ರಾಜ್ಯ

ಬೆಳಗಾವಿ: 8 ಜನರ ಮೇಲೆ ಬೀದಿ ನಾಯಿ ದಾಳಿ

Srinivasamurthy VN

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ 8 ಜನರ ಮೇಲೆ ಬೀದಿ ನಾಯಿಯೊಂದು ದಾಳಿ ಮಾಡಿದ್ದು, ಪಾಲಿಕೆ ಅಧಿಕಾರಿಗಳ ವಿರುದ್ಧ ಜನ ಹಿಡಿ ಶಾಪ ಹಾಕುತ್ತಿದ್ದಾರೆ.

ಬೆಳಗಾವಿಯ ದ್ವಾರಕಾ ನಗರದ ಮಂಡೋಲಿ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ಬೀದಿ ನಾಯಿಯೊಂದು ಏಕಾಏಕಿ ಹಿಂಸಾಚಾರಕ್ಕೆ ತಿರುಗಿ ಎಂಟಕ್ಕೂ ಹೆಚ್ಚು ಜನರಿಗೆ ಕಚ್ಚಿದೆ. ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ನಾಯಿ ದಾಳಿ ಕುರಿತು ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಬೀದಿ ನಾಯಿಯನ್ನು ಹಿಡಿಯಲು ಮಹಾನಗರ ಪಾಲಿಕೆ ನಿಯೋಜಿಸಿದ್ದ ತಜ್ಞರ ತಂಡ ಅದೇ ಸಂಜೆ ಅದನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿ ಸಿಟಿ ಕಾರ್ಪೊರೇಷನ್ (ಬಿಸಿಸಿ) ಮೂಲಗಳ ಪ್ರಕಾರ, ನಾಯಿ ರೇಬೀಸ್ ಕಾಯಿಲೆಯಿಂದ ಬಳಲುತ್ತಿದೆ ಎಂದು ಹೇಳಲಾಗಿದೆ. ಎಲ್ಲಾ ಗಾಯಾಳುಗಳಿಗೆ ಆ್ಯಂಟಿ ರೇಬಿಸ್ ಲಸಿಕೆ ಹಾಕಿಸಿಕೊಳ್ಳಲು ತಿಳಿಸಲಾಗಿದೆ. ಸೋಂಕಿತ ನಾಯಿಯನ್ನು ಶ್ರೀನಗರದ ಆಶ್ರಯ ಕೇಂದ್ರದಲ್ಲಿ ಬೋನಿನಲ್ಲಿ ಇರಿಸಲಾಗಿದೆ ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
 

SCROLL FOR NEXT