ಜಯನಗರ ಮತ ಎಣಿಕೆ ಕೇಂದ್ರ 
ರಾಜ್ಯ

ಜಯನಗರ ಕ್ಷೇತ್ರದ ಫಲಿತಾಂಶ ಗೊಂದಲ, ಮತ ಎಣಿಕೆ ಕೇಂದ್ರದ ಬಳಿ ಬಿಜೆಪಿ-ಕಾಂಗ್ರೆಸ್ ನಾಯಕರ ವಾಗ್ವಾದ! 

ರಾಜ್ಯ ವಿಧಾನಸಭಾ ಚುನಾವಣೆಯ 223 ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿದ್ದು ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಗೊಂದಲದ ಗೂಡಾಗಿದೆ.  

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ 223 ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿದ್ದು ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಗೊಂದಲದ ಗೂಡಾಗಿದೆ.  

ಜಯನಗರದ ಎಸ್ಎಸ್ ಎಂ ಆರ್ ವಿ ಕಾಲೇಜಿನಲ್ಲಿ ಮತ ಎಣಿಕೆ ನಡೆದಿದ್ದು, ಬೇರೆಲ್ಲಾ ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡರೂ ಮತಗಳನ್ನು ಪರಿಗಣಿಸುವ ವಿಷಯದಲ್ಲಿ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಮರು ಮತ ಎಣಿಕೆ ನಡೆದ ಕಾರಣ ಅಂತಿಮ ಫಲಿತಾಂಶ ಘೋಷಣೆ ವಿಳಂಬವಾಗಿದೆ. ಈ ಮಧ್ಯೆ ಮತ ಕೇಂದ್ರದ ಬಳಿ ಬಿಜೆಪಿ-ಕಾಂಗ್ರೆಸ್ ನಾಯಕರು ಧಾವಿಸಿದ್ದರು. ಈ ಹಂತದಲ್ಲಿ ನಾಯಕರ ನಡುವೆ ವಾಗ್ವಾದ ಉಂಟಾಗಿದೆ.

ಮತ ಎಣಿಕೆ ಕೇಂದ್ರದ ಬಳಿ ಮಾತನಾಡಿರುವ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ, ತಿರಸ್ಕೃತಗೊಂಡ ಮತಗಳನ್ನು ಮರು ಎಣಿಕೆ ವೇಳೆ ಪರಿಗಣಿಸಲಾಗಿದೆ,  ಅಧಿಕಾರಿಗಳ ಸಹಿ ಇಲ್ಲದ ಮತ ಪರಿಗಣಿಸಲಾಗಿದೆ. ಹೀಗಾಗಿ ಸೌಮ್ಯ ರೆಡ್ಡಿ ಸೋಲು ಎನ್ನುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಆರ್ ಅಶೋಕ್ ಮಾತನಾಡಿದ್ದು, ದಿನೇಶ್ ಗುಂಡೂರಾವ್ ಅವರ ಕ್ಷೇತ್ರದಲ್ಲಿ ನಾವು 150 ಮತಗಳ ಅಂತರದಿಂದ ಸೋತಿದ್ದೇವೆ ಅಲ್ಲಿ ನಾವೇನೂ ಗೂಂಡಾಗಿರಿ ಮಾಡಿ ಫಲಿತಾಂಶ ಘೋಷಿಸುವಂತೆ ಒತ್ತಾಯ ಮಾಡಿಲ್ಲ. ಆದರೆ ಜಯನಗರದಲ್ಲಿ ಮರು ಮತ ಎಣಿಕೆಗೆ ಮನವಿ ಮಾಡಿದ್ದೇವೆ ಆದರೆ ಕಾಂಗ್ರೆಸ್ ನವರು ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ಅಧಿಕಾರಿಗಳು ಮರು ಮತ ಎಣಿಕೆ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ. ಯಾವ ಮತಗಳನ್ನು ತಿರಸ್ಕರಿಸಬೇಕೆಂದು ಅಧಿಕಾರಿಗಳು ನಿರ್ಧರಿಸಿ ನಿಯಮದಂತೆ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಮ್ಮ ನೌಕೆಗಳನ್ನು ಅತ್ಯುತ್ತಮ ಶಸ್ತ್ರಾಸ್ತ್ರಗಳಿಂದ ತುಂಬುತ್ತಿದ್ದೇವೆ; ಇರಾನ್ ಬಗ್ಗದೇ ಹೋದಲ್ಲಿ ಸರ್ವನಾಶ- ಮಾತುಕತೆಗೂ ಮುನ್ನ ಟ್ರಂಪ್ ಬೆದರಿಕೆ!

ಲೆಬನಾನ್‌ನಲ್ಲಿ ನಾಗರಿಕರ ಸಾವಿನ ಘಟನೆಗಳ ಬಗ್ಗೆ ಭಾರತ ಕಳವಳ; ಇಸ್ರೇಲ್ ಗೆ ತೀವ್ರ ಹಿನ್ನಡೆ!

Hormuz ಮೇಲೆ ಹಾರುತ್ತಿದ್ದ 200 ಮಿಲಿಯನ್ ಡಾಲರ್ ಮೌಲ್ಯದ ಅಮೆರಿಕ ಡ್ರೋನ್ ದಿಢೀರ್ ನಾಪತ್ತೆ; ಯುದ್ಧಕ್ಕೆ ಪ್ರತಿ ದಿನದ US ಖರ್ಚು 3,040 ಕೋಟಿ ರೂ!

ಇರಾನ್ ಜೊತೆಗೆ ನಾಳೆ ಮಹತ್ವದ ಮಾತುಕತೆ: ಇಸ್ಲಾಮಾಬಾದ್‌ಗೆ ತೆರಳುವ ಮುನ್ನಾ ಜೆಡಿ ವ್ಯಾನ್ಸ್ ನೀಡಿದ ವಾರ್ನಿಂಗ್ ಏನು!

ಅಪರಿಚಿತ ದೆವ್ವಕ್ಕಿಂತ ಪರಿಚಿತ ದೆವ್ವವೇ ವಾಸಿ! ಇರಾನ್ ಹೊಸ ಆಡಳಿತ ಹಳೆಯದ್ದಕ್ಕಿಂತ ಕ್ರೂರ: 40 ದಿನಗಳ ಬಳಿಕ ಇಸ್ರೇಲ್ ಹೀಗೆ ಹೇಳಿದ್ದೇಕೆ?

SCROLL FOR NEXT