ರಾಜ್ಯ

ರಾಜ್ಯದ ಮೂರು ದೇವಾಲಯಗಳಿಗೆ ಪಾರಂಪರಿಕ ಟ್ಯಾಗ್ ನಂತರ ಪ್ರವಾಸಿಗರ ಸಂಖ್ಯೆ ಏರಿಕೆ

Shilpa D

ಮೈಸೂರು: ವಿಶಿಷ್ಟ ಶಿಲ್ಪಕಲೆಯ ಸೊಬಗಿನ ತಾಣವಾದ ತಿ.ನರಸೀಪುರ ತಾಲ್ಲೂಕಿನ ಸೋಮನಾಥಪುರದ ಚನ್ನಕೇಶವ ದೇಗುಲ, ಬೇಲೂರು, ಹಳೇಬೀಡು ದೇವಾಲಯಗಳನ್ನು ವಿಶ್ವ ಪರಂಪರೆಯ ತಾಣಗಳೆಂದು ಘೋಷಿಸಿದ ನಂತರ, ಈ ವಾಸ್ತುಶಿಲ್ಪದ ಅದ್ಭುತಗಳಿಗೆ ಪ್ರವಾಸಿಗರ ಹರಿವು ಹಠಾತ್ ಏರಿಕೆಯಾಗಿದೆ

‘ಯುನೆಸ್ಕೊ’ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ  ಸೋಮನಾಥಪುರದ ಚನ್ನಕೇಶವ ದೇಗುಲ, ಬೇಲೂರು, ಹಳೇಬೀಡುದೇವಾಲಯಗಳನ್ನು ಸೇರಿಸಲಾಗಿದೆ.

ಗುರುವಾರ ಇಲ್ಲಿ ನಡೆದ ಎಸ್‌ಕೆಎಲ್‌ ಇಂಡಿಯಾ ಕಾಂಗ್ರೆಸ್‌ನ ಅಂಗವಾಗಿ ಪಾರಂಪರಿಕ ರಚನೆಗಳ ಪುನಶ್ಚೇತನ ಕುರಿತ ಚರ್ಚೆಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ ಪುರಾತತ್ವ ಇಲಾಖೆ, ಪರಂಪರೆ ಮತ್ತು ವಸ್ತುಸಂಗ್ರಹಾಲಯಗಳ ಆಯುಕ್ತ ಎ ದೇವರಾಜ್, ಸೋಮನಾಥಪುರ, ಬೇಲೂರು ಮತ್ತು ಹಳೇಬೀಡುಗಳಿಗೆ ಕಡಿಮೆ ಜನರು ಭೇಟಿ ನೀಡಿದ್ದರು, ಆದರೆ ಅವುಗಳನ್ನು ವಿಶ್ವ ಪರಂಪರೆಯೆಂದು ಘೋಷಿಸಿದ ನಂತರ, ಪ್ರವಾಸಿಗರ ಸಂಖ್ಯೆ ಹೆಚ್ಚಿದೆ, ಇದರಿಂದಾಗಿ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರಿಸಲು  ಗೋಲ್ ಗುಂಬಜ್, ಶ್ರೀರಂಗಪಟ್ಟಣ ಕೋಟೆ ಮತ್ತು ವಿಜಯಪುರದ ಕೆಲವು ಪಾರಂಪರಿಕ ತಾಣಗಳು ಸೇರಿದಂತೆ ಇನ್ನೂ ಆರು ಸ್ಥಳಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಸಾಮ್ರಕ ಪೋರ್ಟಲ್‌ಗೆ ಚಾಲನೆ ನೀಡಿದ್ದು, ಇದು ಕಾರ್ಪೊರೇಟ್‌ಗಳು ಮತ್ತು ವ್ಯಕ್ತಿಗಳಿಗೆ ಸ್ಮಾರಕಗಳ ದತ್ತು, ಸಾಂಸ್ಕೃತಿಕ ಪರಂಪರೆಯ ತಾಣಗಳ ಮರುಸ್ಥಾಪನೆಯನ್ನು ತೆರೆದಿದೆ.

ಸ್ಮಾರಕಗಳ ಮಾಲೀಕತ್ವ ಸರ್ಕಾರದ್ದಾಗಿದ್ದು, ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಹಾಯದಿಂದ 360 ಡಿಗ್ರಿ ಪಾರಂಪರಿಕ ಆಸ್ತಿಗಳನ್ನು ಸ್ಕ್ಯಾನ್ ಮಾಡಿ ಅವುಗಳ ಚಿತ್ರಗಳನ್ನು ಅಪ್‌ಲೋಡ್ ಮಾಡಿದ್ದು, ಇದು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಣತಜ್ಞರಿಗೆ ಸಹಕಾರಿಯಾಗಲಿದೆ.

SCROLL FOR NEXT