ರಾಜ್ಯ

ICC Cricket World Cup 2023 Final: ಭಾರತ ಗೆಲುವಿಗಾಗಿ ರಾಜ್ಯದ ದೇಗುಲ, ದರ್ಗಾಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಕೆ

Manjula VN

ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಹಣಾಹಣಿಗೆ ವೇದಿಕೆ ಸಿದ್ಧವಾಗಿದ್ದು, ಜಿದ್ದಾಜಿದ್ದಿನ ಪ್ರಶಸ್ತಿ ಫೈಟ್'ಗೆ ಬದ್ಧವೈರಿಗಳಾದ ಭಾರತ ಹಾಗೂ ಆಸ್ಟ್ರೇಲಿಯಾ ಆಟಗಾರರು ಸಜ್ಜಾಗುತ್ತಿದ್ದಾರೆ. ಫೈನಲ್ ಪಂದ್ಯಕ್ಕೆ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಈ ನಡುವಲ್ಲೇ ಭಾರತದ ವಿಜಯಕ್ಕಾಗಿ ರಾಜ್ಯದ ವಿವಿಧ ದೇಗುಲಗಳು ಹಾಗೂ ದರ್ಗಾಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.

ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ ಅವರು ಶುಕ್ರವಾರದ ಪ್ರಾರ್ಥನೆ ಬಳಿಕ, ವಿಶ್ವಕಪ್ ಫೈನಲ್ ನಲ್ಲಿ ಭಾರತದ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿರುವಂತೆ ಕರೆ ನೀಡಿದ್ದಾರೆ.

ಟೀಂ ಇಂಡಿಯಾ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಕಲಬುರಗಿಯ ಹಜರತ್ ಖವಾಜಾ ಬಂದೆ ನವಾಜ್, ದಕ್ಷಿಣ ಕನ್ನಡದ ಉಳ್ಳಾಲ ದರ್ಗಾ, ಚಿಕ್ಕಬಳ್ಳಾಪುರದ ಚಿಂತಾಮಣಿಯ ಅಮ್ಮಾಜಾನ್ ಬಾವಾಜಾನ್ ದರ್ಗಾ, ಬೆಂಗಳೂರಿನ ತವ್ವಕಲ್ ಮಸ್ತಾನ್ ಷಾ ಮತ್ತು ಯಾಕೀನ್ ಷಾ ದರ್ಗಾ ಮತ್ತು ರಾಜ್ಯದ ಇತರೆ ದರ್ಗಾ ಸಮಿತಿಗಳಿಗೆ ನಿರ್ದೇಶನ ನೀಡಲಾಗಿೆದ ಎಂದು ಬಾಷಾ ಅವರು ಹೇಳಿದ್ದಾರೆ.

"ನಾನು ಕ್ರಿಕೆಟ್ ಮತ್ತು ಭಾರತ ತಂಡದ ಕಟ್ಟಾ ಅಭಿಮಾನಿಯಾಗಿದ್ದು, ನನ್ನ ತಂಡ ವಿಶ್ವಕಪ್ ಗೆಲ್ಲುವುದನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇನೆ. ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಗೆಲುವಿಗಾಗಿ ದೇವರ ಬಳಿ ವಿಶೇಷ ಪ್ರಾರ್ಥನೆಗಳ ಸಲ್ಲಿಸುವಂತೆ ನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ದರ್ಗಾಗಳಿಗೆ ಭೇಟಿ ನೀಡುವ ಸಮುದಾಯದ ಸದಸ್ಯರು ಭಾರತದ ವಿಜಯಕ್ಕಾಗಿ ಪ್ರಾರ್ಥಿಸಲು ತಿಳಿಸುವಂತೆ ಮನವಿ ಮಾಡಿಕೊಂಡಿದ್ದೇನೆಂದು ಹೇಳಿದ್ದಾರೆ.

ಚಿಂತಾಮಣಿಯ ಮುರಗಮಲ್ಲದ ಅಮ್ಮಾಜಾನ್ ಬವಾಜನ್ ದರ್ಗಾ ಆಡಳಿತ ಸಮಿತಿಯ ಅಧ್ಯಕ್ಷ ಮೊಹಮ್ಮದ್ ಹನೀಫ್ ಸೇಟ್ ಅವರು ಮಾತನಾಡಿ, ವಿಶ್ವಕಪ್ ದೊಡ್ಡ ಮಟ್ಟದ್ದಾಗಿದ್ದು, ವಿಶೇಷವಾಗಿ ಭಾರತವು ಫೈನಲ್‌ನಲ್ಲಿ ಆಡುತ್ತಿರುವುದರಿಂದ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ. ಪಂದ್ಯ ಮುಗಿಯುವವರೆಗೆ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಸಿಟಿ ಮಾರ್ಕೆಟ್‌ನಲ್ಲಿರುವ ಜಾಮಿಯಾ ಮಸೀದಿಯ ಪ್ರಧಾನ ಅರ್ಚಕ ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ ಮಾತನಾಡಿ, ಭಾರತೀಯ ಕ್ರಿಕೆಟ್ ತಂಡದ ಗೆಲುವಿಗಾಗಿ ಪ್ರಾರ್ಥಿಸಲು ಬೆಂಗಳೂರಿನಾದ್ಯಂತ ಇರುವ ಮಸೀದಿಗಳಿಗೆ ಸಂದೇಶ ರವಾನಿಸಲಾಗಿದೆ ಎಂದು ತಿಳಿಸಿದರು.

SCROLL FOR NEXT