ರಾಜ್ಯ

ಹಾವೇರಿ: ಮಹಿಳೆ ಮೇಲೆ ದಾಳಿ ಮಾಡಿದ್ದ ಚಿರತೆ ಶವವಾಗಿ ಪತ್ತೆ. ಅನುಮಾನ ಸೃಷ್ಟಿ!

Vishwanath S

ಹಾವೇರಿ: ರಾಣೆಬೆನ್ನೂರ ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಮಹಿಳೆ ಮೇಲೆ ದಾಳಿ ಮಾಡಿದ್ದ ಚಿರತೆ ಶವವಾಗಿ ಪತ್ತೆಯಾಗಿದೆ. 

ಬಾಯಿ ನೋವಿನಿಂದ ಬಳಲುತ್ತಿದ್ದ ಚಿರತೆಯು ಆಹಾರವಿಲ್ಲದೆ ನಿತ್ರಾಣಗೊಂಡಿದ್ದರಿಂದ ಸುಲಭವಾಗಿ ಬೇಟೆಗೆ ಸಿಗುವಂತ ಮನುಷ್ಯರ ಮೇಲೆ ದಾಳಿ ಮಾಡುತ್ತದೆ. ಅದರಂತೆ ಇಂದು ಬೆಳಗ್ಗೆ ಮಹಿಳೆ ಮೇಲೆ ದಾಳಿ ಮಾಡಿತ್ತು. 

ಇಂದು ಬೆಳಗ್ಗೆ 55 ವರ್ಷದ ಸಿದ್ದಮ್ಮ ಬಣಗಾರ ಎಂಬುವರು ತೋಟಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಚಿರತೆ ಏಕಾಏಕಿ ದಾಳಿ ಮಾಡಿತ್ತು. ಚಿರತೆ ದಾಳಿಯಿಂದ ಹೆದರಿದ ಸಿದ್ದಮ್ಮ ಜೋರಾಗಿ ಕೂಗಿಕೊಂಡಿದ್ದರು. ಈ ವೇಳೆ ಗ್ರಾಮಸ್ಥರು ಬಂದು ಚಿರತೆಯನ್ನು ಓಡಿಸಿದ್ದರು.

ಸದ್ಯ ಚಿರತೆ ದಾಳಿಗೆ ಒಳಗಾಗಿದ್ದ ಸಿದ್ದಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಅಲ್ಲಿಂದ ಅಡಕೆ ತೋಟಕ್ಕೆ ನುಗ್ಗಿದ್ದ ಚಿರತೆ ಮೃತದೇಹ ಒಂದು ಗಂಟೆ ಬಳಿಕ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಚಿರತೆಯು ಬಾಯಿಗೆ ಗಾಯವಾಗಿದ್ದು ನೋವಿನಿಂದ ಬಳಲಿ, ಆಹಾರವಿಲ್ಲದೆ ನಿತ್ರಾಣಗೊಂಡು ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.

SCROLL FOR NEXT