ಜ್ಯೋತಿರಾಧಿತ್ಯ ಸಿಂಧಿಯಾ 
ರಾಜ್ಯ

ಇನ್ನೊಂದು ದಶಕದಲ್ಲಿ ಭಾರತವು ವಿಶ್ವದ ಅತಿದೊಡ್ಡ ನಾಗರಿಕ ವಿಮಾನಯಾನ ಮಾರುಕಟ್ಟೆಯಾಗಲಿದೆ: ಜ್ಯೋತಿರಾದಿತ್ಯ ಸಿಂಧಿಯಾ

ಇನ್ನು ಒಂದು ದಶಕದೊಳಗೆ ಭಾರತವು ವಿಶ್ವದ ಅತಿದೊಡ್ಡ ನಾಗರಿಕ ವಿಮಾನಯಾನ ಮಾರುಕಟ್ಟೆಯಾಗಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

ಬೆಂಗಳೂರು: ಇನ್ನು ಒಂದು ದಶಕದೊಳಗೆ ಭಾರತವು ವಿಶ್ವದ ಅತಿದೊಡ್ಡ ನಾಗರಿಕ ವಿಮಾನಯಾನ ಮಾರುಕಟ್ಟೆಯಾಗಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಸುಧಾರಿತ ಮತ್ತು ಶಾರ್ಟ್ ಹೌಲ್ ಏರ್ ಮೊಬಿಲಿಟಿ ಫಾರ್ ಆಲ್ (ASHA) ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಸಿಂಧಿಯಾ, "ಮುಂದಿನ 4 ರಿಂದ 5 ವರ್ಷಗಳಲ್ಲಿ, ನಾಗರಿಕ ವಿಮಾನಯಾನವು ಭಾರತದಲ್ಲಿ ಸಾರಿಗೆಯ ಭದ್ರಕೋಟೆಯಾಗಲಿದೆ. ಸುಧಾರಿತ ವಾಯು ಚಲನಶೀಲತೆ ಬಲವಾದ ನಾಗರಿಕ ವಿಮಾನಯಾನ ಜಾಲದ ಆಧಾರದ ಮೇಲೆ ಅದರ ಅಡಿಪಾಯ ಮತ್ತು ಮುಂದಿನ ದಶಕದಲ್ಲಿ ಭಾರತವು ವಾಯುಯಾನಕ್ಕೆ ಅತಿದೊಡ್ಡ ಮಾರುಕಟ್ಟೆಯಾಗಲಿದೆ ಎಂದರು.

ನಾಗರಿಕ ವಿಮಾನಯಾನ ವಲಯದ ದೈತ್ಯ ದಾಪುಗಾಲುಗಳ ಕುರಿತು ವಿವರಿಸಿದ ಸಿಂಧಿಯಾ, “ಭಾರತ ಇಂದು 144 ಮಿಲಿಯನ್ ಪ್ರಯಾಣಿಕರನ್ನು ಹೊಂದಿರುವ ವಿಶ್ವದ ಮೂರನೇ ಅತಿದೊಡ್ಡ ದೇಶೀಯ ಮಾರುಕಟ್ಟೆಯಾಗಿದ್ದೇವೆ. ದೇಶೀಯ ಮತ್ತು ಅಂತಾರಾಷ್ಟ್ರೀಯವನ್ನು ಒಟ್ಟುಗೂಡಿಸಿ, ನಾವು 200 ಮಿಲಿಯನ್ ಪ್ರಯಾಣಿಕರನ್ನು ಹೊಂದಿರುವ ವಿಶ್ವದ ಏಳನೇ ಅತಿದೊಡ್ಡ ಮಾರುಕಟ್ಟೆಯನ್ನು ಹೊಂದಿದ್ದೇವೆ ಎಂದು ಹೇಳಿದರು. ಆದಾಗ್ಯೂ, 1.3 ಶತಕೋಟಿ ಜನಸಂಖ್ಯೆಯೊಂದಿಗೆ, ನಾವು ಇನ್ನೂ 4 ರಿಂದ 5 ಶೇಕಡಾದಷ್ಟು ಒಳಹೊಕ್ಕು ದರಗಳ ಬಗ್ಗೆ ಮಾತನಾಡುತ್ತಿದ್ದೇವೆ. ಭಾರತದಲ್ಲಿ ಇದಕ್ಕೆ ಊಹಿಸಲಾಗದ ಸಾಮರ್ಥ್ಯವಿದೆ ಎಂದು ಹೇಳಿದರು. 

ಕೋವಿಡ್ ಪೂರ್ವದ ಶೇಕಡಾ 80ಕ್ಕೆ ಹೋಲಿಸಿದರೆ ಪ್ರಸ್ತುತ ವಿಮಾನಗಳಲ್ಲಿ ಪ್ರಯಾಣಿಕರು ತುಂಬುವ ಮಟ್ಟವು 90 ರಿಂದ 95 ಶೇಕಡಾಕ್ಕೆ ಏರಿದೆ. ಮೊದಲು, ನಮ್ಮಲ್ಲಿ ವಿಮಾನವಿತ್ತು ಆದರೆ ಪ್ರಯಾಣಿಕರಿರಲಿಲ್ಲ. ಇಂದು ನಮಗೆ ಪ್ರಯಾಣಿಕರ ದಂಡೇ ಇದೆ ಆದರೆ ವಿಮಾನದ ಕೊರತೆಯಿದೆ. ನಮಗೆ ಹೆಚ್ಚಿನ ವಿಮಾನಗಳು ಬೇಕಾಗುತ್ತವೆ. ಭಾರತೀಯರು ಇಂದು ಹೆಚ್ಚೆಚ್ಚು ವಿಮಾನದಲ್ಲಿ ಪ್ರಯಾಣಿಸುವ ಬಯಕೆ ಹೊಂದಿದ್ದಾರೆ ಎಂದರು. 

ಕಳೆದ 65 ವರ್ಷಗಳಲ್ಲಿ ಭಾರತ 74 ವಿಮಾನ ನಿಲ್ದಾಣಗಳನ್ನು ನಿರ್ಮಿಸಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಧಾನ ಮಂತ್ರಿಯವರ ಉಸ್ತುವಾರಿಯಲ್ಲಿ, ನಾವು ಹೆಚ್ಚುವರಿ 74 ವಿಮಾನ ನಿಲ್ದಾಣಗಳು, ವಾಟರ್‌ಡ್ರೋಮ್‌ಗಳು ಮತ್ತು ಹೆಲಿಪೋರ್ಟ್‌ಗಳನ್ನು ನಿರ್ಮಿಸಿದ್ದೇವೆ, ನಮ್ಮ ಸಂಖ್ಯೆಯನ್ನು 74 ರಿಂದ 148 ಕ್ಕೆ ದ್ವಿಗುಣಗೊಳಿಸಿದ್ದೇವೆ. ಇದು ಪ್ರಯಾಣದ ಆರಂಭ ಮಾತ್ರ. ಮುಂದಿನ 4 ರಿಂದ 5 ವರ್ಷಗಳಲ್ಲಿ, ನಾವು ಈ ಸಂಖ್ಯೆಯನ್ನು 200 ರಿಂದ 220 ವಿಮಾನ ನಿಲ್ದಾಣಗಳು, ವಾಟರ್‌ಡ್ರೋಮ್‌ಗಳು ಮತ್ತು ಹೆಲಿಪೋರ್ಟ್‌ಗಳಿಗೆ ಕೊಂಡೊಯ್ಯುವುದು ನಮ್ಮ ಗುರಿ ಎಂದರು.

ವಾಯುಯಾನ ಇತಿಹಾಸದಲ್ಲಿ ಪರಿವರ್ತನೆಯ ಅವಧಿಯಲ್ಲಿ, ಭಾರತವು ತನ್ನ ಎಂಜಿನಿಯರಿಂಗ್ ಸಾಮರ್ಥ್ಯ, ಮಾನವ ಸಂಪನ್ಮೂಲ ಸಾಮರ್ಥ್ಯ ಮತ್ತು ದೊಡ್ಡ ಚಲನಶೀಲತೆಯಿಂದಾಗಿ ವಿಶ್ವ ವಿಮಾನಯಾನ ಮಾರುಕಟ್ಟೆಯಲ್ಲಿ ಮುನ್ನುಗ್ಗುತ್ತಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT