ಟೊಮೊಟೋ 
ರಾಜ್ಯ

ವಿಜ್ಞಾನಿಗಳಿಂದ ಹೊಸ ಹವಾಮಾನ, ಕೀಟ-ನಿರೋಧಕ ಟೊಮೆಟೊ ತಳಿ ಆವಿಷ್ಕಾರ

ಮಹತ್ವದ ಬೆಳವಣಿಗೆಯಲ್ಲಿ ಭಾರತದ ವಿಜ್ಞಾನಿಗಳ ತಂಡವೊಂದು ಹೊಸ ಹವಾಮಾನ, ಕೀಟ-ನಿರೋಧಕ ಟೊಮೆಟೊ ತಳಿ ಆವಿಷ್ಕಾರಕ್ಕೆ ಮುಂದಾಗಿದೆ.

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಭಾರತದ ವಿಜ್ಞಾನಿಗಳ ತಂಡವೊಂದು ಹೊಸ ಹವಾಮಾನ, ಕೀಟ-ನಿರೋಧಕ ಟೊಮೆಟೊ ತಳಿ ಆವಿಷ್ಕಾರಕ್ಕೆ ಮುಂದಾಗಿದೆ.

ಹೌದು.. ಪ್ರತಿ ವರ್ಷ, ಗ್ರಾಹಕರು ಟೊಮೇಟೊ ಬೆಲೆಯಲ್ಲಿ ಏರಿಕೆಯಾಗುತ್ತಿದೆ ಎಂದು ದೂರುತ್ತಾರೆ. ಒಮ್ಮೆ ಪ್ರತೀ ಕೆಜಿಗೆ 300 ರೂ ಇದ್ದ ಟೊಮೆಟೋ, ಬಳಿಕ ಕೆಜಿಗೆ 50 ಪೈಸೆಗೆ ಇಳಿದ ದಿನಗಳೂ ಇವೆ. ಎರಡರಲ್ಲೂ ಗ್ರಾಹಕರು ಮತ್ತು ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈಗ ಸಮಸ್ಯೆಯನ್ನು ಪರಿಹರಿಸಲು, ಗಾಂಧಿ ಕೃಷಿ ವಿಜ್ಞಾನ ಕೇಂದ್ರ (GKVK), ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ICAR)-ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರಲ್ ರಿಸರ್ಚ್ (IIHR) ಯ ವಿಜ್ಞಾನಿಗಳು ಹೊಸ ಹವಾಮಾನಕ್ಕೆ ಸರಿ ಹೊಂದುವ ಹೊಸ ವೈವಿಧ್ಯಮಯ ಟೊಮೆಟೊ ತಳಿಗಳ ಆವಿಷ್ಕಾರಕ್ಕೆ ಮುಂದಾಗಿದ್ದಾರೆ. ವಿಶೇಷ ತಳಿಯ ಟೊಮೆಟೋ ರೋಗ-ನಿರೋಧಕ, ಹೆಚ್ಚಿನ ಹಗಲಿನ ತಾಪಮಾನ ಮತ್ತು ಕಡಿಮೆ ರಾತ್ರಿ ತಾಪಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಮಹೇಶ್ವರಪ್ಪ ಎಚ್.ಪಿ. ಅವರು, "ನಾವು ಹೊಸ ಹವಾಮಾನ-ಸ್ಥಿತಿಸ್ಥಾಪಕ ಮತ್ತು ಕೀಟ-ನಿರೋಧಕ ವೈವಿಧ್ಯತೆಯ ಟೊಮೆಟೋ ತಳಿ ಕುರಿತು ಕೆಲಸ ಮಾಡುತ್ತಿದ್ದೇವೆ. ನಾವು ಹೊಸ ಸಂಶೋಧನಾ ತಂತ್ರಗಳೊಂದಿಗೆ ರೈತರನ್ನು ಬಲಪಡಿಸುವ ಕೆಲಸ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಗಳತ್ತ ಗಮನಹರಿಸುತ್ತೇವೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಆಯೋಜಿಸಿದ್ದ ಟೊಮೇಟೊ ಸಮ್ಮೇಳನದಲ್ಲಿ ರೈತರೊಂದಿಗೆ ಚರ್ಚಿಸಲಾಗಿದ್ದು, ಹೊಸ ಹೈಬ್ರಿಡ್ ಬೀಜಗಳನ್ನು ಕೃಷಿಗಾಗಿ ಖರೀದಿಸಲು ಅವರು ಹೆಚ್ಚಿನ ಆಸಕ್ತಿಯನ್ನು ತೋರಿಸಿದ್ದಾರೆ ಎಂದು ಅವರು ಹೇಳಿದರು.

ICAR- IIHR ನ ವಿಜ್ಞಾನಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ನೊಂದಿಗೆ ಮಾತನಾಡಿ, ಆಗಾಗ್ಗೆ ಹಗಲಿನ ತಾಪಮಾನವು 30 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದಾಗ ಮತ್ತು ರಾತ್ರಿಯಲ್ಲಿ 21 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾದಾಗ, ಟೊಮೆಟೋ ಗಿಡದ ಹೂವುಗಳು ಉದುರುತ್ತವೆ. ಇದು ಒಟ್ಟಾರೆ ಟೊಮೆಟೊ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನಾವು 38 ಡಿಗ್ರಿ ಸೆಲ್ಸಿಯಸ್ ಮತ್ತು ರಾತ್ರಿಯಲ್ಲಿ 18 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನವನ್ನು ತಡೆದುಕೊಳ್ಳುವ ಹೊಸ ತಳಿಯನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದೇವೆ. ಶಾಖ ಸಹಿಷ್ಣುತೆಯು ಒಂದು ಪ್ರಮುಖ ಕಾಳಜಿಯಾಗಿದೆ. ಅಂತೆಯೇ ಈ ವಿಶೇಷ ತಳಿಯ ಟೊಮೆಟೋದಲ್ಲಿ ರುಚಿಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಿಜ್ಞಾನಿ ಹೇಳಿದರು.

ವರ್ಷದಿಂದ ವರ್ಷಕ್ಕೆ ಟೊಮೆಟೊ ಬೆಲೆ ಹೆಚ್ಚುತ್ತಿರುವ ದಿನಗಳ ಸಂಖ್ಯೆ ಹೆಚ್ಚುತ್ತಿದೆ. ಬದಲಾದ ಹವಾಮಾನ ಪರಿಸ್ಥಿತಿಗಳಲ್ಲಿ ಬಿಸಿಲಿನ ದಿನಗಳ ಸಂಖ್ಯೆಯಲ್ಲಿ ಏರಿಕೆ ಮತ್ತು ಮಳೆಯ ದಿನಗಳಲ್ಲಿ ಇಳಿಕೆ ಕಂಡುಬಂದಿದೆ. ಇದರಿಂದ ರೈತರು ಹೆಚ್ಚು ತೊಂದರೆ ಅನುಭವಿಸುವಂತಾಗಿದೆ. ಪ್ರಸ್ತುತ ಹೈಬ್ರಿಡ್ ಬೀಜಗಳ ಬೆಲೆ 10 ಗ್ರಾಂಗೆ ಸುಮಾರು 300-400 ರೂ ಇದ್ದು, ಆದ್ದರಿಂದ ಒಂದು ಎಕರೆಗೆ, ರೈತನಿಗೆ ಸುಮಾರು 20 ಗ್ರಾಂ ಬೀಜಗಳು ಬೇಕಾಗುತ್ತವೆ. ಮಾವು ಅಥವಾ ಅಕ್ಕಿಯ ಸಂದರ್ಭದಲ್ಲಿ ಭಿನ್ನವಾಗಿ ತರಕಾರಿಗಳಿಗೆ ಬಂದಾಗ ರೈತರು ಹೈಬ್ರಿಡ್ ಬೀಜದ ಪ್ರಭೇದಗಳನ್ನು ಸ್ವಾಗತಿಸುತ್ತಾರೆ. ತರಕಾರಿ ಮಾರುಕಟ್ಟೆಗೆ ಗ್ರಾಹಕರ ಆದ್ಯತೆ ಇಲ್ಲ ಎಂದು ಜಿಕೆವಿಕೆ ವಿಜ್ಞಾನಿ ವಿವರಿಸಿದರು. 

ಕರ್ನಾಟಕವು ದೊಡ್ಡ ಟೊಮೆಟೊ ಮಾರುಕಟ್ಟೆಯನ್ನು ಹೊಂದಿದ್ದರೆ, ಮಧ್ಯಪ್ರದೇಶವು ದೊಡ್ಡದಾಗಿದೆ ಎಂದು ಸಂಶೋಧಕರು ವಿವರಿಸಿದರು. ಆಂಧ್ರಪ್ರದೇಶ, ಗುಜರಾತ್, ಮತ್ತು ಮಹಾರಾಷ್ಟ್ರಗಳಲ್ಲಿ ದೊಡ್ಡ ಪ್ರದೇಶಗಳು ಸಹ ಕೃಷಿಯಲ್ಲಿವೆ, ಪ್ರತಿಯೊಂದೂ ಸಮೂಹಗಳಲ್ಲಿ ವಿವಿಧ ತಳಿಗಳನ್ನು ಬೆಳೆಯುತ್ತವೆ. ಆದರೆ ಈ ಹೊಸ ಹವಾಮಾನ-ನಿರೋಧಕ ತಳಿಯು ಭಾರತದಾದ್ಯಂತ ರೈತರಿಗೆ ಪ್ರಯೋಜನಕಾರಿಯಾಗಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT