ರಾಜ್ಯ

ಬುದ್ಧ ಪೂರ್ಣಿಮೆ: ಬೆಂಗಳೂರಿನಲ್ಲಿ ನಾಳೆ ಮಾಂಸ ಮಾರಾಟ ನಿಷೇಧ

Nagaraja AB

ಬೆಂಗಳೂರು: ಬುದ್ಧ ಪೂರ್ಣಿಮೆ ಅಂಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಶುಕ್ರವಾರ ಮಾಂಸ ಮಾರಾಟ ಹಾಗೂ ಪ್ರಾಣಿ ವಧೆ ನಿಷೇಧಿಸಲಾಗಿದೆ.

ಈ ಕುರಿತು ಪಾಲಿಕೆ ನೋಟಿಸ್ ಹೊರಡಿಸಿದ್ದು, ಮಾಂಸ ಮಾರಾಟ, ಪ್ರಾಣಿ ವಧೆ ಮಾಡುವುದು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದೆ.

ಗೌತಮ ಬುದ್ಧ ಜನ್ಮ ದಿನದ ಅಂಗವಾಗಿ ಬುದ್ದ ಪೂರ್ಣಿಮೆ ಆಚರಿಸಲಾಗುತ್ತದೆ. ಪಾಲಿಕೆ ಅಂದಾಜಿನ ಪ್ರಕಾರ ನಗರದಲ್ಲಿ 3,000 ಪರಾವನಗಿ ಹೊಂದಿದ ಅಂಗಡಿಗಳಿದ್ದು, ಮೂರು ಅಧಿಕೃತ ಕಾಸಾಯಿಖಾನೆಗಳಿವೆ. ಮಾರ್ಚ್ ತಿಂಗಳಲ್ಲಿ ನಡೆದ ರಾಮನವಮಿ ದಿನದಂದು ಕೂಡಾ ಇದೇ ರೀತಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿತ್ತು. 

SCROLL FOR NEXT