ಸಂಗ್ರಹ ಚಿತ್ರ 
ರಾಜ್ಯ

ಒನ್'ವೇನಲ್ಲಿ ನುಗ್ಗಿ ಬೈಕ್'ಗೆ ಟಿಪ್ಪರ್ ಡಿಕ್ಕಿ: ಇಬ್ಬರು ಯುವಕರ ಸಾವು

ಒನ್ ವೇನಲ್ಲಿ ಬಂದು ಬೈಕ್'ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಣ ಇಬ್ಬರು ಹೋಟೆಲ್ ಕೆಲಸಗಾರರು ಸಾವನ್ನಪ್ಪಿರುವ ಘಟನೆ ಪುಲಕೇಶಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು: ಒನ್ ವೇನಲ್ಲಿ ಬಂದು ಬೈಕ್'ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಣ ಇಬ್ಬರು ಹೋಟೆಲ್ ಕೆಲಸಗಾರರು ಸಾವನ್ನಪ್ಪಿರುವ ಘಟನೆ ಪುಲಕೇಶಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ತಮಿಳುನಾಡಿನ ವೆಲ್ಲೂರು ಮೂಲದ ಯೂಸುಫ್ ಖಾನ್ ಮತ್ತು ನೇಪಾಳದ ಪ್ರಜೆ ಪರೇಶ್ ಎಂದು ಗುರುತಿಸಲಾಗಿದೆ.

ಇಬ್ಬರೂ 19 ವರ್ಷ ವಯಸ್ಸಿನವರಾಗಿದ್ದು, ಪುಲಿಕೇಶಿ ನಗರದ ಎಂಎಂ ರಸ್ತೆಯಲ್ಲಿರುವ ಗ್ರ್ಯಾಂಡ್ ಹೈದರಾಬಾದ್ ಬಿರಿಯಾನಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಯೂಸುಫ್ ಮತ್ತು ಪರೇಶ್ ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಲಾಜರ್ ರಸ್ತೆಯಲ್ಲಿ ಒನ್ ವೇ ಅಲ್ಲಿ ಬಂದ ಟಿಪ್ಪರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೈಕ್ ನಿಂದ ಸವಾರರು ಕೆಳಗೆ ಬೀಳುತ್ತಿದ್ದಂತೆಯೇ ಟಿಪ್ಪರ್ ಲಾರಿ ಇಬ್ಬರ ಮೇಲೆ ಹರಿದಿದೆ. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಚಾಲಕ ಸುನೀಲ್ ಬಾಬು ರಾಥೋಡ್ (23) ಎಂಬಾತನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಈ ಸಂಬಂಧ ಪುಲಕೇಶಿ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Indians sanctioned: ಇರಾನ್‌ನ ತೈಲ ವ್ಯಾಪಾರಕ್ಕೆ ನೆರವು, ಇಬ್ಬರು ಭಾರತೀಯರು ಸೇರಿ 50 ಕಂಪನಿಗಳಿಗೆ ನಿರ್ಬಂಧ ವಿಧಿಸಿದ ಅಮೆರಿಕ!

Airstrikes in Kabul: ಭಾರತ- ತಾಲಿಬಾನ್ ಮತ್ತಷ್ಟು ಹತ್ತಿರ, 'ಹೊಟ್ಟೆಗೆ ಬೆಂಕಿ ಬಿದ್ದಂಗೆ' ಆಡ್ತಿರುವ ಪಾಕಿಸ್ತಾನ!

'ಸೂಪರ್ ಸ್ಟಾರ್ ಗಳು 8 ಗಂಟೆ ಮಾತ್ರ ಕೆಲಸ ಮಾಡ್ತಾರೆ, ಅದರ ಬಗ್ಗೆ ಸುದ್ದಿನೇ ಇಲ್ಲ': Kalki, Spirit ಸಿನಿಮಾಗಳಿಂದ ಕೊಕ್, ಕೊನೆಗೂ ಮೌನ ಮುರಿದ ದೀಪಿಕಾ ಪಡುಕೋಣೆ

ದ್ವೇಷ ಭಾಷಣ: SDPI ಮುಖಂಡ ರಿಯಾಜ್ ಕಡಂಬುಗೆ 14 ದಿನ ನ್ಯಾಯಾಂಗ ಬಂಧನ!

'ನಮ್ಮ ಸ್ವಂತ ದೇಶದಲ್ಲೇ ರಕ್ಷಣೆ ಇಲ್ಲ': ರೈಡ್ ಕ್ಯಾನ್ಸಲ್ ಮಾಡಿದ್ದಕ್ಕೇ Bengaluru Auto Driver ಕಿರುಕುಳ, ಈಶಾನ್ಯ ಭಾರತದ ಮಹಿಳೆ ಆರೋಪ

SCROLL FOR NEXT