌಲ್ಯವಿದೆ. ಇಂಜಿನಿಯರಿಂಗ್ ಪದವಿಗಿಂತಲೂ ಹೆಚ್ಚು ಬೆಲೆಯಿದೆ. ಇದು ವಿದ್ಯಾರ್ಥಿಗಳಿಗೆ ಪ್ರಪಂಚದಾದ್ಯಂತದ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗಗಳನ್ನು ಪಡೆಯಲು ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸುಂಕದ ವಿವಾದ, ರಷ್ಯಾದ ತೈಲ ಖರೀದಿ ಮೇಲಿನ ಒತ್ತಡದ ನಡುವೆ ನಾಳೆ ಭಾರತ-ಅಮೆರಿಕ ವ್ಯಾಪಾರ ಮಾತುಕತೆ!

ವಂತಾರಾಗೆ ಕ್ಲೀನ್ ಚಿಟ್, ವಿನಃ ಕಾರಣ ಕಳಂಕ ತರುವುದು ಬೇಡ: ಸುಪ್ರೀಂ ಕೋರ್ಟ್‌

ಹುಡುಕಿ, ಹುಡುಕಿ ಕೊಲ್ಲುವ ಉದ್ದೇಶವಿದ್ದರೆ, ಸಂಧಾನ ಮಾತುಕತೆ ಏಕೆ?: ಇಸ್ರೇಲ್ ವಿರುದ್ಧ ಕತಾರ್ ದೊರೆ ಆಕ್ರೋಶ

ಮುಷ್ತಾಕ್​ರಿಂದ ದಸರಾ ಉದ್ಘಾಟನೆ: ಹೈಕೋರ್ಟ್ ತೀರ್ಪು ಸ್ವಾಗತಿಸಿದ ಕಾಂಗ್ರೆಸ್; ಕಾನೂನು ತರುತ್ತೇವೆ ಎಂದ ಬಿಜೆಪಿ

ಮಾಜಿ ಸಂಸದನಿಗೆ ಸಂವಿಧಾನ ಗೊತ್ತಿಲ್ಲ ಅಂದ್ರೆ ಏನು? ಅವನೊಬ್ಬ ಮೂರ್ಖ: ಪ್ರತಾಪ್ ಸಿಂಹ ವಿರುದ್ಧ ಸಿಎಂ ಕಿಡಿ

SCROLL FOR NEXT