ರಾಜ್ಯ

ದೀಪಾವಳಿ: ಅವಘಡಕ್ಕೂ ಮುನ್ನ ಚಿಕಿತ್ಸೆ ನೀಡಲು ನಗರದ ಆಸ್ಪತ್ರೆಗಳು ಸಜ್ಜು

Manjula VN

ಬೆಂಗಳೂರು: ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿಯಿಂದಾಗಿ ಅವಘಡಗಳು ಸಂಭವಿಸಿದರೆ ಪರಿಸ್ಥಿತಿ ನಿಭಾಯಿಸಲು ನಗರದ ಆಸ್ಪತ್ರೆಗಳು ಸಿದ್ಧತೆಗಳನ್ನು ಸಜ್ಜುಗೊಂಡಿವೆ.

ಪರಿಸ್ಥಿತಿ ನಿಭಾಯಿಸಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಮಹಾಬೋಧಿ ಸುಟ್ಟಗಾಯಗಳ ವಾರ್ಡ್ ನಲ್ಲಿ 24/7 ಸೇವೆ ನೀಡಲು ಸಿದ್ಧತೆಗಳನ್ನು ನಡೆಸಲಾಗಿದೆ.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (BMCRI)ಯ ಡೀನ್ ಡಾ.ರಮೇಶ್ ಕೃಷ್ಣ ಕೆ ಅವರು ಮಾತನಾಡಿ, ಸಾಮೂಹಿಕ ಗಾಯ, ಸಾವು-ನೋವುಗಳ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸಲು ಉಪಕರಣ, ಸಾಮಾಗ್ರಿಗಳೊಂದಿಗೆ ಸಿದ್ಧವಾಗಿದ್ದೇವೆ. ತೀವ್ರವಾದ ಸುಟ್ಟಗಾಯಗಳಿಂದ ಬಳಲುತ್ತಿರುವವರ ಆರೈಕೆಗಾಗಿ ಪ್ರತ್ಯೇಕ ಪ್ಲಾಸ್ಟಿಕ್ ಸರ್ಜರಿ ಘಟಕ, ICU ಮತ್ತು ವೆಂಟಿಲೇಟರ್ ಸೌಲಭ್ಯಗಳು ಮತ್ತು ಪ್ರತ್ಯೇಕ ಕ್ಯಾಬಿನ್‌ಗಳು ಮತ್ತು ಪ್ರತ್ಯೇಕ ಹಾಸಿಗೆಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನು ನಗರದ ಮಿಂಟೋ ಆಸ್ಪತ್ರೆಯಲ್ಲಿಯೂ ಪರಿಸ್ಥಿತಿ ನಿಭಾಯಿಸಲು ಸಿದ್ಧತೆ ನಡೆಸಲಾಗಿದೆ. ಆಸ್ಪತ್ರೆಯಲ್ಲಿ ಪಟಾಕಿ ಸಿಡಿತದಿಂದ ಗಾಯಗೊಂಡು ಚಿಕಿತ್ಸೆಗೆ ಬರುವ ಮಕ್ಕಳಿಗಾಗಿ ಆಸ್ಪತ್ರೆ 15 ಬೆಡ್​​ಗಳಿರುವ ಪ್ರತ್ಯೇಕ ವಾರ್ಡ್ ಆರಂಭಿಸಲಾಗಿದೆ. ಯುವಕರಿಗೆ 10 ಬೆಡ್, ಮಹಿಳೆಯರಿಗೆ 10 ಬೆಡ್ ಸೇರಿದಂತೆ ಒಟ್ಟು 35 ಬೆಡ್​ಗಳನ್ನ ಮೀಸಲಿರಿಸಲಾಗಿದೆ. ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಬೇಕಾದ ಸಿದ್ಧತೆಗಳನ್ನೂ ಮಾಡಿಕೊಂಡಿದ್ದು, ಔಷಧಿಗಳನ್ನು, ಐ ಡ್ರಾಪ್ಸ್ ಎಲ್ಲವನ್ನು ವಾರ್ಡ್​ಗಳಲ್ಲಿ ಶೇಖರಿಸಿಡಲಾಗಿದೆ.

ನಾರಾಯಣ ನೇತ್ರಾಲಯದಲ್ಲಿ ನವೆಂಬರ್ 12-14 ರವರೆಗೆ ದೀಪಾವಳಿ ಸಮಯದಲ್ಲಿ ಪಟಾಕಿಗಳಿಂದಾಗಿ ಸಂಬಂಧಿಸಿದ ಕಣ್ಣಿನ ಗಾಯಗಳಿಗೆ ಚಿಕಿತ್ಸೆಗಾಗಿ 24/7 ತುರ್ತು ಚಿಕಿತ್ಸಾ ಘಟಕವನ್ನು ತೆರಿದಿದೆ.

ಡಾ ಅಗರ್‌ವಾಲ್ಸ್ ಕಣ್ಣಿನ ಆಸ್ಪತ್ರೆಯ ಕ್ಲಿನಿಕಲ್ ಸೇವೆಗಳ ಮುಖ್ಯಸ್ಥ ಡಾ ಬಿಂದಿಯಾ ಹಪಾನಿ ಮಾತನಾಡಿ, “ಪಟಾಕಿಗಳನ್ನು ಹೊಡೆಯವವರು ಅಷ್ಟೇ ಅಲ್ಲದೆ, ಅಕ್ಕಪಕ್ಕ ನಿಲ್ಲುವ ಜನರೂ ಕೂಡ ಅಪಾಯವನ್ನು ಎದುರಿಸುವುದುಂಟು ಎಂದು ಹೇಳಿದ್ದಾರೆ.

ಪಟಾಕಿ ಸಿಡತದ ವೇಳೆ ಎದುರಾಗುವ ಗಾಯಗಳ ತಪ್ಪಿಸಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಪಟಾಕಿಗಳಿಗೆ ಗನ್ ಪೌಡರ್ ಬಳಸಲಾಗಿರುತ್ತದೆ. ಬಹಳ ಎಚ್ಚರಿಕೆಯಿಂದ ಇದ್ದರೂ ಅನಿರೀಕ್ಷಿತವಾಗಿ ಸ್ಫೋಟಗಳು ಸಂಭವಿಸುತ್ತವೆ ಎಂದು ತಿಳಿಸಿದ್ದಾರೆ.

ತುರ್ತು ಸಹಾಯವಾಣಿ...

  • ವಿಕ್ಟೋರಿಯಾ ಆಸ್ಪತ್ರೆ: 7498809105, 9740322179, 8197969128, 9994584495
  • ಮಿಂಟೋ ಕಣ್ಣಿನ ಆಸ್ಪತ್ರೆ: 9481740137, 080-26707176
  • ಡಾ ಅಗರವಾಲ್ ಕಣ್ಣಿನ ಆಸ್ಪತ್ರೆ: 8884477612
  • ನಾರಾಯಣ ನೇತ್ರಾಲಯ: ರಾಜಾಜಿನಗರ - 080-66121641
  • ನಾರಾಯಣ ನೇತ್ರಾಲಯ: (ಬೊಮ್ಮಸಂದ್ರ) - 9902821128
SCROLL FOR NEXT