ರಾಜ್ಯ

ಹಲ್ಲಿನಿಂದ ಕಚ್ಚಿ ಮೇಕೆ ಬಲಿ: ಪ್ರಾಣಿ ಹಕ್ಕುಗಳ ಹೋರಾಟಗಾರಿಂದ ವಿರೋಧ

Manjula VN

ಬೆಂಗಳೂರು: ಅಂಗಳ ಪರಮೇಶ್ವರಿ ದೇವಸ್ಥಾನದಲ್ಲಿ ಇಬ್ಬರು ವ್ಯಕ್ತಿಗಳು ಹಲ್ಲಿನಿಂದ ಮೇಕೆಯನ್ನು ತುಂಡರಿಸಿ ಬಲಿದಾನ ನೀಡಿದ್ದು, ಈ ಘಟನೆಗೆ ಪ್ರಾಣಿ ಹಕ್ಕುಹಳ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಹೊಸ ಬೈಯಪ್ಪನಹಳ್ಳಿ ಸಮೀಪದ ಕೃಷ್ಣನಗರದಲ್ಲಿರುವ ಅಂಗಳ ಪರಮೇಶ್ವರಿ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿರುವ ಇಬ್ಬರು ವ್ಯಕ್ತಿಗಳು, ಬಲಿಕೊಡಲು ಇರಿಸಲಾಗಿದ್ದ ಮೇಕೆಯನ್ನು ತಮ್ಮ ಹಲ್ಲಿನಿಂದ ತುಂಡರಿಸಿದ್ದಾರೆ. ಇದನ್ನು ಗಮನಿಸಿದ ಸೊಸೈಟಿ ಫಾರ್ ಪ್ರಿವೆನ್ಷನ್ ಆಫ್ ಕ್ರೂಯೆಲ್ಟಿ ಟು ಅನಿಮಲ್ಸ್'ನ ಸದಸ್ಯ ನಿತಿನ್ ಜೈನ್ ಅವರು, ತಮ್ಮ ಮೊಬೈಲ್ ನಿಂದ ವಿಡಿಯೋ ಮಾಡಿಕೊಂಡಿದ್ದು, ಮತ್ತೊಬ್ಬ ಸದಸ್ಯ ಹರೀಶ್ ಕೆಬಿ ಅವರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಪೊಲೀಸರಿಗೆ ದೂರು ನೀಡುವಂತೆ ಹರೀಶ್ ಅವರು ಸೂಚಿಸಿದ್ದು, ನಿತಿನ್ ಅವರು ದೂರು ದಾಖಲಿಸಿದ್ದಾರೆ. ದೂರು ಹಿನ್ನೆಲೆಯಲ್ಲಿ ಬೈಯಪ್ಪನಹಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ, ವ್ಯಕ್ತಿಗಳ ಹೆಸರು ಹಾಗೂ ದೇವಸ್ಥಾನದ ಟ್ರಸ್ಟ್ ಸದಸ್ಯರ ಹೆಸರನ್ನು ಹೆಸರಿಸಿಲ್ಲ. ಬದಲಾಗಿ ಅಪರಿಚಿತ ವ್ಯಕ್ತಿಗಳು ಎಂದು ದಾಖಲಿಸಿದ್ದಾರೆಂದು ಹರೀಶ್ ಕೆಬಿ ಅವರು ಹೇಳಿದ್ದಾರೆ.

ಮೇಕೆಯನ್ನು ಹಲ್ಲಿನಿಂದ ಕಡಿದು ದೇಹ ಹಾಗೂ ತಲೆಯನ್ನು ಬೇರ್ಪಡಿಸಲಾಗಿದೆ. ಇದು ಪ್ರಾಣಿ ಹಿಂಸೆಯಲ್ಲದೆ ಬೇರೇನೂ ಅಲ್ಲ. ಹೀಗಾಗಿ ಪೊಲೀಸರು ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಘಟನೆ ಬಳಿಕ ಪ್ರಾಣಿ ಹಕ್ಕುಗಳ ಹೋರಾಟಗಾರರು, ಇದೀಗ ಪಶುಸಂಗೋಪನಾ ಇಲಾಖೆ, ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್, ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲು ಮುಂದಾಗಿದ್ದು, ದೇವಸ್ಥಾನಗಳು ಮತ್ತು ಗ್ರಾಮೋತ್ಸವಗಳಲ್ಲಿ ಪ್ರಾಣಿ ಬಲಿಯನ್ನು ತಡೆಯುವಂತೆ ಮತ್ತು ಕರ್ನಾಟಕ ಪ್ರಾಣಿ ಬಲಿ ತಡೆ ಕಾಯ್ದೆ 1959 ಅಡಿಯಲ್ಲಿ ನಿಯಮಗಳನ್ನು ಅನುಸರಿಸುವಂತೆ ಮನವಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ಪ್ರಾಣಿಗಳ ಮೇಲಿನ ಕ್ರೌರ್ಯ (ಸ್ಲಾಟರ್ ಹೌಸ್) ನಿಯಮಗಳು 2020, ಮತ್ತು ಐಪಿಸಿ ಸೆಕ್ಷನ್ 429, ಪಂಚಾಯತ್ ಮಟ್ಟದಲ್ಲಿ ಮತ್ತು ಪುರಸಭೆಯ ವ್ಯಾಪ್ತಿಯಲ್ಲಿರುವ ಅನೇಕ ದೇವಾಲಯಗಳು ಬೇಸಿಗೆಯಲ್ಲಿ ಸಮಯದಲ್ಲಿ ಬಲಿದಾನಗಳ ಸಂಖ್ಯೆ ಹೆಚ್ಚಾಗುತ್ತವೆ.

SCROLL FOR NEXT