ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ 
ರಾಜ್ಯ

ನವದೆಹಲಿ: ತುಲಾಭಾರದ ವೇಳೆ ತಕ್ಕಡಿ ಕಳಚಿ ಬಿದ್ದು ಪೇಜಾವರ ಶ್ರೀಗಳಿಗೆ ಗಾಯ

ಚಾತುರ್ಮಾಸ್ಯ ಪೂರ್ಣಗೊಳಿಸಿ ಬಂದ ಹಿನ್ನೆಲೆಯಲ್ಲಿ ದೆಹಲಿಯ ಪೇಜಾವರ ಮಠದಲ್ಲಿ ಭಕ್ತರು ಸ್ವಾಮೀಜಿಗೆ ತುಲಾಭಾರ ನಡೆಸುತ್ತಿದ್ದಾಗ ಹಗ್ಗ ತುಂಡಾಗಿ ತಕ್ಕಡಿ ಬಿದ್ದಿದೆ. ಆದರೆ, ಶ್ರೀಗಳಿಗೆ ಯಾವುದೇ ಗಂಭೀರ ಗಾಯವಾಗಿಲ್ಲ .

ಉಡುಪಿ: ತುಲಾಭಾರದ ವೇಳೆ ತಕ್ಕಡಿ ಕಳಚಿ ಬಿದ್ದು ಪೇಜಾವರ ಶ್ರೀಗಳಿಗೆ ಗಾಯವಾಗಿರುವ ಘಟನೆ ನಡೆದಿದೆ. ಚಾತುರ್ಮಾಸ್ಯ ಪೂರ್ಣಗೊಳಿಸಿ ಬಂದ ಹಿನ್ನೆಲೆಯಲ್ಲಿ ದೆಹಲಿಯ ಪೇಜಾವರ ಮಠದಲ್ಲಿ ಭಕ್ತರು ಸ್ವಾಮೀಜಿಗೆ ತುಲಾಭಾರ ನಡೆಸುತ್ತಿದ್ದಾಗ ಹಗ್ಗ ತುಂಡಾಗಿ ತಕ್ಕಡಿ ಬಿದ್ದಿದೆ. ಆದರೆ, ಶ್ರೀಗಳಿಗೆ ಯಾವುದೇ ಗಂಭೀರ ಗಾಯವಾಗಿಲ್ಲ ಎಂದು ಮಠದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ತುಲಾಭಾರದ ವೇಳೆ ತಕ್ಕಡಿ ಹಗ್ಗ ತುಂಡಾದ ಪರಿಣಾಮ ಪೇಜಾವರ ಶ್ರೀಗಳ ತಲೆ ಮೇಲೆ ತಕ್ಕಡಿಯ ಸರಳು ಕಳಚಿ ಬಿದ್ದಿದೆ. ಅದೃಷ್ಟವಶಾತ್ ಶ್ರೀಗಳು ತರಚಿದ ಗಾಯದೊಂದಿಗೆ ಪಾರಾಗಿದ್ದಾರೆ. ದೆಹಲಿ ಪ್ರವಾಸದಲ್ಲಿರುವ ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಲ್ಲಿನ ಪೇಜಾವರ ಮಠಕ್ಕೆ ಭೇಟಿ ನೀಡಿದ ಸಂದರ್ಭ ಘಟನೆ ನಡೆದಿದೆ.

ಇನ್ನು ಘಟನೆ ನಡೆದ ಎರಡು ದಿನದಲ್ಲಿ ಗಾಯ ಪೂರ್ಣ ಮಾಸಿಹೋಗಿದೆ. ಗಾಯದ ಕುರುಹು ಇಲ್ಲದಂತೆ ವಾಸಿಯಾಗಿದೆ. ದೊಡ್ಡ ಗಾಯ ಏನು ಆಗಿಲ್ಲ ನಾನು ಆರಾಮವಾಗಿದ್ದೇನೆ. ಯಾರೂ ಗಾಬರಿಯಾಗಬೇಕಾಗಿಲ್ಲ. ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ದೆಹಲಿಯಲ್ಲಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ