ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಬೆಂಗಳೂರು: ಮಹಿಳೆ ಸ್ನಾನ ಮಾಡುವಾಗ ವೀಡಿಯೋ ಚಿತ್ರೀಕರಣ; ಫಿಟ್ನೆಸ್ ಸೆಂಟರ್ ಕೋಚ್ ಬಂಧನ

ತರಬೇತಿಯ ನಂತರ ಸ್ನಾನ ಮಾಡುತ್ತಿರುವ ಮಹಿಳೆಯ ಫೋಟೋ ಮತ್ತು ವೀಡಿಯೊ ಮಾಡುತ್ತಿದ್ದ ಪ್ರತಿಷ್ಠಿತ ಫಿಟ್‌ನೆಸ್ ಸೆಂಟರ್‌ನ ತರಬೇತುದಾರನನ್ನು ಬಂಧಿಸಲಾಗಿದೆ.

ಸಾಂದರ್ಭಿಕ ಚಿತ್ರ
Shilpa D
Updated On : 9 Nov 2023, 3:53 pm

ಬೆಂಗಳೂರು: ತರಬೇತಿಯ ನಂತರ ಸ್ನಾನ ಮಾಡುತ್ತಿರುವ ಮಹಿಳೆಯ ಫೋಟೋ ಮತ್ತು ವೀಡಿಯೊ ಮಾಡುತ್ತಿದ್ದ ಪ್ರತಿಷ್ಠಿತ ಫಿಟ್‌ನೆಸ್ ಸೆಂಟರ್‌ನ ತರಬೇತುದಾರನನ್ನು ಬಂಧಿಸಲಾಗಿದೆ.

ಬಾಣಸವಾಡಿ ಪ್ರದೇಶದ ಎನ್‌ಆರ್‌ಐ ಲೇಔಟ್ ಬಳಿ ಇರುವ ಫಿಟ್ ನೆಸ್ ಸೆಂಟರ್ ಕೋಚ್ ವಿರುದ್ಧ 29 ವರ್ಷದ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಮಹಿಳೆ ಬಾತ್ ರೂಂನ ಕಿಟಕಿಯ ಬಳಿ ಮೊಬೈಲ್ ಫೋನ್ ನೋಡಿದ್ದಾರೆ, ಆಕೆ ಹೊರಗೆ ಬಂದಾಗ, ಅಲ್ಲಿ ಯಾರೂ ಕಾಣಲಿಲ್ಲ. ಹೀಗಾಗಿ ಅಲ್ಲಿದ್ದ ಇನ್ನೊಬ್ಬ ತರಬೇತುದಾರನನ್ನು ಪ್ರಶ್ನಿಸಿದ್ದಾರೆ.  ಭಾನುವಾರ ಬೆಳಗ್ಗೆ 9 ರಿಂದ 11 ಗಂಟೆಯ ನಡುವೆ ಈ ಘಟನೆ ನಡೆದಿದೆ.

ತನ್ನ ಅನುಮಾನವನ್ನು ದೃಢಪಡಿಸಲು ಆಕೆ ಮ್ಯಾನೇಜರ್‌ಗೆ ದೂರು ನೀಡಿ, ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ್ದಾರೆ. ಈ ವೇಳೆ ಆರೋಪಿಯು ಫೋಟೋ ತೆಗೆಯುವುದು ಕಂಡು ಬಂದಿದೆ. ಸಂತ್ರಸ್ತೆ ಐಟಿ ಉದ್ಯೋಗಿಯಾಗಿದ್ದು, ರಾಮಮೂರ್ತಿನಗರದ ಅಕ್ಷಯನಗರ ನಿವಾಸಿಯಾಗಿದ್ದಾರೆ. ತನ್ನ ಕುಟುಂಬವನ್ನು ಸಂಪರ್ಕಿಸಿದ ನಂತರ ಮಹಿಳೆ ಸೋಮವಾರ ತನ್ನ ಫಿಟ್‌ನೆಸ್ ಕೋಚ್ ಎಚ್‌ಎಸ್ ಸಿಬಿಯಾಚನ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.

Advertisement

Advertisement

ಇದನ್ನೂ ಓದಿ: ತಿರುಚಿದ ವಿಡಿಯೋ ಮೂಲಕ ಬಿಜೆಪಿ ನಾಯಕಿಗೆ ಬ್ಲ್ಯಾಕ್‌ಮೇಲ್ ಆರೋಪ; ಪತ್ರಕರ್ತನ ವಿರುದ್ಧ ಪ್ರಕರಣ ದಾಖಲು

ಮಹಿಳೆ ಎರಡು ತಿಂಗಳ ಹಿಂದೆ ಬ್ಯಾಡ್ಮಿಂಟನ್ ಮತ್ತು ಈಜು ಕಲಿಯಲು ಫಿಟ್‌ನೆಸ್ ಸೆಂಟರ್‌ಗೆ ಸೇರಿದ್ದರು. ಭಾನುವಾರ ಬೆಳಗ್ಗೆ ಈಜು ತರಗತಿ ಮುಗಿಸಿ ಸ್ನಾನ ಮಾಡುತ್ತಿದ್ದಾಗ ಬಾತ್ರೂಮ್‌ನ ಕಿಟಕಿಯ ಮೂಲಕ ಯಾರೋ ಮೊಬೈಲ್‌ನಲ್ಲಿ ಫೋಟೋ ತೆಗೆಯುತ್ತಿರುವುದನ್ನು ನೋಡಿದ್ದಾರೆ. ತಕ್ಷಣ ಹೊರಗೆ ಬಂದರು, ಆದರೆ ಅಲ್ಲಿ ಯಾರೂ ಇರಲಿಲ್ಲ. ನಂತರ ಆಕೆ ಮ್ಯಾನೇಜರ್ ದೀಪಕ್ ಅವರನ್ನು ಸಂಪರ್ಕಿಸಿದರು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು ಮತ್ತು ಆಕೆಯ ತರಬೇತುದಾರ ತನ್ನ ಛಾಯಾಚಿತ್ರಗಳನ್ನು ತೆಗೆದುಕೊಳ್ಳುವುದರ ಬಗ್ಗೆ ತಿಳಿಯಿತು ಎಂದು ಸಂತ್ರಸ್ತೆಯ ದೂರಿನಲ್ಲಿ ತಿಳಿಸಲಾಗಿದೆ.

ತರಬೇತುದಾರನನ್ನು ಬಂಧಿಸಲಾಗಿದೆ. ಈತ ಕೇರಳ ಮೂಲದವನು. ಆತನ ಮೊಬೈಲ್‌ನಿಂದ ಫೋಟೋ ಮತ್ತು ವೀಡಿಯೊಗಳನ್ನು ಅಳಿಸಿದ್ದಾರೆ ಎಂದು ವರದಿ ಮಾಡಿದ್ದರಿಂದ ಅವರ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡು ಡೇಟಾವನ್ನು ಹಿಂಪಡೆಯಲು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ಆಂಧ್ರ ಪ್ರದೇಶದ ಉದ್ಯಮಿಗೆ ನಿವೇಶನ ಕೊಡಿಸುವುದಾಗಿ ವಂಚನೆ: ಬೆಂಗಳೂರಿನ ಐವರ ಬಂಧನ

ಜಿಮ್‌ನ ಮ್ಯಾನೇಜರ್ ಮತ್ತು ಇತರ ತರಬೇತುದಾರರಿಗೆ ಆರೋಪಿ ವಿರುದ್ಧ ಈ ಹಿಂದೆ ಯಾವುದೇ ರೀತಿಯ ದೂರು ದಾಖಲಾಗಿದೆಯೆ ಎಂದು ಪರಿಶೀಲಿಸಲು ಸೂಚಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಆತ ಹವ್ಯಾಸಿ ಅಪರಾಧಿಯಲ್ಲ. ಮಹಿಳೆ ಗಂಭೀರ ಆರೋಪ ಮಾಡಿರುವ ಕಾರಣ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಮ್ ಮ್ಯಾನೇಜ್‌ಮೆಂಟ್‌ಗೆ ಸೂಚಿಸಿದ್ದೇವೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 ಸಿ ಅಡಿಯಲ್ಲಿ ವೋಯರಿಸಂ ಪ್ರಕರಣವ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement