ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ಹಾಪ್'ಕಾಮ್ಸ್'ನಲ್ಲಿ ಮಾವು-ಹಲಸು ಮೇಳ ಆರಂಭ; ಜೂನ್ 5 ರವರೆಗೆ ರಿಯಾಯಿತಿ ದರದಲ್ಲಿ ಮಾರಾಟ

ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ (ಹಾಪ್‍ಕಾಮ್ಸ್) ಹಮ್ಮಿಕೊಂಡಿರುವ ಮಾವು– ಹಲಸು ಮೇಳ ಶುಕ್ರವಾರದಿಂದ ಆರಂಭವಾಗಿದೆ.

ಬೆಂಗಳೂರು: ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ (ಹಾಪ್‍ಕಾಮ್ಸ್) ಹಮ್ಮಿಕೊಂಡಿರುವ ಮಾವು– ಹಲಸು ಮೇಳ ಶುಕ್ರವಾರದಿಂದ ಆರಂಭವಾಗಿದೆ.

ನಗರದ ಲಾಲ್‌ಬಾಗ್‌ ಮುಖ್ಯರಸ್ತೆಯಲ್ಲಿರುವ ಹಾಪ್‌ಕಾಮ್ಸ್‌ ಕೇಂದ್ರ ಮಳಿಗೆಯಲ್ಲಿ ಮೇಳಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು. ಮೇಳ ಜೂನ್ 5ರವರೆಗೆ ನಡೆಯಲಿದೆ. ಹಾಪ್ ಕಾಮ್ಸ್ ನಲ್ಲಿ  17 ಬಗೆಯ ಮಾವುಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ.

ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಉಮಾ ಶಂಕರ್ ಮಿರ್ಜಿ ಮಾತನಾಡಿ, ಆರು ತಿಂಗಳಲ್ಲಿ ಹೈಪರ್ ಹಾಪ್‌ಕಾಮ್ಸ್ ಮಳಿಗೆಯು ಅಸ್ತಿತ್ವದಲ್ಲಿರುವ ಕೇಂದ್ರ ಕಚೇರಿಯಲ್ಲಿ ಬರಲಿದ್ದು, ಇದು ಮಾರಾಟ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಇದಕ್ಕಾಗಿ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಅವರು ಒಂದು ಕೋಟಿ ಅನುದಾನ ನೀಡಿದ್ದಾರೆ. ಡಬಲ್ ರಸ್ತೆ, ಲಾಲ್ ಬಾಗ್ ಗೇಟ್ ನಲ್ಲಿರುವ ಹಾಪ್ ಕಾಮ್ಸ್ ಅಷ್ಟು ಸುಲಭವಾಗಿ ಕಣ್ಣಿಗೆ ಕಾಣ ಸಿಗುವುದಿಲ್ಲ. ಈ ಅನುದಾನದಿಂದ ಹಾಪ್ ಕಾಮ್ಸ್ ಮಳಿಗೆಗಳನ್ನು ಉನ್ನತೀಕರಿಸಲಾಗುತ್ತದೆ. ಇಲ್ಲಿ ಗ್ರಾಹಕರು ಕುಳಿತುಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಮಿರ್ಜಿ ಅವರು ಮಾಹಿತಿ ನೀಡಿದ್ದಾರೆ.

ಶಾಸಕ ಉದಯ್ ಗರುಡಾಚಾರ್ ಮಾತನಾಡಿ, ಹಾಪ್‌ಕಾಮ್ಸ್ ನಿರ್ಮಾಣಕ್ಕೆ ಒಂದು ಕೋಟಿ ರೂ. ನಿಧಿಯನ್ನು ಮೀಸಲಿಟ್ಟಿದ್ದು, ಹಣ್ಣು ತರಕಾರಿಗಳ ಪ್ರದರ್ಶನ ಮತ್ತು ಮಾರಾಟದ ಮಳಿಗೆಗಳನ್ನು ಉನ್ನತ ರೀತಿಯಲ್ಲಿ ನಿರ್ಮಾಣ ಮಾಡಲಾಗುತ್ತದೆ. ಲಾಲ್ ಬಾಗ್ ಬರುವ ಜನರು ಹಾಪ್ ಕಾಮ್ಸ್'ಗೆ ಭೇಟಿ ನೀಡುವಂತೆ ಮಾಡಲು ಆಕರ್ಷಕ ರೀತಿಯ ರಚನೆಯನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಹಾಪ್'ಕಾಮ್ಸ್ ನಲ್ಲಿ ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ 9000 ಸದಸ್ಯರಿದ್ದಾರೆ, ಮಳಿಗೆಗಳ ರಚನೆ ಸುಧಾರಿಸಿದರೆ, ಮಾರಾಟದಲ್ಲಿ ಏರಿಕೆಯಾದರೆ ಅದು ರೈತರ ಪ್ರಯೋಜನವನ್ನು ನೀಡುತ್ತದೆ. ಮಾವು ಮತ್ತು ಹಲಸು ಮೇಳಕ್ಕೆ ಸಂಬಂಧಿಸಿದಂತೆ ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ 17 ಬಗೆಯ ಮಾವುಗಳನ್ನು ಸರಬರಾಜು ಮಾಡಲಾಗುತ್ತಿದ್ದು, ಈ ಬಾರಿ ಕನಿಷ್ಠ 1000 ಟನ್ ಮಾರಾಟ ಮಾಡುವ ಭರವಸೆಯನ್ನು ಹಾಪ್‌ಕಾಮ್ಸ್ ಹೊಂದಿದೆ ಎಂದು ಗರುಡಾಚಾರ್ ತಿಳಿಸಿದ್ದಾರೆ.

ಹಾಪ್‌ಕಾಮ್ಸ್‌ನಲ್ಲಿರುವ ಮಾವಿನಹಣ್ಣಿನ ವಿಶೇಷತೆ ಏನೆಂದರೆ, ಎಲ್ಲಾ ಹಣ್ಣುಗಳು ಕಾರ್ಬೈಡ್‌ನಿಂದ ಮುಕ್ತವಾಗಿದ್ದು, ಸ್ಟಾಲ್‌ನಲ್ಲಿ ಮಾರಾಟ ಮಾಡುವುದಲ್ಲದೆ, 3 ರಿಂದ 5 ಕಿಲೋ ಅಳತೆಯ ಬಾಕ್ಸ್‌ಗಳನ್ನು ಸಹ ಮಾರಾಟ ಮಾಡಲಾಗುತ್ತದೆ. ಆನ್‌ಲೈನ್‌ನಲ್ಲಿಯೂ ಮಾರಾಟ ಲಭ್ಯವಿದೆ: ಹಾಪ್'ಕಾಮ್ಸ್ ನಲ್ಲಿ ಮಾವು ತಳಿಗಳು ಪ್ರತಿ ಕಿಲೋಗೆ ಶೇ.10ರಷ್ಟು ರಿಯಾಯಿತಿ ದರಲ್ಲಿ ಮಾರಾಟ ಮಾಡಲಾಗುತ್ತಿದೆ.

ತೋತಾಪುರಿರೂ.31 ನಾಟಿ, ಬಾದಾಮಿ;132, ಆಲ್ಪೋನ್ಸೊ;139, ರಸಪುರಿ;112, ಸೆಂದೂರ;52, ಬ್ಯೆಗಂಪಲ್ಲಿ;52, ಮಲಗೋವಾ;144. ಮಲ್ಲಿಕಾ;108. ದಶರಿ;126. ಕೇಸರ್;104. ಅಮರಪಲ್ಲಿ;126, ಸಕ್ಕರಗುತ್ತಿ;122 ಕಾಲಪಾಡು;139. ಇಮಾಮ್ ಪಸಂದ್;149

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

SCROLL FOR NEXT