ರಾಜ್ಯ

ಅಪಘಾತಗಳನ್ನು ತಡೆಯಲು ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇಯಲ್ಲಿ ಸ್ಕೈವಾಕ್‌ ಗಳ ನಿರ್ಮಿಸಲು ಚಿಂತನೆ!

Ramyashree GN

ಬೆಂಗಳೂರು: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಪ್ರತಿ ಹಳ್ಳಿಯಲ್ಲಿ ಸ್ಕೈವಾಕ್ ನಿರ್ಮಿಸಲು ಯೋಜಿಸಿದೆ.

119-ಕಿಮೀ ಉದ್ದದ ಎಕ್ಸ್‌ಪ್ರೆಸ್‌ವೇನಲ್ಲಿ ಜನರು ರಸ್ತೆ ದಾಟದಂತೆ ಅಧಿಕಾರಿಗಳು ಎರಡೂ ಬದಿಯಲ್ಲಿ ಜಾಲರಿ ಬೇಲಿ ಅಳವಡಿಸಿದ್ದರೂ, ಸ್ಥಳೀಯರು ರಸ್ತೆ ದಾಟಲು ಹಲವೆಡೆ ಬೇಲಿ ಒಡೆದು ಹಾನಿಗೊಳಿಸಿದ್ದು, ಅಪಘಾತಗಳು ಸಂಭವಿಸುತ್ತಿವೆ.

ಇದೀಗ ಈ ಅಪಘಾತಗಳು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ ಎಂದು ಮೂಲಗಳು ತಿಳಿಸಿವೆ. ಪೊಲೀಸರಿಗೆ ದೂರು ನೀಡಿದರೂ ಅಕ್ರಮವಾಗಿ ರಸ್ತೆ ದಾಟುತ್ತಿರುವುದನ್ನು ಪರಿಶೀಲಿಸುವುದು ಕಷ್ಟಕರವಾಗಿದೆ. ಜನರು ಮತ್ತು ವಾಹನಗಳ ಸುರಕ್ಷತೆಯ ದೃಷ್ಟಿಯಿಂದ, ಹೆದ್ದಾರಿ ಪ್ರಾಧಿಕಾರವು ಸ್ಕೈವಾಕ್‌ಗಳನ್ನು ನಿರ್ಮಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

55 ಕಿಮೀ ಉದ್ದದ ಎಕ್ಸ್‌ಪ್ರೆಸ್‌ವೇ ಮಂಡ್ಯ ಜಿಲ್ಲೆಯ ಮೂಲಕ ಹಾದು ಹೋಗಿದ್ದು, ಇಲ್ಲಿ 18 ಸ್ಕೈವಾಕ್‌ಗಳನ್ನು ಯೋಜಿಸಲಾಗಿದೆ. ಅಲ್ಲದೆ, ಮೈಸೂರು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ 21 ಸ್ಕೈವಾಕ್‌ಗಳನ್ನು ನಿರ್ಮಿಸಲಾಗುವುದು. ಸ್ಕೈವಾಕ್‌ಗಳ ನಿರ್ಮಾಣಕ್ಕೆ ಸ್ಥಳಗಳನ್ನು ಗುರುತಿಸಲಾಗಿದೆ. ಕೆಲವೆಡೆ ಭೂಸ್ವಾಧೀನದ ಅವಶ್ಯಕತೆ ಇದೆ ಎಂಬುದು ಪ್ರಾಧಿಕಾರದ ಅಧಿಕಾರಿಗಳ ಮಾತು.

ಕೆಲವೆಡೆ ಅಂಡರ್‌ಪಾಸ್‌ಗಳನ್ನು ನಿರ್ಮಿಸಲಾಗಿದ್ದು, ಗ್ರಾಮಸ್ಥರಿಗೆ ತೊಂದರೆಯಾಗಿದೆ.

'ಅವರ ಗಮ್ಯವನ್ನು ತಲುಪಲು ಎರಡು ಮೂರು ಕಿಮೀ ಸುತ್ತುಬಳಸಿ ಹೋಗುವುದು ಅನಿವಾರ್ಯವಾಗಿದೆ. ಹೀಗಿರುವಾಗ ಸ್ಕೈವಾಕ್‌ಗಳು ಸಹಕಾರಿಯಾಗಲಿವೆ’ ಎನ್ನುತ್ತಾರೆ ಸುಂಡಹಳ್ಳಿ ನಿವಾಸಿ ಬಸವರಾಜು.

SCROLL FOR NEXT