ಶಾಲೆಯ ಅವಶೇಷಗಳನ್ನು ತೆರವುಗೊಳಿಸುತ್ತಿರುವುದು. 
ರಾಜ್ಯ

ಕುಸಿದು ಬಿದ್ದ ಬಿಬಿಎಂಪಿ ಶಾಲೆ: ಹೊಸ ಕಟ್ಟಣ ನಿರ್ಮಾಣಕ್ಕೆ 10 ಲಕ್ಷ ರೂ. ಮಂಜೂರು

ಶಿವಾಜಿನಗರದಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ 70 ವರ್ಷಗಳಷ್ಟು ಹಳೆಯದಾದ ನರ್ಸರಿ ಶಾಲಾ ಕಟ್ಟಡ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತಗಳು ಸಂಭವಿಸಿಲ್ಲ.

ಬೆಂಗಳೂರು: ಶಿವಾಜಿನಗರದಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ 70 ವರ್ಷಗಳಷ್ಟು ಹಳೆಯದಾದ ನರ್ಸರಿ ಶಾಲಾ ಕಟ್ಟಡ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತಗಳು ಸಂಭವಿಸಿಲ್ಲ.

ಶಿವಾಜಿನಗರದ ಕುಕ್ಸ್ ರೋಡ್'ನ ಬಿ ಕ್ರಾಸ್ ನಲ್ಲಿರುವ ಬಿಬಿಎಂಪಿಯ ನರ್ಸರಿ ಶಾಲೆ ಭಾನುವಾರ ತಡರಾತ್ರಿ ಹಠಾತ್ ಕುಸಿದು ಬಿದ್ದಿದ್ದು, ಕಟ್ಟಡದ ಅವಶೇಷದಡಿ ಒಂದು ಹಾಗೂ ಆಟೋ ಸಿಲುಕಿ ಸಂಪೂರ್ಣ ಜಖಂ ಆಗಿದೆ. ಘಟನೆ ಮಧ್ಯರಾತ್ರಿ ಸಂಭವಿಸಿರುವುದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಶಾಲೆಯಲ್ಲಿ ಸುಮಾರು 90 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಒಂದು ವೇಳೆ ಶಾಲಾ ಅವಧಿಯಲ್ಲೇ ಕಟ್ಟಡ ಕುಸಿದುಬಿದ್ದಿದ್ದೇ ಆಗಿದ್ದರೆ, ದೊಡ್ಡ ದುರಂತವೊಂದು ಸಂಭವಿಸುತ್ತಿತ್ತು. ಶಾಲಾ ಕಟ್ಟಡ ದುರ್ಬಲವಾಗಿದ್ದು, ವಾಸಕ್ಕೆ ಯೋಗ್ಯವಾಗಿಲ್ಲ ಎಂದು ಈ ಹಿಂದೆಯೇ ಪಾಲಿಕೆ ಅಧಿಕಾರಿಗಳು ಗುರ್ತಿಸಿದ್ದರು. ಆದರೂ, ಶಾಲೆ ನಡೆಸಲು ಪರ್ಯಾಯ ಕಟ್ಟಡ ಕಲ್ಪಿಸಲು ಕ್ರಮ ಕೈಗೊಂಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ನನ್ನ ಇಬ್ಬರು ಹೆಣ್ಣುಮಕ್ಕಳನ್ನು ಬೆಳಿಗ್ಗೆ ಶಾಲೆಗೆ ಬಿಡಲು ಹೋಗಿದ್ದೆ. ಶಾಲಾ ಕಟ್ಟಡ ಕುಸಿದು ಬಿದ್ದಿರುವುದನ್ನು ನೋಡಿ ಆಘಾತವಾಡಿಯು ಎಂದು ಪೋಷಕರಾದ ರಿಹಾನಾ ಮೊಹಮ್ಮದ್ ಅವರು ಹೇಳಿದ್ದಾರೆ.

ಶಾಲೆಯ ಹತ್ತಿರವೇ ವಾಸವಿದ್ದೇವೆ. ಕಟ್ಟಡ ಕುಸಿದುಬಿದ್ದ ಕೂಡಲೇ ಶಿಕ್ಷಕರಿಗೆ ಮಾಹಿತಿ ನೀಡಲಾಯಿತು. ಬಳಿಕ ಪೊಲೀಸರು ಹಾಗೂ ಬಿಬಿಎಂಪಿ ಎಂಜಿನಿಯರ್ ಗಳಿಗೂ ಮಾಹಿತಿ ನೀಡಲಾಯಿತು ಎಂದು ಸ್ಥಳೀಯ ನಿವಾಸಿ ಪ್ರೇಮಾ ಎಂಬುವವರು ಹೇಳಿದ್ದಾರೆ.

ಮಕ್ಕಳನ್ನು ಇದೀಗ ಹತ್ತಿರದ ಬಿಬಿಎಂಪಿ ಶಾಲೆಗೆ ಸ್ಥಳಾಂತರಿಸಲಾಗಿದೆ ಎಂದು ಶಾಲೆಯ ಭದ್ರತಾ ಸಿಬ್ಬಂದಿ ಹೇಳಿದ್ದಾರೆ.

ಹೊಸ ಕಟ್ಟಡ ನಿರ್ಮಾಣಕ್ಕೆ ಟೆಂಟರ್ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಶಾಲೆಯ ಶಿಕ್ಷಕರೊಬ್ಬರು ಹೇಳಿದ್ದಾರೆ.

ಹೊಸ ಕಟ್ಟಡ ನಿರ್ಮಾಣಕ್ಕೆ ರೂ.10 ಲಕ್ಷ ಮಂಜೂರಾಗಿದೆ. ಆದರೆ, ಕಟ್ಟಣ ಕಾಮಗಾರಿ ಪೂರ್ಣಗೊಳಿಸಲು ಮತ್ತಷ್ಟು ಹಣದ ಅಗತ್ಯವಿದೆಯ ಆದರೆ, ಕ್ರಮಗಳ ಕೈಗೊಳ್ಳುವುದಕ್ಕೂ ಮುನ್ನವೇ ಕಟ್ಟಡ ಕುಸಿದು ಬಿದ್ದಿದೆ. ಎಂದು ಸ್ಥಳೀಯ ಶಾಸಕರು ಹೇಳಿದ್ದಾರೆ.

ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಕ್ಷೇತ್ರದ ಬಹುತೇಕ ಸಾರ್ವಜನಿಕ ಕಟ್ಟಡಗಳು 50 ವರ್ಷಕ್ಕಿಂತ ಹಳೆಯದ್ದಾಗಿದೆ. ಅವುಗಳ ಪುನರ್ ನಿರ್ಮಾಣಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಇಂತಹ 20 ಸಾರ್ವಜನಿಕ ಕಟ್ಟಡಗಳನ್ನು ಕೆಡವಬೇಕಿದೆ. ಏಳು ಶಾಲಾ ಕಟ್ಟಡಗಳು, ಮೂರು ಸಮುದಾಯ ಭವನಗಳು ಮತ್ತು ಮೂರು ಗ್ರಂಥಾಲಯಗಳ ಕಾಮಗಾರಿ ನಡೆಯುತ್ತಿದೆ. ಕುಸಿದು ಬಿದ್ದ ನರ್ಸರಿ ಶಾಲೆಯೂ ಈ ಪಟ್ಟಿಯಲ್ಲಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT