ಬೆಂಗಳೂರು ಹಬ್ಬ. 
ರಾಜ್ಯ

ಕಬ್ಬನ್ ಪಾರ್ಕ್ ನಲ್ಲಿ ಸಂಗೀತ-ನೃತ್ಯ ಪ್ರದರ್ಶನ: ಅಪಾರ ಸಂಖ್ಯೆಯ ಜನರ ಆಕರ್ಷಿಸುತ್ತಿರುವ ಬೆಂಗಳೂರು ಹಬ್ಬ

ಕಬ್ಬನ್ ಪಾರ್ಕ್‌ನಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ಬೆಂಗಳೂರು ಹಬ್ಬ ಅಪಾರ ಸಂಖ್ಯೆಯ ಜನರನ್ನು ಆಕರ್ಷಿಸುತ್ತಿದೆ.

ಬೆಂಗಳೂರು: ಕಬ್ಬನ್ ಪಾರ್ಕ್‌ನಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ಬೆಂಗಳೂರು ಹಬ್ಬ ಅಪಾರ ಸಂಖ್ಯೆಯ ಜನರನ್ನು ಆಕರ್ಷಿಸುತ್ತಿದೆ.

ಬೆಂಗಳೂರು ಹಬ್ಬದ ಅಂಗವಾಗಿ ಉದ್ಯಾನವನದಲ್ಲಿ ಲೈವ್ ಮ್ಯೂಸಿಕ್, ಡ್ಯಾನ್ಸ್, ಬೀದಿ ನಾಟಕಗಳು ಮತ್ತು ಕರ್ನಾಟಕದ ಸಂಸ್ಕೃತಿಯನ್ನು ಪ್ರದರ್ಶಿಸುವ ಕಲಾ ಪ್ರದರ್ಶನಗಳು ಮತ್ತು ಪುಸ್ತಕ ಮತ್ತು ಆಹಾರ ಮೇಳಗಳನ್ನು ನಡೆಸಲಾಗುತ್ತಿದೆ.

ಉದ್ಯಾನದ ಹಾದಿಗಳ ಉದ್ದಕ್ಕೂ ರೇಲಿಂಗ್‌ಗಳಲ್ಲಿ ವರ್ಣಚಿತ್ರಗಳು ಮತ್ತು ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಹುಲಿವೇಷ ಮತ್ತು "ಕರಡಿವೇಷ" ಧರಿಸಿರುವ ಕಲಾವಿದರೊಂದಿಗೆ ಜನರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.

ಕೋಲಾರದ ತಂಡವೊಂದು ಜಡೆ ಕೋಲಾಟ ಪ್ರದರ್ಶಿಸುತ್ತಿದ್ದು, ಈ ಉತ್ಸವವು ತಮ್ಮ ಪ್ರತಿಭೆಗಳ ಪ್ರದರ್ಶಿಸಲು ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಟ್ಟಂತಾಗಿದೆ.

ಬಿದಿರಿನ ಕಲಾಕೃತಿಗಳು, ರೇಷ್ಮೆ ಸೀರೆಗಳು, ಚನ್ನಪಟ್ಟಣದ ಆಟಿಕೆಗಳು, ಶ್ರೀಗಂಧದ ಕರಕುಶಲ ವಸ್ತುಗಳು ಮತ್ತು ಕೈಯಿಂದ ಮಾಡಿದ ಚರ್ಮದ ವಸ್ತುಗಳನ್ನು ಪ್ರದರ್ಶಿಸುವ ಮಳಿಗೆಗಳನ್ನು ಉದ್ಯಾನವನದಲ್ಲಿ ಹಾಕಲಾಗಿದೆ.

ಬೆಂಗಳೂರು ಹಬ್ಬದಲ್ಲಿ ಕನ್ನಡ ಲೇಖಕರು ಕೂಡ ಪಾಲ್ಗೊಂಡು ಪುಸ್ತಕ ಪ್ರದರ್ಶನದಲ್ಲಿ ಪುಸ್ತಕಗಳ ಓದುತ್ತಿರುವುದು ಕಂಡು ಬಂದಿತ್ತು. ಹಲವು ಪುಸ್ತಕ ಲೇಖಕರು, ಪುಸ್ತಕ ಮಾರಾಟಗಾರರು ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಪ್ರಾದೇಶಿಕ ಪುಸ್ತಕಗಳನ್ನು ಪ್ರಚಾರ ಮಾಡುವ ಅಗತ್ಯವಿದೆ ಎಂದು ಹೇಳಿದರು.

ಕೋಕ್ರಿಯೇಟ್ ವೆಂಚರ್ಸ್‌ನ ಅಧ್ಯಕ್ಷ ಸುರೇಶ್ ನರಸಿಂಹ ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಕಬ್ಬನ್ ಪಾರ್ಕ್ ಸೂಕ್ತ ಸ್ಥಳವಾಗಿದೆ. ಕುಶಲಕರ್ಮಿಗಳು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲು ವೇದಿಕೆಗಾಗಿ ಹೆಣಗಾಡುತ್ತಿರುತ್ತಾರೆ. ಇಂತಹ ವೇದಿಕೆಗಳು ಪ್ರತಿಭೆಯನ್ನುೋ ಪ್ರದರ್ಶಿಸಲು ಅವರನ್ನು ಉತ್ತೇಜಿಸಲು ಅವಕಾಶವನ್ನು ನೀಡುತ್ತದೆ.

ಹೊಸ ಸ್ವರೂಪದ ಬಾಲಭವನ ಉದ್ಘಾಟಿಸಿದ ಸಿಎಂ ಬೊಮ್ಮಾಯಿ
ಈ ನಡುವೆ ಕಬ್ಬನ್ ಪಾರ್ಕ್‌ ಆವರಣದಲ್ಲಿ ನವೀಕೃತಗೊಂಡ ಬಾಲಭವನ ಮತ್ತು ಪುಟ್ಟ ಮಕ್ಕಳ ರೈಲಿಗೆ ಸಿಎಂ ಬೊಮ್ಮಾಯಿಯವರು ಚಾಲನೆ ನೀಡಿದರು.

ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ ಅಡಿಯಲ್ಲಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ಬಾಲಭವನವನ್ನು ನವೀಕರಣಗೊಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!