ಸಂಗ್ರಹ ಚಿತ್ರ 
ರಾಜ್ಯ

ಚುನಾವಣೆ ಎಫೆಕ್ಟ್: ಕಂದಾಯ ಇಲಾಖೆ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ!

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಸೇವೆಯಲ್ಲಿ ಕೆಲ ವ್ಯತ್ಯಯಗಳು ಕಂಡು ಬರಲಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಸೇವೆಯಲ್ಲಿ ಕೆಲ ವ್ಯತ್ಯಯಗಳು ಕಂಡು ಬರಲಿದೆ ಎಂದು ಹೇಳಲಾಗುತ್ತಿದೆ.

ಚುನಾವಣಾ ಕರ್ತವ್ಯಕ್ಕೆ ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜನೆ ಮಾಡುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಸೇವೆಯಲ್ಲಿ ವ್ಯತ್ಯಯಗಳು ಕಂಡುಬರಲಿದೆ ಎಂದು ತಿಳಿದುಬಂದಿದೆ.

ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿ, ರಾಜ್ಯದಲ್ಲಿ ತಿಂಗಳಿಗೆ ಸರಾಸರಿ 1.5-2 ಲಕ್ಷ ದಾಖಲೆ ನೋಂದಣಿ ಅರ್ಜಿಗಳು ಸಲ್ಲಿಕೆಯಾಗಿವೆ. ಚುನಾವಣಾ ಕರ್ತವ್ಯಕ್ಕೆ ಸಿಬ್ಬಂದಿಯನ್ನು ನಿಯೋಜಿಸಿರುವುದರಿಂದ, ಒಬ್ಬ ವ್ಯಕ್ತಿ ಮೂವರು ವ್ಯಕ್ತಿಗಳು ಮಾಡುವ ಕರ್ತವ್ಯವವನ್ನು ನಿಭಾಯಿಸಬೇಕಾಗಿದೆ. ಹೀಗಾಗಿ ಅರ್ಜಿಗಳ ಪ್ರಕ್ರಿಯೆ ವೇಗವು ತಡವಾಗಲಿವೆ ಎಂದು ಹೇಳಿದ್ದಾರೆ.

ಇಲಾಖೆಯಲ್ಲಿ 34 ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದು, ಅವರಲ್ಲಿ ಶೇ.50ರಷ್ಟು ಮಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

BWSSB ಮತ್ತು Bescom ಗಿಂತಲೂ ಕಂದಾಯ ಇಲಾಖೆ ಅಧಿಕಾರಿಗಳು ಜನರೊಂದಿಗೆ ನೇರ ಸಂಪರ್ಕದಲ್ಲಿರುತ್ತಾರೆ. ಆದರೆ, ನಮ್ಮ ಸೇವೆ ಅಗತ್ಯ ಸೇವೆಗಳ ವರ್ಗಕ್ಕೆ ಸೇರ್ಪಡೆಗೊಳಿಸಲಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

17 ಭಾಷೆಗಳಲ್ಲಿ ಹಾಡಿದರೂ ಕನ್ನಡದ ನೆಲದಲ್ಲೇ ಮಣ್ಣಾದ ಗಾನಕೋಗಿಲೆ: ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಎಸ್.ಜಾನಕಿ ಅಂತ್ಯಕ್ರಿಯೆ!

'Health camp' ಚಿಕಿತ್ಸೆಯಿಂದ ಕಾಲು ಕಳೆದುಕೊಂಡ ಮಹಿಳೆ! ಪೊಲೀಸರಿಗೆ ದೂರು, ಅಭಿಷೇಕ್ ಬ್ಯಾನರ್ಜಿ ವಿರುದ್ಧ ಕೇಸ್ ದಾಖಲು

ಅಯೋಧ್ಯೆ ಟ್ರಸ್ಟ್ ಸಿಇಒ ಅಧಿಕಾರಗಳನ್ನು ನಿರ್ಧರಿಸುತ್ತದೆ, ಸರ್ಕಾರವಲ್ಲ: ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ

ಮಾರುವೇಷ ಯಾಕೆ ಸ್ವಾಮಿ... ಇದು ಚಿಲ್ಲರೆ ಕಾಲವಲ್ಲ, ಕ್ಯೂಆರ್ ಕೋಡ್ ಕಾಲ: ಸಚಿವ ಸುರೇಶ್‌ಗೆ ಶಾಸಕ ಸುರೇಶ್ ಕುಮಾರ್ ಪಾಠ

ನನ್ನ ಜೊತೆ ಮರ್ಯಾದೆಯಿಂದ ಮಾತಾಡು: ಸ್ವಿಟ್ಜರ್ಲೆಂಡ್ ವಿರುದ್ಧದ ಪಂದ್ಯದ ನಡುವೆ ರೆಫರಿ ವಿರುದ್ಧ ಮೆಸ್ಸಿ ವಾಗ್ವಾದ, Video