ಬೆಂಗಳೂರು ವಾಯು ಮಾಲಿನ್ಯ (ಸಂಗ್ರಹ ಚಿತ್ರ) 
ರಾಜ್ಯ

ಮಳೆ ಎಫೆಕ್ಟ್...: ಬೆಂಗಳೂರಿನಲ್ಲಿ ತಗ್ಗಿದ ವಾಯು ಮಾಲಿನ್ಯ, 19ರಲ್ಲಿ AQI; Accu Weather ಹವಾಮಾನ ವರದಿ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ಸುರಿದ ಮಳೆ ನಗರದ ವಾಯುಮಾಲಿನ್ಯ ಮಟ್ಟವನ್ನು ಕೊಂಚ ಪ್ರಮಾಣದಲ್ಲಿ ತಗ್ಗಿಸಿದ್ದು, ಶನಿವಾರ ನಗರದಲ್ಲಿನ ವಾಯು ಗುಣಮಟ್ಟ ಪ್ರಮಾಣ 19ಕ್ಕೆ ಇಳಿದಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಆಕ್ಯು ವೆದರ್ ವರದಿ ಮಾಡಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ಸುರಿದ ಮಳೆ ನಗರದ ವಾಯುಮಾಲಿನ್ಯ (Air pollution) ಮಟ್ಟವನ್ನು ಕೊಂಚ ಪ್ರಮಾಣದಲ್ಲಿ ತಗ್ಗಿಸಿದ್ದು, ಶನಿವಾರ ನಗರದಲ್ಲಿನ ವಾಯು ಗುಣಮಟ್ಟ (Air Quality Index) ಪ್ರಮಾಣ 19ಕ್ಕೆ ಇಳಿದಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಆಕ್ಯು ವೆದರ್ ವರದಿ ಮಾಡಿದೆ.

ವಾಯುಮಾಲಿನ್ಯ (Air Pollution)ದ ವಿಚಾರವಾಗಿ ಸದಾ ಸುದ್ದಿಯಲ್ಲಿರುವ ದೇಶದ ರಾಜಧಾನಿ ದೆಹಲಿ (Delhi) ಹಾದಿಯಲ್ಲೇ ಕರ್ನಾಟಕ (Karnataka) ರಾಜಧಾನಿ ಬೆಂಗಳೂರು (Bengaluru) ದಾಪುಗಾಲಿರಿಸುತ್ತಿದ್ದು, ಸಿಲಿಕಾನ್ ಸಿಟಿಯ ಗಾಳಿಯ ಗುಣಮಟ್ಟ (Air Quality Index) ಕಳಪೆ ಮಟ್ಟಕ್ಕೆ ಕುಸಿಯುತ್ತಿರುವ ಕುರಿತು ಈ ಹಿಂದೆ ವರದಿಯಾಗಿತ್ತು. ಆದರೆ ಇದೀಗ ನಗರದಲ್ಲಿ ನಿನ್ನೆ ಸುರಿದ ಮಳೆ ನಗರಲ್ಲಿನ ಧೂಳಿನ ಕಣಗಳು ಗಾಳಿಯೊಂದಿಗೆ ಸೇರುವುದನ್ನು ತಡೆದಿದೆ. ಪರಿಣಾಮ ಶನಿವಾರ ನಗರದಲ್ಲಿನ ವಾಯು ಗುಣಮಟ್ಟ ಪ್ರಮಾಣ 19ಕ್ಕೆ ಇಳಿದಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಆಕ್ಯು ವೆದರ್ (Accu Weather) ವರದಿ ಮಾಡಿದೆ.

ಬೆಂಗಳೂರಿನ  (Bengaluru) ಇಂದಿನ ಗಾಳಿಯ ಗುಣಮಟ್ಟ ಉತ್ತಮ ಸ್ಥಿತಿಯಲ್ಲಿದ್ದು, ಇಂದಿನ ವಾಯು ಗುಣಮಟ್ಟ PM 2.6 (Fine Particulate Matter) 19 ಆಗಿದ್ದು, PM 10 (Particulate Matter)ನ ಪ್ರಮಾಣ 14ರಷ್ಟಿದೆ. ಈ ಎರಡೂ ಅಂಶಗಳ ಪ್ರಮಾಣ ಎಕ್ಸೆಲೆಂಟ್ (ಉತ್ತಮ) ಎಂದು ಆ್ಯಕ್ಯುವೆದರ್ (Accu Weather) ವರದಿ ಮಾಡಿದೆ.

ಉಳಿದಂತೆ ನಗರದಲ್ಲಿನ ಗಾಳಿಯಲ್ಲಿನ ಎನ್ಒ2 (NO2-Nitrogen Dioxide) ಪ್ರಮಾಣ 15ರಷ್ಟಿದ್ದು, ಇದು ಉತ್ತಮ ಪ್ರಮಾಣದಲ್ಲಿದೆ. ಅಂತೆಯೇ ಓಜೋನ್ (O3-Ozone)ದ ಪ್ರಮಾಣ 4ರಷ್ಟಿದ್ದು, ಕಾರ್ಬನ್ ಮಾನಾಕ್ಸೈಡ್ (CO-Carbon Monoxide) 1ರಷ್ಟಿದ್ದು, S02 ಪ್ರಮಾಣ 2ರಷ್ಟಿದೆ.

ಸಾಮಾನ್ಯವಾಗಿ ಈ So2 ಅಂದರೆ ಸಲ್ಫರ್ ಡೈಆಕ್ಸೈಡ್‌ಗೆ ನಮ್ಮನ್ನು ನಾವು ಒಡ್ಡಿಕೊಳ್ಳುವುದರಿಂದ ಗಂಟಲು ಮತ್ತು ಕಣ್ಣಿನ ಕಿರಿಕಿರಿಗೆ ಗುರಿಯಾಗಬಹುದು. ಇದು ಆಸ್ತಮಾ ಮತ್ತು ದೀರ್ಘಕಾಲದ ಬ್ರಾಂಕೈಟಿಸ್ ಅನ್ನು ಉಲ್ಬಣಗೊಳಿಸಬಹುದು ಎಂದು ಹೇಳಲಾಗಿದೆ. ಆದರೆ ಇಂದು ನಗರದಲ್ಲಿ ಈ ಎರಡೂ ಅಂಶಗಳ ಪ್ರಮಾಣ ಉತ್ತಮವಾಗಿದೆ ಎಂದು ಆ್ಯಕ್ಯು ವೆದರ್ ವರದಿ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT