ಕಾವಲು ಕಾಯುತ್ತಿರುವ ಪೊಲೀಸರು 
ರಾಜ್ಯ

ಶಿವಮೊಗ್ಗ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ, ಸೆಕ್ಷನ್ 144 ಮುಂದುವರಿಕೆ: ಸ್ಥಳೀಯ ವರ್ತಕರು, ಬಿಜೆಪಿ ಮುಖಂಡರ ವಿರೋಧ

ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಂಗಳವಾರ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಮುಂದುವರಿಸಲಾಗಿದೆ.

ಶಿವಮೊಗ್ಗ: ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಂಗಳವಾರ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಮುಂದುವರಿಸಲಾಗಿದೆ. ಪರಿಸ್ಥಿತಿ ಇನ್ನೂ ಕೂಡ ಅಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ ಭಯದ ವಾತಾವರಣವಿದೆ. ಆದರೆ ನಿಷೇಧಾಜ್ಞೆಯನ್ನು ಇಡೀ ನಗರಕ್ಕೆ ಹೇರಿರುವುದಕ್ಕೆ ವರ್ತಕರು ಹಾಗೂ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. 

ನಡೆದ ಘಟನೆಯೇನು?: ಮೊನ್ನೆ ಭಾನುವಾರ ಮಧ್ಯಾಹ್ನ ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಮೆರವಣಿಗೆ ಹಮ್ಮಿಕೊಂಡಿದ್ದರು. ಗಾಂಧಿ ಬಜಾರಿನ ಜಾಮೀಯಾ ಮಸೀದಿಯಿಂದ ಮಧ್ಯಾಹ್ನ 3 ಗಂಟೆಗೆ ಮೆರವಣಿಗೆ ಆರಂಭವಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಲು ನಗರದ ವಿವಿಧೆಡೆಗಳಿಂದ ಗಾಂಧಿ ಬಜಾರಿಗೆ ಮುಸಲ್ಮಾನರು ಆಗಮಿಸಿದ್ದರು. ಅದರಂತೆ ರಾಗಿಗುಡ್ಡದಿಂದಲೂ ಮೆರವಣಿಗೆ ಹೊರಡಲು ಮುಸ್ಲಿಂ ಬಾಂಧವರು ಸಿದ್ಧರಾಗಿದ್ದರು. ಈ ವೇಳೆ ಬ್ಯಾನರ್, ಕಟೌಟ್ ನಲ್ಲಿ ಬರೆದ ಬರಹ ವಿಚಾರವಾಗಿ ಸಣ್ಣ ಮಟ್ಟದಲ್ಲಿ ಆರಂಭವಾದ ಜಗಳ ನಂತರ ಕಲ್ಲು ತೂರಾಟ, ಗಲಭೆ. ತೀವ್ರ ಘರ್ಷಣೆಗೆ ಕಾರಣವಾಗಿತ್ತು. 

ಮೆರವಣಿಗೆ ಸಾಗುವಾಗ ಮುಸ್ಲಿಂ ಬಾಂಧವರ ಗುಂಪಿನ ಮೇಲೆ ಕಲ್ಲು ತೂರಿ ಬಂದಿದೆ. ಇಷ್ಟೇ ಸಾಕಿತ್ತು ಶಿವಮೊಗ್ಗದಲ್ಲಿ ಕೋಮು ಭಾವನೆ ಕೆರಳಲು. ಮುಸ್ಲಿಂ ಗುಂಪಿನ ಮೇಲೆ ಕಲ್ಲು ತೂರಿ ಬರುತ್ತಿದ್ದಂತೆ ಪ್ರತಿಯಾಗಿ ಮುಸ್ಲಿಂಮರು ಕಲ್ಲು ತೂರಾಟ ನಡೆಸಿದರು.

ಪರಿಸ್ಥಿತಿ ಕೈ ಮೀರುವುದನ್ನು ಅರಿತ ಪೊಲೀಸರು ಪರಿಸ್ಥಿತಿ ಹತೋಟಿಗೆ ತರಲು ಲಾಠಿ ಚಾರ್ಜ್ ನಡೆಸಿದರು. ಜೊತೆಗೆ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಿದರು. ಆದರೆ ಜಿಲ್ಲಾಡಳಿತ ಘಟನೆ ನಡೆದ ರಾಗಿಗುಡ್ಡದಲ್ಲಿ ಮಾತ್ರ 144 ನಿಷೇಧಾಜ್ಞೆ ಜಾರಿಗೊಳಿಸದೇ ಇಡೀ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಂದಿನ ಆದೇಶದವರೆಗೆ 144 ಸೆಕ್ಷನ್ ಜಾರಿಗೊಳಿದೆ. ಇಡೀ ನಗರ ಪ್ರದೇಶದಲ್ಲಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಿದ್ದಕ್ಕೆ ವರ್ತಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಹಿಂದೂಗಳ ಮನೆಯನ್ನೇ ಗುರಿಯಾಗಿರಿಸಿಕೊಂಡು ಮುಸ್ಲಿಮರು ದಾಳಿ ನಡೆಸಿದ್ದಾರೆ ಎಂಬುದು ಹಿಂದೂ ಜನಗಳ ಆರೋಪವಾಗಿದೆ. ಘಟನೆಯಲ್ಲಿ ಹಲವರ ಮನೆಯ ಕಿಟಕಿ, ಬಾಗಿಲುಗಳ ಗಾಜುಗಳು ಮುರಿದಿವೆ. ಹಲವು ವಾಹನಗಳು ಜಖಂ ಆಗಿವೆ. ಹಲವರಿಗೆ ಗಾಯಗಳಾಗಿವೆ. 

ಶಿವಮೊಗ್ಗದ ರಾಗಿಗುಡ್ಡದಲ್ಲಿ ಗಲಾಟೆ ಹಿನ್ನೆಲೆ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ತಳ್ಳಿ ನುಗ್ಗಿ ಬಂದು ಬೈಕ್​​ನಲ್ಲಿ ಬರುತ್ತಿದ್ದ ವ್ಯಕ್ತಿಯ ಮೇಲೆ ನಾಲ್ಕೈದು ಮಂದಿ ಒಮ್ಮೆಲೆ ಹಲ್ಲೆ ನಡೆಸಿದ್ದಾರೆ. ನೂರಾರು ಜನರು ರಸ್ತೆಯೊಳಗೆ ನುಗ್ಗಿ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT