ರಾಜ್ಯ

ಕೆಆರ್ ಪುರಂನಿಂದ ವೈಟ್ ಫೀಲ್ಡ್ ಗೆ ಮೆಟ್ರೋ ರೈಲು ಸಂಚಾರ ಸಮಯ ಕೇವಲ 22 ನಿಮಿಷ!

Nagaraja AB

ಬೆಂಗಳೂರು: ಕೆಆರ್ ಪುರಂ ಮತ್ತು ವೈಟ್ ಫೀಲ್ಡ್ ನಡುವಣ ಕೇವಲ 22 ನಿಮಿಷಗಳಲ್ಲಿ ಸಂಚರಿಸಬಹುದಾದ ಮೆಟ್ರೋ ರೈಲನ್ನು ಶೀಘ್ರದಲ್ಲಿಯೇ ಆರಂಭಿಸಲಾಗುತ್ತಿದೆ. ಹೊಸ ಮಾರ್ಗದಲ್ಲಿ ಪ್ರತಿ 12 ನಿಮಿಷಕ್ಕೊಮ್ಮೆ ಒಂದು ರೈಲು ಸೇವೆ ಆರಂಭಿಸಲು ಬಿಎಂಆರ್ ಸಿಎಲ್ ಯೋಜಿಸುತ್ತಿದೆ. 

ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಬಿಎಂಆರ್ ಸಿಎಲ್ ಎಂಡಿ ಅಂಜುಮ್ ಪರ್ವೇಜ್, ಮಂಗಳವಾರ ವೈಟ್ ಫೀಲ್ಡ್ ನಿಂದ ಕೆಆರ್ ಪುರಂವರೆಗೂ (13.71 ಕಿಲೋ) ರೈಲಿನ ಸಂಚಾರ ನಡೆಸಲಾಯಿತು. ನಾನು ರೈಲಿನಲ್ಲಿದ್ದೆ, ಈ ಮಾರ್ಗದ ಎಲ್ಲಾ ನಿಲ್ದಾಣಗಳಲ್ಲಿ ನಿಲುಗಡೆ ಮಾಡಿಯೂ ವೈಟ್ ಫೀಲ್ಡ್ ತಲುಪಲು ಕೇವಲ 22 ನಿಮಿಷ ತೆಗೆದುಕೊಂಡಿತು ಎಂದರು. 

ಬಿಎಂಆರ್‌ಸಿಎಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಾರ್ಯನಿರ್ವಾಹಕ ನಿರ್ದೇಶಕ ಎಎಸ್ ಶಂಕರ್, ಮಾತನಾಡಿ, ಹೊಸ ಮಾರ್ಗದಲ್ಲಿ ಪ್ರತಿ 12 ನಿಮಿಷಕ್ಕೊಮ್ಮೆ ರೈಲು ಸಂಚಾರ ಆರಂಭಿಸಲು ಎದುರು ನೋಡುತ್ತಿದ್ದೇವೆ. ಈ ಸಂಬಂಧ ಶೀಘ್ರದಲ್ಲಿಯೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ಪ್ರತಿದಿನ 1 ಲಕ್ಷದಿಂದ 1.5 ಲಕ್ಷ ಪ್ರಯಾಣಿಕರು ರೈಲುಗಳನ್ನು ಬಳಸುವ ನಿರೀಕ್ಷೆಯಿದೆ. ವೈಟ್ ಫೀಲ್ದ್ ಕಡೆಗೆ ಸಾಗುವ ಪ್ರಯಾಣಿಕರ ವಾಹನಗಳಿಗೆ ಕೆಆರ್ ಪುರಂನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಯೋಜಿಸಲಾಗುತ್ತಿದೆ. ಕೆಆರ್ ಪುರಂ ಮತ್ತು ಬೈಯಪ್ಪನಹಳ್ಳಿ ನಡುವೆ ಬಿಎಂಟಿಸಿ ಮೂಲಕ ಫೀಡರ್ ಬಸ್‌ ವ್ಯವಸ್ಥೆ ಮಾಡಲು ಬಿಎಂಆರ್ ಸಿಎಲ್ ಯೋಜಿಸಿದೆ ಎಂದರು. 

ನಿಲ್ದಾಣಗಳಲ್ಲಿ ನಡೆಯುತ್ತಿರುವ ಕೆಲಸದ ಬಗ್ಗೆ ವಿವರಿಸಿದ ಶಂಕರ್, 12 ನಿಲ್ದಾಣಗಳಲ್ಲಿ ಪೇಂಟಿಂಗ್ ಕೆಲಸಗಳು ಮತ್ತು ಸಮಗ್ರ ಸ್ವಚ್ಛತಾ ಕಾರ್ಯ ಸೇರಿದಂತೆ ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ.ಇದು ನೇರಳ ಮಾರ್ಗದ ವಿಸ್ತರಿತಾ ಮಾರ್ಗವಾಗಿದ್ದು, ಕ್ಯೂಆರ್ ಕೋಡ್ ಬುಕಿಂಗ್ ಜನಪ್ರಿಯವಾಗಿರುವುದರಿಂದ, ನಾವು ಹೊಸ ಟೋಕನ್‌ಗಳನ್ನು ಖರೀದಿಸಬೇಕಾಗಿಲ್ಲ ಎಂದು ಅವರು ತಿಳಿಸಿದರು.

SCROLL FOR NEXT