ಸಂಗ್ರಹ ಚಿತ್ರ 
ರಾಜ್ಯ

'ಕಾಲ್ ಬಿಫೋರ್ ಯು ಡಿಗ್': ಆ್ಯಪ್ ಬಗ್ಗೆ ಅಧಿಕಾರಿಗಳಿಗೇ ಮಾಹಿತಿ ಇಲ್ಲ...!

ಭೂಮಿಯನ್ನು ಅಗೆಯುವುದಕ್ಕೂ ಮುನ್ನ 'ಕಾಲ್ ಬಿಫೋರ್ ಯು ಡಿಗ್' ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿ, ಅನುಮತಿ ಪಡೆಯುವುದು ಅಗತ್ಯವಿದೆ. ಇದರ ಬಗ್ಗೆ ನಿಮಗೆಷ್ಟು ಗೊತ್ತು? ಸಾಮಾನ್ಯ ಜನರಿಗಿರಲಿ ಸರ್ಕಾರಿ ಸಂಸ್ಥೆಗಳಿಗೂ ಈ ಆ್ಯಪ್ ಬಗ್ಗೆ ಮಾಹಿತಿ ತಿಳಿದಿಲ್ಲದಂತಾಗಿದೆ.

ಬೆಂಗಳೂರು: ಭೂಮಿಯನ್ನು ಅಗೆಯುವುದಕ್ಕೂ ಮುನ್ನ 'ಕಾಲ್ ಬಿಫೋರ್ ಯು ಡಿಗ್' ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿ, ಅನುಮತಿ ಪಡೆಯುವುದು ಅಗತ್ಯವಿದೆ. ಇದರ ಬಗ್ಗೆ ನಿಮಗೆಷ್ಟು ಗೊತ್ತು? ಸಾಮಾನ್ಯ ಜನರಿಗಿರಲಿ ಸರ್ಕಾರಿ ಸಂಸ್ಥೆಗಳಿಗೂ ಈ ಆ್ಯಪ್ ಬಗ್ಗೆ ಮಾಹಿತಿ ತಿಳಿದಿಲ್ಲದಂತಾಗಿದೆ.

ಮೊಬೈಲ್ ಅಪ್ಲಿಕೇಶನ್‌ನ ರೂಪದಲ್ಲಿಯೂ ಲಭ್ಯವಿರುವ ಪೋರ್ಟಲ್ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾರ್ಚ್ 22, 2023 ರಂದು ಪ್ರಾರಂಭಿಸಿದ್ದರು.

ಅಗೆಯುವ ಏಜೆನ್ಸಿಗಳಿಗೆ ಇಂಟರ್ಫೇಸ್ ಒದಗಿಸುವ ಗುರಿಯೊಂದಿಗೆ ಈ ಪೋರ್ಟಲ್ ನ್ನು ಆರಂಭಿಸಲಾಗಿತ್ತು. ಇಲ್ಲಿ ಸಂಸ್ಥೆಗಳು ಅಗೆಯುವ ಕಾರ್ಯವನ್ನು ಪ್ರಾರಂಭಿಸುವ ಮೊದಲು ನೆಲದಡಿಯಲ್ಲಿರುವ ಬೇರೆ ಕೇಬಲ್ ಉದಾಹರಣೆಗೆ  ಆಪ್ಟಿಕಲ್ ಫೈಬರ್ ಇದೆಯೇ ಎಂಬುದರ ಬಗ್ಗೆ ವಿಚಾರಿಸಬಹುದಾಗಿದೆ.

ಅಗೆಯುವ ಕಾರ್ಯ ನಡೆಸುವ ಸಂಸ್ಥೆಗಳು ಮತ್ತು ಯುಟಿಲಿಟಿ ಮಾಲೀಕರ ನಡುವಿನ ಉತ್ತಮ ಸಮನ್ವಯವು ಗ್ಯಾಸ್ ಪೈಪ್‌ಲೈನ್‌ಗಳು, ನೀರಿನ ಪೈಪ್‌ಲೈನ್‌ಗಳು ಮತ್ತು ಆಪ್ಟಿಕಲ್ ಫೈಬರ್ ಕೇಬಲ್‌ಗಳಂತಹ ವಿವಿಧ ಆಧಾರವಾಗಿರುವ  ಆಸ್ತಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಆ್ಯಪ್ ಸಹಾಯ ಮಾಡುತ್ತದೆ.

CBuD ಅಪ್ಲಿಕೇಶನ್‌ನಲ್ಲಿ ಅಗೆಯುವ ಕಾರ್ಯದ ಬಗ್ಗೆ ಮಾಹಿತಿಯ ಲಭ್ಯವಿರಲಿದೆ. ಇದು ಸಮಯವನ್ನು ಉಳಿಸಲು ಮತ್ತು ಇದರ ಪ್ರಕ್ರಿಯೆಯನ್ನು ಹಾನಿಯಾಗದಂತೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಸಂಭಾವ್ಯ ವ್ಯಾಪಾರ ನಷ್ಟವನ್ನು ಉಳಿಸುವುದು ಮಾತ್ರವಲ್ಲದೆ ರಸ್ತೆ, ಟೆಲಿಕಾಂ, ನೀರು, ಅನಿಲ ಮತ್ತು ವಿದ್ಯುತ್‌ನಂತಹ ಅಗತ್ಯ ಸೇವೆಗಳಲ್ಲಿ ಅಡಚಣೆ ಕಡಿಮೆ ಮಾಡುವ ಮೂಲಕ ನಾಗರಿಕರಿಗೆ ಅನಾನುಕೂಲತೆಯಾಗದಂತೆ ಮಾಡುತ್ತದೆ.

ಗೇಲ್ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಅನೇಕ ಸಂಸ್ಥೆಗಳಿಗೆ ಪೋರ್ಟಲ್ ಮತ್ತು ಸೇವೆಗಳ ಬಗ್ಗೆ ತಿಳಿದಿಲ್ಲ. ಇದು ತಿಳಿದಿದ್ದರೆ ಬಿಡದಿಯಲ್ಲಿ ಗ್ಯಾಸ್ ಪೈಪ್ ಲೈನ್ ನಲ್ಲಿ ಬಿರುಕುಗಳು ಕಂಡು ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಅವಘಡಗಳು ಸಂಭವಿಸದಂತೆ ಮಾಡಲು ನಾಗರೀಕ ಸಂಸ್ಥೆಗಳ ನಡುವೆ ಸಮನ್ವಯತೆ ಇರಬೇಕು. ಆದರೆ, ಭೂಗರ್ಭದಲ್ಲಿ ಗ್ಯಾಸ್ ಪೈಪ್ ಲೈನ್ ಇರುವುದು ತಿಳಿಯದೆ ಕೆಲ ಸಂಸ್ಥೆಗಳು ಕಾಮಗಾರಿ ಕೈಗೆತ್ತಿಕೊಂಡ ಉದಾಹರಣೆಗಳಿವೆ. ಈ ಅವಘಡಗಳ ತಪ್ಪಿಸುವ ಸಲುವಾಗಿಯೇ ಪೋರ್ಟಲ್ ಅನ್ನು ರಚಿಸಲಾಗಿದೆ. ಆದರೆ, ಅನೇಕರಿಗೆ ಅದರ ಬಗ್ಗೆ ತಿಳಿದಿಲ್ಲ ಅಥವಾ ಅದನ್ನು ಬಳಸಿಕೊಳ್ಳುತ್ತಿಲ್ಲ. ಸಾಮಾನ್ಯವಾಗಿ ಯಾವುದೇ ಹೊಸ ಉಪಕ್ರಮವನ್ನು ಅಳವಡಿಸಿಕೊಳ್ಳಲು ಸಮಯ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಜಾಗೃತಿ ಮತ್ತು ಸರಿಯಾದ ಮಾಹಿತಿಯ ಕೊರತೆಯಿಂದ ಇಂತಹ ಘಟನೆಗಳು ಸಂಭವಿಸುತ್ತವೆ. ಇದರ ಪರಿಣಾಮ ಜಿಲ್ಲಾಡಳಿತ, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಒಳಗೊಂಡ ವಾರ್ಷಿಕ ಅಣಕು ಡ್ರಿಲ್‌ಗಳು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

“ಸಿಎನ್‌ಜಿ ಗ್ಯಾಸ್ ಲೈನ್ ಗುರುತುಗಳನ್ನು ಹಾಕಿರುವ ರಸ್ತೆ ಬದಿಗಳಲ್ಲಿ ಮತ್ತು ಸ್ಥಳಗಳಲ್ಲಿ ನಿಯಮಿತವಾಗಿ ಅಗೆಯುವ ಕಾರ್ಯಗಳು ನಡೆಯುತ್ತಿರುವುದು ಗಮನಕ್ಕೆ ಬರುತ್ತಿದೆ. ಭೂಮಿ ಅಗೆಯುವ ಮೊದಲು ಗ್ಯಾಸ್ ಪೈಪ್‌ಲೈನ್‌ಗಳ ಸುತ್ತಲಿನ ಪ್ರದೇಶಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.

ಪೋರ್ಟಲ್ ಬಗ್ಗೆ ಬಿಬಿಎಂಪಿ ಹಾಗೂ ಬಿಡಬ್ಲ್ಯೂಎಸ್ಎಸ್'ಬಿ ಅಧಿಕಾರಿಗಳನ್ನು ವಿಚಾರಿಸಿದಾಗ, ಈ ಬಗ್ಗೆ ನಮಗೆ ಮಾಹಿತಿ ಇಲ್ಲ. ದೂರುಗಳ ಆಧಾರದ ಮೇಲೆ ನಾವು ಕೆಲಸ ಮಾಡುತ್ತಿದ್ದೇವೆಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

SCROLL FOR NEXT