ಸಾಂದರ್ಭಿಕ ಚಿತ್ರ 
ರಾಜ್ಯ

ಕರ್ನಾಟಕ ವಿಧಾನಸಭೆ ಚುನಾವಣೆ: ಮತದಾರರ ಪಟ್ಟಿಯಲ್ಲಿ 17,000 ಶತಾಯುಷಿಗಳು!

ಮೈಸೂರು ರಾಜ್ಯದ ಕಾಲದಲ್ಲೂ ಕರ್ನಾಟಕದ ಎಲ್ಲಾ ಚುನಾವಣೆಗಳನ್ನು ನೋಡಿದ ಕೆಲವೇ ಕೆಲವು ಮತದಾರಿದ್ದಾರೆ. ಈ ವರ್ಷದ ರಾಜ್ಯ ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯಲ್ಲಿ 17,000 ಕ್ಕೂ ಹೆಚ್ಚು ನೋಂದಾಯಿತ ಮತದಾರರು 100 ವರ್ಷಕ್ಕಿಂತ ಮೇಲ್ಪಟ್ಟವರು.

ಬೆಂಗಳೂರು: ಮೈಸೂರು ರಾಜ್ಯದ ಕಾಲದಲ್ಲೂ ಕರ್ನಾಟಕದ ಎಲ್ಲಾ ಚುನಾವಣೆಗಳನ್ನು ನೋಡಿದ ಕೆಲವೇ ಕೆಲವು ಮತದಾರಿದ್ದಾರೆ. ಈ ವರ್ಷದ ರಾಜ್ಯ ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯಲ್ಲಿ 17,000 ಕ್ಕೂ ಹೆಚ್ಚು ನೋಂದಾಯಿತ ಮತದಾರರು 100 ವರ್ಷಕ್ಕಿಂತ ಮೇಲ್ಪಟ್ಟವರು.

ಕರ್ನಾಟಕದಲ್ಲಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಪ್ರಕಾರ, ಇದು ಇಲ್ಲಿಯವರೆಗೆ ರಾಜ್ಯದಲ್ಲಿ ಅತಿ ಹೆಚ್ಚು ಶತಾಯುಷಿ ಮತದಾರರ ಸಂಖ್ಯೆಯಾಗಿದೆ.

ರಾಜ್ಯದಲ್ಲಿ ಒಟ್ಟು 5.21 ಕೋಟಿ ನೋಂದಾಯಿತ ಮತದಾರರಿದ್ದು, ಅವರಲ್ಲಿ 2.59 ಕೋಟಿ ಮಹಿಳೆಯರು ಇದ್ದಾರೆ. ಮೊದಲ ಬಾರಿಗೆ ಮತದಾನ ಮಾಡುತ್ತಿರುವವರು 9.17 ಲಕ್ಷ ಮತ್ತು ತೃತೀಯ ಲಿಂಗ ಮತದಾರರು 4,699, ಇವರಲ್ಲದೆ 16,973 ಶತಾಯುಷಿಗಳಿದ್ದು, ಅವರಲ್ಲಿ 9,985 ಮಹಿಳೆಯರು ಇದ್ದಾರೆ.

ಈ ಶತಾಯುಷಿಗಳಲ್ಲಿ ಹಲವರು ಮತದಾನ ಮಾಡಲು ಹೋಗಬಹುದು., ಆದರೆ ಅವರಲ್ಲಿ ಅನೇಕರು ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಿಂದ ತಮ್ಮ ಮನೆಯಿಂದ ಹೊರಬರಲು ಸಾಧ್ಯವಾಗದಿರಬಹುದು.

ಕೆಲವರು 80 ವರ್ಷಕ್ಕಿಂತ ಮೇಲ್ಪಟ್ಟ 12.15 ಲಕ್ಷ ನೋಂದಾಯಿತ ಮತದಾರರ ಭಾಗವಾಗಿದ್ದಾರೆ. ಅಂತಹ ಹಿರಿಯ ನಾಗರಿಕರಿಗೆ ಸಹಾಯ ಮಾಡಲು, ಚುನಾವಣಾ ಆಯೋಗವು ಈ ಬಾರಿ ಪೋಸ್ಟಲ್ ಬ್ಯಾಲೆಟ್  ಪರಿಚಯಿಸಿದೆ, ಅಲ್ಲಿ ಅವರು ಮನೆಯಿಂದಲೇ ಮತ ಚಲಾಯಿಸಬಹುದು.

ಬೆಂಗಳೂರು ಜಿಲ್ಲೆ (ಬೆಂಗಳೂರು ಗ್ರಾಮಾಂತರ ಮತ್ತು ಬಿಬಿಎಂಪಿ ಮಿತಿಗಳನ್ನು ಒಳಗೊಂಡಂತೆ) 4,081 ಶತಾಯುಷಿ ಮತದಾರರನ್ನು ಹೊಂದಿದೆ. ಮೈಸೂರು (1,744) ಮತ್ತು ಬೆಳಗಾವಿ (1,536) ನಂತರದ ಸ್ಥಾನದಲ್ಲಿವೆ. ಈ ಮೂರು ಜಿಲ್ಲೆಗಳು ಎಲ್ಲಾ ಶತಾಯುಷಿ ಮತದಾರರಲ್ಲಿ ಶೇ. 40 ರಷ್ಟಿದ್ದಾರೆ . ಕೊಡಗಿನಲ್ಲಿ ಕನಿಷ್ಠ ಅಂದರೆ 112. ಗದಗದಲ್ಲಿ 122, ಯಾದಗಿರಿಯಲ್ಲಿ 142, ವಿಜಯನಗರದಲ್ಲಿ 186 ಮತ್ತು ಉತ್ತರ ಕನ್ನಡದಲ್ಲಿ 193 ಮತದಾರರಿದ್ದಾರೆ.

'ಶತಾಯುಷಿಗಳಿಗೆ ಪ್ರಜಾಪ್ರಭುತ್ವದ ಮೌಲ್ಯ ಗೊತ್ತಿದೆ'

ರಾಜ್ಯದಲ್ಲಿ ಮೊದಲ ವಿಧಾನಸಭಾ ಚುನಾವಣೆ  ಮೈಸೂರು ರಾಜ್ಯವಾಗಿದ್ದಾಗ ಅಂದರೆ ಮಾರ್ಚ್ 1951 ರಲ್ಲಿ ನಡೆಯಿತು. ಅಂದಿನಿಂದ, ರಾಜ್ಯವು 15 ವಿಧಾನಸಭೆ ಮತ್ತು 17 ಲೋಕಸಭೆ ಚುನಾವಣೆಗಳನ್ನು ಕಂಡಿದೆ.  90 ವರ್ಷ ವಯಸ್ಸಾದವರು ಈ ಎಲ್ಲಾ ಚುನಾವಣೆಗಳನ್ನು ನೋಡಿದ್ದಾರೆ. ಅವರು ಮತ ಹಾಕಿದ್ದಾರೋ ಇಲ್ಲವೋ ಗೊತ್ತಿಲ್ಲ ಆದರೆ  ಖಂಡಿತ ಚುನಾವಣೆ ನೋಡಿದ್ದಾರೆ.

100 ವರ್ಷ ಮೇಲ್ಪಟ್ಟವರು ಈ ಚುನಾವಣೆಯಲ್ಲಿ ಮತ ಚಲಾಯಿಸಬೇಕೆಂದು ನಾವು ಬಯಸುತ್ತೇವೆ,’’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಈ ಹಿರಿಯ ಮತದಾರರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾಗಿದ್ದಾರೆ.  ಅವರು ಪ್ರಜಾಪ್ರಭುತ್ವದ ಮೌಲ್ಯವನ್ನು ತಿಳಿದಿದ್ದಾರೆ. ಅವರಿಗೆ ಆರೋಗ್ಯ ಸಮಸ್ಯೆಗಳಿಲ್ಲದಿದ್ದರೆ ಅವರು  ಮತ ಚಲಾಯಿಸುತ್ತಾರೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT