ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ 
ರಾಜ್ಯ

'ಜನರಿಂದ ಅರ್ಜಿ ಸ್ವೀಕರಿಸಿದರೆ ಕಡ್ಡಾಯವಾಗಿ ಸ್ವೀಕೃತಿ ಪತ್ರ ನೀಡಬೇಕು': ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಜನರಿಂದ ಅರ್ಜಿ ಸ್ವೀಕರಿಸುವ ಅಧಿಕಾರಿಗಳು ಕಡ್ಡಾಯವಾಗಿ ಸ್ವೀಕೃತಿ ಪತ್ರ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹಾಸನ: ಜನರಿಂದ ಅರ್ಜಿ ಸ್ವೀಕರಿಸುವ ಅಧಿಕಾರಿಗಳು ಕಡ್ಡಾಯವಾಗಿ ಸ್ವೀಕೃತಿ ಪತ್ರ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹಾಸನ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಮುಖ್ಯಮಂತ್ರಿ, ಸಣ್ಣ ಪುಟ್ಟ ಸಮಸ್ಯೆಗಳಿಗಾಗಿ ಜನರು ಬೆಂಗಳೂರಿನವರೆಗೂ ನನ್ನನ್ನು ಹುಡುಕಿಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಬಾರದು. ಸ್ಥಳೀಯ ಸಮಸ್ಯೆಗಳನ್ನು ಸಕಾಲದಲ್ಲಿ ಪರಿಹರಿಸಬೇಕು. ರೈತರು ಮತ್ತು ಶ್ರಮಿಕರ ಸಮಸ್ಯೆಗಳು ಬಹುತೇಕ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲೇ ಬಗೆಹರಿಸಬೇಕು ಎಂದರು. 

ಅನಗತ್ಯ ಸತಾಯಿಸುವ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಯಾವುದೇ ಪ್ರಭಾವಕ್ಕೂ ಮಣಿಯುವುದಿಲ್ಲ. ಕಠಿಣ ಕ್ರಮ ಖಚಿತ. ಜನರ ಮನೆ ಬಾಗಿಲಿಗೆ ಸರ್ಕಾರವನ್ನು ತಲುಪಿಸಬೇಕು. ಜನರನ್ನು ಸರ್ಕಾರಿ ಕಚೇರಿಗೆ ಅಲೆದಾಡಿಸುವುದು ಭ್ರಷ್ಟಾಚಾರ. ಜನರಿಗೆ ಅಧಿಕಾರಿಗಳ ಅನುಕಂಪ ಬೇಕಾಗಿಲ್ಲ. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದರೆ ಸಾಕು. ಅಧಿಕಾರಿಗಳು ಮತ್ತು ನಾವು ಜನರ ಸೇವಕರು. ಜನರೇ ನಮ್ಮ ಮಾಲೀಕರು. ಜನರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ತೋರಿಸಿದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸರ್ಕಾರ ಎಲ್ಲಾ ವರ್ಗ, ಎಲ್ಲಾ ಜಾತಿ, ಎಲ್ಲಾ ಧರ್ಮಗಳಿಗೂ ಕಾರ್ಯಕ್ರಮಗಳನ್ನು ರೂಪಿಸಿದ್ದು, ಅವುಗಳನ್ನು  ಜನರಿಗೆ ತಲುಪಿಸುವ ಪ್ರಾಮಾಣಿಕ ಕೆಲಸ ಮಾಡಬೇಕು ಎಂದು ನಿರ್ದೇಶಿಸಿದರು. 

ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಯ ಸಾಧನೆ ಶೇ100 ರಷ್ಟು ಸಾಧಿಸಬೇಕು. ಆದರೆ ಹಾಸನ ಜಿಲ್ಲೆಯಲ್ಲಿ ಇನ್ನೂ ಶೇ.90 ರಷ್ಟಕ್ಕೆ ನಿಂತಿದೆ. ಇದನ್ನು ಶೇ 100 ರಷ್ಟು ಪೂರೈಸಬೇಕು. ನೋಂದಣಿ ಮಾಡಿಸಿರುವ ಪ್ರತಿಯೊಬ್ಬರಿಗೂ ಗ್ಯಾರಂಟಿ ಸ್ಕೀಂಗಳು ತಲುಪಬೇಕು.  ಹಾಸನ, ಅರಸೀಕರೆ, ಅರಕಲಗೂಡು ತಾಲ್ಲೂಕುಗಳಲ್ಲಿ ಗ್ಯಾರಂಟಿ ಯೋಜನೆಗಳು ಶೇ 90 ರಷ್ಟನ್ನೂ ತಲುಪದೆ ಇರಲು ಯಾರು ಹೊಣೆ? ಎಂದು ಅಧಿಕಾರಿಗಳು ಮುಖ್ಯಮಂತ್ರಿ ಪ್ರಶ್ನಿಸಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Unnao Rape Case: ಕುಲದೀಪ್ ಸಿಂಗ್ ಸೆಂಗಾರ್'ಗೆ ತೀವ್ರ ಹಿನ್ನಡೆ, ಜೀವಾವಧಿ ಶಿಕ್ಷೆ ರದ್ದುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

ಡೆಹ್ರಾಡೂನ್‌ನಲ್ಲಿ ತ್ರಿಪುರಾ ವಿದ್ಯಾರ್ಥಿಯ ಹತ್ಯೆ: 'ಭಯಾನಕ ದ್ವೇಷ' ದ ಅಪರಾಧ, BJP ವಿರುದ್ಧ ರಾಹುಲ್ ಗಾಂಧಿ ಕಿಡಿ!

Horrific Video: Mahindra Bolero ವಾಹನದ ಮೇಲೆ ಬಿದ್ದ ಟ್ರಕ್, ಕಾರು ಅಪ್ಪಚ್ಚಿ, ಚಾಲಕ ಸಾವು!

ಅರಾವಳಿ ಬೆಟ್ಟಗಳು, ಶ್ರೇಣಿಗಳ ಕುರಿತ ವ್ಯಾಖ್ಯಾನ: ನ. 20 ರ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ!

ದೆಹಲಿ ವಾಯು ಗುಣಮಟ್ಟ ಅತ್ಯಂತ 'ಗಂಭೀರ'; ದಟ್ಟವಾದ ಮಂಜು; 128 ವಿಮಾನಗಳು ರದ್ದು

SCROLL FOR NEXT