ಸಾಂದರ್ಭಿಕ ಚಿತ್ರ 
ರಾಜ್ಯ

2024ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ: ಇಲ್ಲಿದೆ ಸಂಪೂರ್ಣ ವಿವರ

ರಾಜ್ಯ ಸರ್ಕಾರವು 2024ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2ನೇ ಶನಿವಾರ, 4ನೇ ಶನಿವಾರ ಹಾಗೂ ಭಾನುವಾರದ ರಜಾ ದಿನಗಳನ್ನು ಹೊರತುಪಡಿಸಿ 2024 ರಲ್ಲಿ 21 ಸಾರ್ವತ್ರಿಕ ರಜಾ ದಿನಗಳು ಇರಲಿವೆ.

ಬೆಂಗಳೂರು: ರಾಜ್ಯ ಸರ್ಕಾರವು 2024ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2ನೇ ಶನಿವಾರ, 4ನೇ ಶನಿವಾರ ಹಾಗೂ ಭಾನುವಾರದ ರಜಾ ದಿನಗಳನ್ನು ಹೊರತುಪಡಿಸಿ 2024 ರಲ್ಲಿ 21 ಸಾರ್ವತ್ರಿಕ ರಜಾ ದಿನಗಳು ಇರಲಿವೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2024ರ ಸಾರ್ವಜನಿಕ ರಜೆ ದಿನಾಂಕಗಳನ್ನು ಘೋಷಿಸಿದೆ. ಪ್ರತಿ ತಿಂಗಳು ಬರುವ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಹೊರತುಪಡಿಸಿ ಒಟ್ಟು 21 ದಿನಗಳ ಪಬ್ಲಿಕ್ ಹಾಲಿಡೇ ಘೋಷಿಸಿ ಸರಕಾರ ಗುರುವಾರ ಅಧಿಸೂಚನೆ ಪ್ರಕಟಿಸಿದೆ. ಈ ರಜಾಪಟ್ಟಿಗೆ ಸಚಿವ ಸಂಪುಟದ ಅನುಮೋದನೆ ದೊರೆತ ನಂತರ ಆದೇಶ ಹೊರಡಿಸಲಾಗಿದೆ.

ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ (14.04.2024) ಮತ್ತು ಮಹಾವೀರ ಜಯಂತಿ (21.04.2024) ಹಾಗೂ ಎರಡನೇ ಶನಿವಾರದಂದು ಬರುವ ವಿಜಯದಶಮಿ (12.10.2024) ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ. ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗದಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು ಎಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.

ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು ಮುಚ್ಚಲ್ಪಡುತ್ತವೆ. ಕಚೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಖಾ ಮುಖ್ಯಸ್ಥರುಗಳು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು ಎಂದು ಸರ್ಕಾರ ತಿಳಿಸಿದೆ.

ರಜೆ ಪಟ್ಟಿ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ ಹೆಚ್ಚಿನ ಪಬ್ಲಿಕ್ ಹಾಲಿಡೇಗಳು ಲಭ್ಯವಿವೆ. ಆದರೆ ಫೆಬ್ರವರಿ ತಿಂಗಳಲ್ಲಿ ಯಾವುದೇ ವಿಶೇಷ ದಿನಗಳು ಮತ್ತು ಹಬ್ಬ ಹರಿದಿನಗಳು ಇಲ್ಲದ್ದರಿಂದ ಒಂದು ದಿನವೂ ಸರಕಾರಿ ರಜೆ ಇರುವುದಿಲ್ಲ.

2024 ಸಾರ್ವತ್ರಿಕ ರಜೆಗಳ ಪಟ್ಟಿ ಹೀಗಿದೆ.

    ಜನವರಿ 15: ಸಂಕ್ರಾಂತಿ ಹಬ್ಬ
    ಜನವರಿ 26: ಗಣರಾಜ್ಯೋತ್ಸವ
    ಮಾರ್ಚ್‌ 8: ಮಹಾಶಿವರಾತ್ರಿ
    ಮಾರ್ಚ್‌ 29: ಗುಡ್‌ಫ್ರೈಡೆ
    ಏಪ್ರಿಲ್‌ 9: ಯುಗಾದಿ ಹಬ್ಬ
    ಏಪ್ರಿಲ್‌ 11: ರಂಜಾನ್
    ಮೇ 1: ಕಾರ್ಮಿರ ದಿನಾಚರಣೆ
    ಮೇ 10: ಬಸವಜಯಂತಿ/ ಅಕ್ಷಯ ತೃತೀಯ
    ಜೂನ್ 17: ಬಕ್ರೀದ್‌
    ಜುಲೈ 17: ಮೊಹರಂ ಕಡೇ ದಿನ
    ಆಗಸ್ಟ್‌ 15: ಸ್ವಾತಂತ್ರ್ಯ ದಿನಾಚರಣೆ
    ಸೆಪ್ಟೆಂಬರ್‌ 7: ಗಣೇಶ ಚತುರ್ಥಿ
    ಸೆಪ್ಟೆಂಬರ್‌ 16: ಈದ್‌ ಮಿಲಾದ್‌
    ಅಕ್ಟೋಬರ್‌ 2: ಗಾಂಧಿ ಜಯಂತಿ
    ಅಕ್ಟೋಬರ್‌ 11: ಮಹಾನವಮಿ/ ಆಯುಧ ಪೂಜೆ
    ಅಕ್ಟೋಬರ್‌ 17: ಮಹರ್ಷಿ ವಾಲ್ಮೀಕಿ ಜಯಂತಿ
    ಅಕ್ಟೋಬರ್‌ 31: ನರಕ ಚತುರ್ದಶಿ
    ನವೆಂಬರ್‌ 1: ಕನ್ನಡ ರಾಜ್ಯೋತ್ಸವ
    ನವೆಂಬರ್‌ 2: ಬಲಿಪಾಡ್ಯಮಿ
    ನವೆಂಬರ್‌ 18: ಕನಕದಾಸ ಜಯಂತಿ
    ಡಿಸೆಂಬರ್‌ 25: ಕ್ರಿಸ್‌ಮಸ್‌

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT