ಅಯೋಧ್ಯೆಯ ರಾಮಮಂದಿರ 
ರಾಜ್ಯ

ಅಯೋಧ್ಯೆ-ಅಂಜನಾದ್ರಿ ನಡುವೆ ರೈಲು ಸಂಪರ್ಕ ಕಲ್ಪಿಸಲು ಚಿಂತನೆ

2024 ರ ಜನವರಿಯಲ್ಲಿ ನಿಗದಿಯಾಗಿರುವ ಶ್ರೀರಾಮ ಮಂದಿರ ಉದ್ಘಾಟನೆಯ ಸಮಯದಲ್ಲಿ ಅಯೋಧ್ಯೆಗೆ ರೈಲು ಸಂಪರ್ಕ ಕಲ್ಪಿಸುವ ಯೋಜನೆಯೊಂದು ಜಾರಿ ಹಂತದಲ್ಲಿದೆ.

ಹುಬ್ಬಳ್ಳಿ: 2024 ರ ಜನವರಿಯಲ್ಲಿ ನಿಗದಿಯಾಗಿರುವ ಶ್ರೀರಾಮ ಮಂದಿರ ಉದ್ಘಾಟನೆಯ ಸಮಯದಲ್ಲಿ ಅಯೋಧ್ಯೆಗೆ ರೈಲು ಸಂಪರ್ಕ ಕಲ್ಪಿಸುವ ಯೋಜನೆಯೊಂದು ಜಾರಿ ಹಂತದಲ್ಲಿದೆ.

ಹೌದು.. ಅಯೋಧ್ಯೆ-ಅಂಜನಾದ್ರಿ ನಡುವೆ ರೈಲು ಸಂಪರ್ಕಕ್ಕೆ ವೇದಿಕೆ ಸಜ್ಜಾಗಿದ್ದು, ಹನುಮಂತನ ಜನ್ಮಸ್ಥಳ ಅಂಜನಾದ್ರಿಯಿಂದ ಅಯೋಧ್ಯೆಗೆ ಮೊದಲ ರೈಲು ಸಂಚಾರಕ್ಕೆ ವೇದಿಕೆ ಸಜ್ಜಾಗಿದೆ. ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ರೈಲ್ವೆ ಸಚಿವಾಲಯಕ್ಕೆ ಪತ್ರ ಬರೆದಿದ್ದು, ರೈಲ್ವೆ ಇಲಾಖೆಯಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಹೇಳಲಾಗಿದೆ. 

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿರುವ ಅಂಜನಾದ್ರಿ ಮತ್ತು  ಅಯೋಧ್ಯೆ ಎರಡೂ ವಾರ್ಷಿಕವಾಗಿ ಹೆಚ್ಚಿನ ಸಂಖ್ಯೆಯ ಧಾರ್ಮಿಕ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಹನುಮಂತನ ಜನ್ಮಸ್ಥಳವಾದ ಅಂಜನಾದ್ರಿಗೆ ಉತ್ತರ ಭಾರತದ ಅನೇಕ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. ಮುಂಬರುವ ಸಂಸತ್ ಅಧಿವೇಶನದಲ್ಲಿ ಮತ್ತೊಮ್ಮೆ ಬೇಡಿಕೆಯನ್ನು ಮಂಡಿಸುತ್ತೇನೆ. ಎರಡು ಧಾರ್ಮಿಕ ಕೇಂದ್ರಗಳ ನಡುವೆ ಸಂಪರ್ಕ ಕಲ್ಪಿಸುವಂತೆ ಕೋರಿ ನಾನು ಈಗಾಗಲೇ ರೈಲ್ವೆ ಸಚಿವಾಲಯ ಮತ್ತು ನೈಋತ್ಯ ರೈಲ್ವೆಗೆ ಪತ್ರ ಕಳುಹಿಸಿದ್ದೇನೆ. ಈ ರೈಲು ಈ ಭಾಗದ ಜನರಿಗೆ ಸಹಾಯ ಮಾಡುತ್ತದೆ, ಇದು ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ಕರಡಿ ಸಂಗಣ್ಣ ಹೇಳಿದರು.

ರೈಲ್ವೆ ಕ್ರಿಯಾ ಸಮಿತಿಯ ರಾಜ್ಯಾಧ್ಯಕ್ಷ ಕೆ.ಎಂ.ಮಹೇಶ್ವರಸ್ವಾಮಿ ಮಾತನಾಡಿ, ಅಂಜನಾದ್ರಿಯ ಸ್ಥಳೀಯರು ಮತ್ತು ದೇವಸ್ಥಾನದ ಟ್ರಸ್ಟ್ ಸದಸ್ಯರ ಬಹುಕಾಲದ ಬೇಡಿಕೆಯಾಗಿದೆ. “ನಾವು ಯೋಜನೆಯನ್ನು ಬೆಂಬಲಿಸುತ್ತೇವೆ ಮತ್ತು ರೈಲ್ವೆ ಸಂಪರ್ಕದೊಂದಿಗೆ ಮುಂದುವರಿಯಲು ಸಹಾಯ ಮಾಡುತ್ತೇವೆ. ಇವುಗಳು ಮುಖ್ಯ ಜಂಕ್ಷನ್‌ಗಳಾಗಿರುವುದರಿಂದ ಆರಂಭಿಕ ಹಂತವು ಹುಬ್ಬಳ್ಳಿ ಅಥವಾ ಗುಂಟ್ಕಲ್ ಆಗಿರಬೇಕು ಎಂದು ಅವರು ಹೇಳಿದರು.

ಅಂಜನಾದ್ರಿಯ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಹಿರಿಯ ಟ್ರಸ್ಟಿ ಮಾತನಾಡಿ, ಎರಡೂ ದೈವಿಕ ಸ್ಥಳಗಳನ್ನು ಸಂಪರ್ಕಿಸುವ ರೈಲನ್ನು ರೈಲ್ವೆ ಪರಿಗಣಿಸುತ್ತಿರುವುದು ಸಕಾರಾತ್ಮಕ ಸುದ್ದಿಯಾಗಿದೆ. ನಾವು ಕಿಷ್ಕಿಂದೆಯ ಬಳಿಯೂ ಹೊಸ ರೈಲು ನಿಲ್ದಾಣಕ್ಕಾಗಿ ಒತ್ತಾಯಿಸಿದ್ದೇವೆ, ಅಲ್ಲಿ ಭಕ್ತರು ದೇಗುಲದ ಬಳಿ ತಲುಪಬಹುದು. ರೈಲು ಸಂಪರ್ಕವನ್ನು ಪಡೆಯುವುದು ನಮ್ಮ ಟ್ರಸ್ಟ್‌ನ ಬಹುಕಾಲದ ಕನಸು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚುನಾವಣಾ ರ್ಯಾಲಿಗಾಗಿ ಗಂಗಾವತಿಯಲ್ಲಿದ್ದಾಗ, ಅವರು ಎರಡು ಸ್ಥಳಗಳನ್ನು ರೈಲ್ವೆಯೊಂದಿಗೆ ಸಂಪರ್ಕಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದರು ಎಂದು ಹೇಳಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT