ರಾಜ್ಯ

ನೂತನ ಸಚಿವರ ಪ್ರಮಾಣ ವಚನ: ಇಂದು ರಾಜಭವನ ಸುತ್ತಮುತ್ತ ಈ ಮಾರ್ಗಗಳಲ್ಲಿ ಸಂಚಾರ ಬದಲಾವಣೆ

Sumana Upadhyaya

ಬೆಂಗಳೂರು: ಕಾಂಗ್ರೆಸ್​ 24 ಮಂದಿ ಶಾಸಕರು ಇಂದು ಶನಿವಾರ ಬೆಳಗ್ಗೆ 11.45ಕ್ಕೆ ಬೆಂಗಳೂರಿನ ರಾಜಭವನದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಸಂದರ್ಭದಲ್ಲಿ ರಾಜಭವನದ ಸುತ್ತಮುತ್ತ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. 

ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಕೆ.ಆರ್.ವೃತ್ತದಿಂದ ಗೋಪಾಲಗೌಡ ವೃತ್ತದವರೆಗೆ ಸಂಚಾರ ಬಂದ್​ ಆಗಲಿದೆ. ನೃಪತುಂಗ ರಸ್ತೆ ಅಥವಾ ಕಬ್ಬನ್​ಪಾರ್ಕ್​ ಒಳಭಾಗದ ರಸ್ತೆಯಲ್ಲಿ ಸಂಚಾರಕ್ಕೆ ಅನುಮತಿಸಲಾಗಿದೆ. ಬಾಳೇಕುಂದ್ರಿ ವೃತ್ತದಿಂದ ಬರುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಕಾಫಿ ಬೋರ್ಡ್ ಅಥವಾ ತಿಮ್ಮಯ್ಯ ವೃತ್ತದ ಕಡೆ ಸಂಚಾರ ನಿರ್ಬಂಧ ಹೇರಲಾಗಿದೆ. ಪೊಲೀಸ್ ತಿಮ್ಮಯ್ಯ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಸಂಚಾರ ಸಂಪೂರ್ಣ ಬಂದ್ ಆಗಲಿದೆ. ಶಿವಾಜಿನಗರ ಬಸ್ ನಿಲ್ದಾಣದಿಂದ ಬರುವ ವಾಹನಗಳ ಹಾಗೂ ಕ್ವೀನ್ಸ್ ಸರ್ಕಲ್, ಸಿದ್ದಲಿಂಗಯ್ಯ ವೃತ್ತದ ಕಡೆಗೆ ಬರುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಎಲ್ಲಾ ಮಾದರಿ ಬಸ್​ಗಳು, ಸರಕು ಸಾಗಣೆ ವಾಹನಗಳ ಸಂಚಾರವನ್ನು ಸಂಪೂರ್ಣ ಬಂದ್​ ಮಾಡಲಾಗಿದೆ. ​ರಾಜಭವನ, ಕಾಫಿಬೋರ್ಡ್​ ಕಡೆಗೆ ಗೂಡ್ಸ್​ ವಾಹನ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.ರಾಜಭವನದ ಸುತ್ತಮುತ್ತ ವಾಹನಗಳ ನಿಲುಗಡೆ ಸಂಪೂರ್ಣ ನಿಷೇಧಿಸಲಾಗಿದೆ. ರಾಜಭವನ ರಸ್ತೆ, ಅಂಬೇಡ್ಕರ್ ರಸ್ತೆ, ಕ್ವೀನ್ಸ್ ರಸ್ತೆ, ಇನ್​ಫೆಂಟ್ರಿ ರಸ್ತೆ, ಸ್ಯಾಂಕಿ ರಸ್ತೆ, ಪ್ಯಾಲೇಸ್​ ರಸ್ತೆ, ಕಬ್ಬನ್​ ರಸ್ತೆಯಲ್ಲಿ ನಿಲುಗಡೆ ನಿಷೇಧ ಮಾಡಲಾಗಿದೆ.

ಪಾಸ್​ ಇರುವ ವಾಹನಗಳಿಗೆ ಅವಕಾಶ: ಪಾಸ್ ಇರುವ ವಾಹನಗಳು ರಾಜಭವನದ ಗೇಟ್​ ಬಳಿಗೆ ಬರಬಹುದು, ರಾಜಭವನದ ಗೇಟ್​ ಬಳಿ ಗಣ್ಯರನ್ನು ಇಳಿಸಿ ಮುಂದೆ ಸಾಗಬೇಕು. ಎಲ್​ಹೆಚ್​ ಗೇಟ್​ ಮೂಲಕ ತೆರಳಿ ಪಾರ್ಕಿಂಗ್​ ಲಾಟ್​ನಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ವಿಶೇಷ ಆಹ್ವಾನಿತರಿಗೆ ಪಾರ್ಕಿಂಗ್​ ವ್ಯವಸ್ಥೆ: ಕಾರ್ಯಕ್ರಮಕ್ಕೆ ಬರುವ ವಿಶೇಷ ಆಹ್ವಾನಿತರಿಗೆ ವಿಧಾನಸೌಧದಲ್ಲಿ ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಲಾಗಿದೆ. ‘ನೆಹರು ತಾರಾಲಯ, ಎಂ.ಎಸ್.ಬಿಲ್ಡಿಂಗ್ ಒಳಭಾಗದಲ್ಲಿ ಪಾರ್ಕಿಂಗ್​, ವಿಧಾನಸೌಧದ ಪಶ್ಚಿಮ ದ್ವಾರ ಮತ್ತು ಉತ್ತರ ದ್ವಾರದ ಮುಂದಿನ ರಸ್ತೆ ವಿಕಾಸ ಸೌಧದ ಸೆಲ್ಲಾರ್​ನಲ್ಲಿ ಗಣ್ಯರ ವಾಹನಗಳ ಪಾರ್ಕಿಂಗ್​ಗೆ ವ್ಯವಸ್ಥೆ ಮಾಡಲಾಗಿದೆ.

SCROLL FOR NEXT