ಚಾಲಕ ರಹಿತ ಮೆಟ್ರೋ ರೈಲು 
ರಾಜ್ಯ

ನಮ್ಮ ಮೆಟ್ರೋ ಗೆ ಮೊಟ್ಟ ಮೊದಲ ಚಾಲಕ ರಹಿತ ರೈಲು; ಚೀನಾದಲ್ಲಿ ತಯಾರು!

ಮ್ಮ ಮೆಟ್ರೋ ಯೋಜನೆಯನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಮೆಟ್ರೊ ಕೋಚ್‌ಗಳ ಪೂರೈಕೆ ಜವಾಬ್ದಾರಿಯನ್ನು ಚೀನಾ ಮೂಲದ ಚೀನಾ ರೈಲ್ವೆ ರೋಲಿಂಗ್‌ ಸ್ಟಾಕ್‌ ಕಾರ್ಪೊರೇಷನ್‌ (ಸಿಆರ್‌ಆರ್‌ಸಿ) ಗೆ ನೀಡಲಾಗಿದೆ.

ಬೆಂಗಳೂರು:  ನಮ್ಮ ಮೆಟ್ರೋ ಯೋಜನೆಯನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಮೆಟ್ರೊ ಕೋಚ್‌ಗಳ ಪೂರೈಕೆ ಜವಾಬ್ದಾರಿಯನ್ನು ಚೀನಾ ಮೂಲದ ಚೀನಾ ರೈಲ್ವೆ ರೋಲಿಂಗ್‌ ಸ್ಟಾಕ್‌ ಕಾರ್ಪೊರೇಷನ್‌ (ಸಿಆರ್‌ಆರ್‌ಸಿ) ಗೆ ನೀಡಲಾಗಿದೆ. ಇದರ ಭಾಗವಾಗಿ ಎರಡು ರೈಲುಗಳನ್ನು (12 ಬೋಗಿ) ಸಿದ್ಧಗೊಳಿಸಿದ್ದು, ನವೆಂಬರ್ 20 ರೊಳಗೆ ಚೆನ್ನೈ ಬಂದರಿಗೆ ಪ್ರಯಾಣ ಬೆಳೆಸುವ ನಿರೀಕ್ಷೆಯಿದೆ.

ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಮೂಲಕ ಆರ್ ವಿ ರಸ್ತೆ-ಬೊಮ್ಮಸಂದ್ರ ಲೈನ್ (ಹಳದಿ ರೇಖೆ) ಈ ರೈಲಿನ ಆಗಮನಕ್ಕಾಗಿ ಕಾಯುತ್ತಿದೆ, ರೀಚ್-5 ಎಲಿವೇಟೆಡ್ ಲೈನ್, 19.15 ಕಿಮೀ ಚಾಲನೆಯಲ್ಲಿದೆ, ಮೆಟ್ರೋ ನೆಟ್ವರ್ಕ್ನಲ್ಲಿ ದಿನಕ್ಕೆ ಸರಾಸರಿ 7.5 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದು, ಈ ಮಾರ್ಗದಲ್ಲಿ ಸುಮಾರು 1.5 ಲಕ್ಷ ದೈನಂದಿನ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದೆ. ಇದು ಜಯದೇವ ಆಸ್ಪತ್ರೆಯಲ್ಲಿ ಇಂಟರ್‌ಚೇಂಜ್‌ನೊಂದಿಗೆ 16 ನಿಲ್ದಾಣಗಳನ್ನು ಹೊಂದಿರುತ್ತದೆ ಮತ್ತು ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್‌ಗೆ ಡಬಲ್ ಡೆಕ್ಕರ್ ಫ್ಲೈಓವರ್ ಹೊಂದಿರುತ್ತದೆ.

ಆರ್‌.ವಿ.ರಸ್ತೆ- ಬೊಮ್ಮಸಂದ್ರ ನಡುವಿನ ರೀಚ್‌ -5 ಮಾರ್ಗದಲ್ಲಿ ತಲಾ ಆರು ಬೋಗಿಗಳ 12 ರೈಲುಗಳು ಸಂಚರಿಸಲಿವೆ. ಈ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೊ ಓಡಿಸಲು ಬಿಎಂಆರ್‌ಸಿಎಲ್‌ ಸಿದ್ಧತೆ ನಡೆಸಿದೆ. ಕಮ್ಯುನಿಕೇಷನ್‌ ಬೇಸ್ಡ್‌ ಟ್ರೇನ್‌ ಕಂಟ್ರೊಲ್‌ ಸಿಗ್ನಲಿಂಗ್‌ ಸಿಸ್ಟಂ ತಂತ್ರಜ್ಞಾನವನ್ನು ಎರಡನೇ ಹಂತದ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತದೆ. ರೈಲು ಸಂಚಾರವನ್ನು ನಿಯಂತ್ರಣ ಕೊಠಡಿಯಿಂದಲೇ ನಿರ್ವಹಣೆ ಮಾಡಲಾಗುತ್ತದೆ.

ಎಲ್ಲವೂ ಯೋಜಿಸಿದಂತೆ ನಡೆದರೆ, ಮೊದಲ ರೈಲು ಸೆಟ್ ನವೆಂಬರ್ 20 ರಂದು ಚೀನಾದಿಂದ ಚೆನ್ನೈಗೆ ಹೊರಡಲಿದೆ. ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ರಸ್ತೆ ಮೂಲಕ ಬೆಂಗಳೂರಿಗೆ ತರಲಾಗುವುದು. ಡಿಸೆಂಬರ್ 20 ಅಥವಾ ಅದಕ್ಕೂ ಮೊದಲು ರೈಲು ಇಲ್ಲಿಗೆ ಬರಲಿದೆ. ನಾವು ಜನವರಿ 2024 ರಿಂದ ಮೂರು ತಿಂಗಳವರೆಗೆ ಪ್ರಯೋಗಗಳನ್ನು ಪ್ರಾರಂಭಿಸಬಹುದು. ಮೆಟ್ರೋ ರೈಲು ಸುರಕ್ಷತೆಗಾಗಿ ಆಯುಕ್ತರು ಒಪ್ಪಿಗೆ ನೀಡಿದ ನಂತರ ರೀಚ್-5 ಗಾಗಿ ಏಪ್ರಿಲ್ 2024 ರ ಗಡುವನ್ನು ಪೂರೈಸಲಾಗುತ್ತದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

12 ಕೋಚ್‌ಗಳ ಶೆಲ್‌ಗಳು 25 ದಿನಗಳ ಹಿಂದೆ ಕೋಲ್ಕತ್ತಾ ಬಳಿಯ ಟಿಟಾಗರ್ ವ್ಯಾಗನ್‌ಗೆ ಬಂದಿದ್ದು, ಅವುಗಳನ್ನು ಎರಡು ಹೊಸ ರೈಲುಗಳಾಗಿ ಸಿದ್ಧಪಡಿಸಲು ವಿವಿಧ ಸೌಲಭ್ಯಗಳನ್ನು ಅಳವಡಿಸಬೇಕಾಗುತ್ತದೆ, ಮುಂದಿನ ವರ್ಷ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.. ಈ ಮಾರ್ಗದಲ್ಲಿಯೇ ಏಳು ರೈಲುಗಳ ಅಗತ್ಯವಿದೆ ಎಂದು ಹೇಳಲಾಗಿದೆ.

ಬಿಎಂಆರ್‌ಸಿಎಲ್‌ನಿಂದ ಈಗಾಗಲೇ ಅನುಮತಿ ದೊರೆತಿದ್ದು ತಂಡವು ಈ ವಾರದ ಆರಂಭದಲ್ಲಿ ಮರಳಿದೆ ಎಂದು ಬಿಎಂಆರ್ ಸಿಎಂಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಮೊದಲ ರೈಲಿನ ಆಗಮನಕ್ಕೆ ಮೊದಲಿನ ಗಡುವು ಅಕ್ಟೋಬರ್ 16 ಆಗಿತ್ತು, ಆದರೆ ಅದನ್ನು ಸಾದ್ಯವಾಗಲಿಲ್ಲ. 35 ರೈಲು ಸೆಟ್‌ಗಳಿಗಾಗಿ ಮಾಡಲಾದ ಆರ್ಡರ್‌ನ ಭಾಗವಾಗಿದ್ದು, ಭವಿಷ್ಯದಲ್ಲಿ ಟಿಟಾಘರ್‌ನಿಂದ ಹಂತ ಹಂತಗಳಲ್ಲಿ ಸರಬರಾಜು ಮಾಡಲಾಗುವುದು ಎಂದು ಹೇಳಿದ್ದಾರೆ.

ಈ ಮಾರ್ಗದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳ ಸ್ಥಿತಿಗತಿ ಕುರಿತು ಮಾತನಾಡಿದ ಪರ್ವೇಜ್, ಜಯದೇವ ನಿಲ್ದಾಣ ಪೂರ್ಣಗೊಂಡಿದ್ದು, ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಲ್ದಾಣದ ಮುಂಭಾಗ ಕಾಮಗಾರಿ ನಡೆಯುತ್ತಿದೆ.  ಮೂರನೇ ರೈಲಿನ (ರೈಲು ಓಡಿಸಲು ವಿದ್ಯುತ್ ಪೂರೈಸುವ) ಕೆಲಸ ನಡೆಯುತ್ತಿದೆ. ಸಿಗ್ನಲಿಂಗ್‌ಗೆ ಸಂಬಂಧಿಸಿದಂತೆ ಕೆಲವು ಹೊರಾಂಗಣ ಕೆಲಸಗಳು ಸಹ ಪ್ರಗತಿಯಲ್ಲಿವೆ. ಮೊದಲ ರೈಲು ಹೆಬ್ಬಗೋಡಿ ಡಿಪೋ ತಲುಪುವ ವೇಳೆಗೆ ಇದೆಲ್ಲವೂ ಸಿದ್ಧವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT