ವೃದ್ಧ ಪೆರಿಯಸಾಮಿ ಗೋವಿಂದನ್ 
ರಾಜ್ಯ

ಸರ್ಕಾರಿ ಸವಲತ್ತು ಸಿಗಲೆಂದು ಚಿಂದಿ ಆಯುವ ವೃದ್ದನಿಗೆ SB ಖಾತೆ ಮಾಡಿಸಿದ ಅಂಚೆ ಇಲಾಖೆ ಸಿಬ್ಬಂದಿ!

ಯಾವುದೇ ಉಳಿತಾಯ ಖಾತೆ ಇಲ್ಲದೆ ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿದ್ದ ದೈಹಿಕ ವಿಕಲಚೇತನ, ಚಿಂದಿ ಆಯುವ ವೃದ್ಧನಿಗೆ ಬೆಂಗಳೂರು ಅಂಚೆ ವಲಯವು ಇಂದು ಅಂಚೆ ಖಾತೆ ಮಾಡಿಸಿದೆ.

ಬೆಂಗಳೂರು: ಯಾವುದೇ ಉಳಿತಾಯ ಖಾತೆ ಇಲ್ಲದೆ ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿದ್ದ ದೈಹಿಕ ವಿಕಲಚೇತನ, ಚಿಂದಿ ಆಯುವ ವೃದ್ಧನಿಗೆ ಬೆಂಗಳೂರು ಅಂಚೆ ವಲಯವು ಇಂದು ಅಂಚೆ ಖಾತೆ ಮಾಡಿಸಿದೆ.

ಶುಕ್ರವಾರವನ್ನು ಕರ್ನಾಟಕ ಅಂಚೆ ವೃತ್ತದಲ್ಲಿ ಅಂತ್ಯೋದಯ ದಿವಸ್ ಎಂದು ಆಚರಿಸಲಾಗುತ್ತದೆ. ಹೀಗಾಗಿ 9,000 ಅಂಚೆ ಕಚೇರಿಗಳಲ್ಲಿನ ತನ್ನ ಸಿಬ್ಬಂದಿಗೆ ಆರ್ಥಿಕವಾಗಿ ಬಡವರನ್ನು ಗುರುತಿಸಲು ಕಚೇರಿಗಳಿಗೆ ನಿರ್ದೇಶನ ನೀಡಲಾಗಿತ್ತು. ಬಡವರನ್ನು ಉನ್ನತೀಕರಿಸುವ ಪ್ರಯತ್ನಗಳಿಗಾಗಿ ಜನಪ್ರಿಯರಾಗಿದ್ದ ನಾಯಕ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನವನ್ನು ಗುರುತಿಸಲು ಅಂತೋದಯ ದಿವಸ್ ಅನ್ನು ಆಚರಿಸಲಾಗುತ್ತದೆ.

ಇನ್ನು ತಮಿಳುನಾಡಿನ ಧರ್ಮಪುರಿ ಮೂಲದ ಪೆರಿಯಸಾಮಿ ಗೋವಿಂದನ್ ಅವರು ಬಹಳ ಹಿಂದೆಯೇ ಬೆಂಗಳೂರಿಗೆ ಬಂದು ಚಿಂದಿ ಆಯುವ ಕೆಲಸ ಮಾಡುತ್ತಿದ್ದರು. ಇದನ್ನು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಆಗಿರುವ ರಾಜೇಂದ್ರ ಎಸ್ ಕುಮಾರ್ ನೋಡಿದ್ದರು. ಈ ವೃದ್ಧ, ಅಂಗವಿಕಲ ವ್ಯಕ್ತಿ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ತ್ಯಾಜ್ಯ ವಸ್ತುಗಳನ್ನು ವಿಂಗಡಿಸುವುದನ್ನು ನಾನು ನೋಡಿದ್ದೆ. ಇಂದು ಬೆಳಗ್ಗೆ ಕಚೇರಿಗೆ ನಡೆದುಕೊಂಡು ಬರುವಾಗ ಪೆರಿಯಸಾಮಿ ಅವರನ್ನು ಮಾತನಾಡಿಸಿದೆ. ಆಗ ಅವರು ಹೊಟ್ಟೆಪಾಡಿಗಾಗಿ ಚಿಂದಿ ಆಯುತ್ತಿರುವುದಾಗಿ ಹೇಳಿದ್ದರು.

ವಯಸ್ಸು ಮತ್ತು ಅಂಗವೈಕಲ್ಯ ಹೊರತಾಗಿಯೂ ಅವರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ಸಿಗುತ್ತಿರಲಿಲ್ಲ. ಇದಕ್ಕೆ ಕಾರಣ ಅವರ ಬಳಿ ಯಾವುದೇ ಖಾತೆ ಇಲ್ಲದಿರುವುದು. ಇದನ್ನು ತಿಳಿದುಕೊಂಡ ತಕ್ಷಣ ನಾನು ಅವರಿಗಾಗಿ ಅಂಚೆ ಉಳಿತಾಯ ಖಾತೆಯನ್ನು ತೆರೆಯುವಂತೆ ಹತ್ತಿರದ ಕಚೇರಿಯಲ್ಲಿ ನನ್ನ ಸಿಬ್ಬಂದಿಗೆ ಸೂಚಿಸಿದೆ ಎಂದರು.

ಗೋವಿಂದನ್ ಅವರಿಗೆ ಸ್ವಂತ ಮನೆ ಇರಲಿಲ್ಲ. ಅವರು ಚಮ್ಮಾರ ಅಂಗಡಿಯಲ್ಲಿ ವಾಸಿಸುತ್ತಿದ್ದರು. ಅವರ ಬಳಿ ತಮಿಳುನಾಡು ವಿಳಾಸದ ಆಧಾರ್ ಕಾರ್ಡ್ ಇತ್ತು. ಇದು ಮ್ಯೂಸಿಯಂ ರಸ್ತೆಯಲ್ಲಿರುವ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯಲು ಸಹಾಯ ಮಾಡಿತು. ಖಾತೆ ತೆರೆಯಲು ಅಂಚೆ ಇಲಾಖೆಯು 1,000 ಆರಂಭಿಕ ಕೊಡುಗೆ ನೀಡಿದೆ. ಸಾಮಾಜಿಕ ಭದ್ರತೆಯ ಪ್ರಯೋಜನೆ ನೇರವಾಗಿ ಅರ್ಹರ ಖಾತೆಗೆ ವರ್ಗಾಯಿಸುವುದಕ್ಕೆ ಇದು ಬಹಳ ಮುಖ್ಯವಾಗಿದೆ ಎಂದು CPMG ಸೇರಿಸಲಾಗಿದೆ.

ಅಂಚೆ ಇಲಾಖೆಯು ಈಗ ರಾಜ್ಯ ಸರ್ಕಾರವನ್ನು ಸಂಪರ್ಕಿಸಿ ಅವರಿಗೆ ಸಲ್ಲಬೇಕಾದ ಸವಲತ್ತುಗಳು ಸಿಗುವಂತೆ ಅನುಕೂಲ ಮಾಡಿಕೊಡಲು ಯೋಜಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT