ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಅಧಿಕಾರಿಗಳ ಪ್ರಮಾದ: ನಿವೇಶನದ ದಾಖಲಾತಿ ಪಡೆಯಲು 93ರ ಇಳಿ ವಯಸ್ಸಿನಲ್ಲಿ ಬಿಡಿಎ ಕಚೇರಿಗೆ ನಿತ್ಯ ಅಲೆದಾಟ!

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳು ಮಾಡಿದ ಪ್ರಮಾದದಿಂದ, 93 ವರ್ಷದ ನಿವೃತ್ತ ಪಿಡಬ್ಲ್ಯೂಡಿ ಎಂಜಿನಿಯರ್ ಲಕ್ಷ್ಮಿ ನಾರಾಯಣ್ ಪ್ರತಿನಿತ್ಯ ಬಿಡಿಎ ಕಚೇರಿ ಅಲೆಯುವ ಪರಿಸ್ಥಿತಿ ಎದುರಾಗಿದೆ.

ಸಾಂದರ್ಭಿಕ ಚಿತ್ರ
Shilpa D
Updated On : 17 Jun 2023, 8:27 pm

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳು ಮಾಡಿದ ಪ್ರಮಾದದಿಂದ, 93 ವರ್ಷದ ನಿವೃತ್ತ ಪಿಡಬ್ಲ್ಯೂಡಿ ಎಂಜಿನಿಯರ್ ಲಕ್ಷ್ಮಿ ನಾರಾಯಣ್ ಪ್ರತಿನಿತ್ಯ ಬಿಡಿಎ ಕಚೇರಿ ಅಲೆಯುವ ಪರಿಸ್ಥಿತಿ ಎದುರಾಗಿದೆ.

ಕುಟುಂಬದ ಆಸ್ತಿಯ ಮೂಲ ಮಾಲೀಕತ್ವದ ದಾಖಲೆಗಳನ್ನು ಪಡೆಯಲು ಅವರು ಹೋರಾಟ ನಡೆಸಿ ಹತಾಶರಾಗಿದ್ದಾರೆ, ಒಂದು ವೇಳೆ ನಿವೇಶನದ ಮೂಲ ದಾಖಲೆಗಳು ಸಿಕ್ಕರೆ ತಾವು ಬದುಕಿದ್ದಾಗಲೇ ಅದನ್ನು ತಮ್ಮ ಮೂವರು ಹೆಣ್ಣುಮಕ್ಕಳಿಗೆ ವರ್ಗಾಯಿಸಬಹುದು ಎಂಬುದು ಅವರ ಆಸೆಯಾಗಿದೆ. 2012 ರಲ್ಲಿ ಅವರ ಪರವಾಗಿ ಹೈಕೋರ್ಟ್ ತೀರ್ಪು ನೀಡಿ, ಅವರಿಗೆ ಸಹಾಯ ಮಾಡುವಂತೆ ಬಿಡಿಎಗೆ ನಿರ್ದೇಶನ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ನಾರಾಯಣ್ ಅವರ ಸಹೋದರಿಗೆ ಅರ್ಕಾವತಿ ಏಳನೇ ಬ್ಲಾಕ್‌ನ ಜಕ್ಕೂರು ಗ್ರಾಮದಲ್ಲಿ 2013 ರಲ್ಲಿ ಬಿಡಿಎ ನಿವೇಶನ ಮಂಜೂರು ಮಾಡಲಾಗಿತ್ತು. ನಿವೇಶನ ಹಂಚಿಕೆ ವೇಳೆ ತಮ್ಮ ಅಕ್ಕನ ಹಿರಿತನ (ಪ್ರಯತ್ನಗಳ ಸಂಖ್ಯೆ) ಕಡೆಗಣಿಸಲಾಗಿದೆ ಎಂದು ಅವರು ಒಂದು ವರ್ಷದ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದರು.

Advertisement

Advertisement

ನ್ಯಾಯಾಲಯವು ಈ ವೇಳೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ತರಾಟೆಗೆ ತೆಗೆದುಕೊಂಡಿತು. ಕುಟುಂಬಕ್ಕೆ ನಿವೇಶನ ಮಂಜೂರು ಮಾಡುವಂತೆ ಆದೇಶಿಸಿತು, 2006 ರಲ್ಲಿ ಮಾಡಿದ ಹಂಚಿಕೆಗಳ ಬ್ಯಾಚ್‌ಗೆ ಸಮಾನವಾಗಿ ಹಂಚುವಂತೆ ನಿರ್ದೇಶಿಸಿತು.

ಇದನ್ನೂ ಓದಿ: ರಾಜಕಾರಣಿಗಳ ಲಾಬಿಗೆ ಸೊಪ್ಪು ಹಾಕದ ಸರ್ಕಾರ: ಬಿಡಿಎ ಅಧ್ಯಕ್ಷರಾಗಿ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ನೇಮಕ

ನಿಯಮಗಳ ಪ್ರಕಾರ (ಸೈಟ್ಸ್ ನಿಯಮಗಳ ಹಂಚಿಕೆ, 1984), ಮೂಲ ಆಸ್ತಿ ದಾಖಲೆಗಳು, ಸಂಪೂರ್ಣ ಮಾರಾಟದ ಪತ್ರ, ಗುತ್ತಿಗೆ-ಕಮ್-ಮಾರಾಟ ಒಪ್ಪಂದದ ದಿನಾಂಕದಿಂದ 10 ವರ್ಷಗಳ ಅವಧಿ ಮುಗಿದ ನಂತರ ಮಾತ್ರ ಹಂಚಿಕೆದಾರರಿಗೆ ಹಸ್ತಾಂತರಿಸಲಾಗುತ್ತದೆ. ನಾರಾಯಣ್ ಅವರ ಪ್ರಕರಣದಲ್ಲಿ ಈ ಅವಧಿಯು 2016 ರಲ್ಲಿ ಕೊನೆಗೊಂಡಿತು.

ಆದಾಗ್ಯೂ, ಅವರು ಇನ್ನೂ ದಾಖಲೆ ಪತ್ರ ಸಿಕ್ಕಿಲ್ಲ, ಅವರು, ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ  ಅಲೆದಾಡುವುದನ್ನು ಮುಂದುವರೆಸಿದ್ದಾರೆ. ಬಿಡಿಎಯಿಂದ ನನ್ನ ಸಂಪೂರ್ಣ ಮಾರಾಟ ಪತ್ರವನ್ನು ನಾನು ಇನ್ನೂ ಪಡೆದಿಲ್ಲ. ನನ್ನ ಮೃತ ಸಹೋದರಿಯ ಹೆಸರಿಗೆ ಮಂಜೂರು ಮಾಡಲಾದ 60x40 ಚದರ ಅಡಿ ನಿವೇಶನವನ್ನು  ನನ್ನ ಹೆಣ್ಣುಮಕ್ಕಳ  ಹೆಸರಿಗೆ ವರ್ಗಾಯಿಸಲು ನಾನು ಬಯಸಿದ್ದೆ ಎಂದು ಹೇಳಿದ್ದಾರೆ.

ಕಡ್ಡಾಯ ಹತ್ತು ವರ್ಷಗಳ ಗುತ್ತಿಗೆ ಕಮ್ ಮಾರಾಟದ ಅವಧಿ ಮುಗಿದ ನಂತರವೇ ಸಂಪೂರ್ಣ ಮಾರಾಟ ಪತ್ರವನ್ನು ಹಸ್ತಾಂತರಿಸಬೇಕು ಎಂಬ ಬಿಡಿಎ ನಿಯಮವಿದೆ. ನನ್ನ ಹತ್ತು ವರ್ಷಗಳ ಅವಧಿಯು 2016 ರಲ್ಲಿಯೇ ಕೊನೆಗೊಂಡಿದೆ ಎಂದು ಅನೇಕ ಕಮಿಷನರ್‌ಗಳಿಗೆ ನಾನು ಲೆಕ್ಕವಿಲ್ಲದಷ್ಟು ಬಾರಿ ಹೇಳಿ ಮನದಟ್ಟು ಮಾಡಿದ್ದೇನೆ. ಆದರೆ ಈ ಬಗ್ಗೆ ಯಾರು ಗಮನ ಹರಿಸುತ್ತಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಬಿಡಿಎನಿಂದ ಕೆಂಪೇಗೌಡ ಲೇಔಟ್‌ನಲ್ಲಿ ಬೆಟರ್‌ಮೆಂಟ್ ಶುಲ್ಕ ಸಂಗ್ರಹ

ನನ್ನ ವಯಸ್ಸಿನ ಪ್ರಕಾರ ದೈನಂದಿನ ಜೀವನ ನಡೆಸಿ ಜೀವಂತವಾಗಿರುವುದು ಒಂದು ಪವಾಡ. ನನ್ನ ಹೆಣ್ಣುಮಕ್ಕಳಿಗಾಗಿ ನಾನು ಇದನ್ನು ವರ್ಗಾವಣೆ ಮಾಡಲು ಬಯಸುತ್ತಿದ್ದೇನೆ, ಮುಂದಿನ ತಿಂಗಳು ಈ ಹೋರಾಟ  ಅಂತ್ಯವಾದರೂ, ನಾರಾಯಣ್ ಅದರ ಬಗ್ಗೆ ಸಮಾಧಾನವಿಲ್ಲ. ಬಿಡಿಎ ಅಧಿಕಾರಿಗಳು ದಾಖಲೆ ಪತ್ರವನ್ನು ಜುಲೈ 17, 2023 ರಂದು ನೀಡಲು ಬಯಸಿದ್ದಾರೆ.

ಆದರೆ ಇದು ಆಷಾಢ ಮಾಸ ಹೀಗಾಗಿ ಶುಭಕರವಲ್ಲ ಆ ಸಮಯದಲ್ಲಿ ನಾನು ಯಾವುದೇ ನೋಂದಣಿ ಮಾಡಲು ಬಯಸುವುದಿಲ್ಲ. ಒಂದು ತಿಂಗಳ ಕಾಲಾವಕಾಶ ನೀಡುವಂತೆ ಬಿಡಿಎ ಅಧಿಕಾರಿಗಳಿಗೆ ಇತ್ತೀಚೆಗೆ ಮನವಿ ಮಾಡಿದ್ದೇನೆ. ಅವರು ಏನು ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಶೀಘ್ರವೇ ತಿಳಿಯಲಿದೆ ಎಂದಿದ್ದಾರೆ.

ನಾವು ನಿಯಮಗಳ ಪ್ರಕಾರ ಹೋಗಬೇಕು ಮತ್ತು ಜುಲೈ 17 ರಂದು ಅವರಿಗೆ ದಾಖಲೆ ಪತ್ರಗಳನ್ನು ನೀಡಲು ಉದ್ದೇಶಿಸಲಾಗಿತ್ತು. ಆದರೆ ಅವರು ಒಂದು ತಿಂಗಳ ಕಾಲ ಮುಂದೂಡುವಂತೆ ಕೇಳಿದ್ದಾರೆ. ಹೀಗಾಗಿ ನಾನು ಕೇಸ್‌ವರ್ಕರ್‌ಗೆ ಹೇಳುತ್ತೇನೆ, ಒಂದು ತಿಂಗಳ ಕಾಲ ಮುಂದೂಡಲು ಆಯುಕ್ತರಿಗೆ ವಿನಂತಿಸುತ್ತೇನೆ ಎಂದು ಹಿರಿಯ ಬಿಡಿಎ ಅಧಿಕಾರಿಯೊಬ್ಬರು ದಿ ನ್ಯೂನಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments