ಸಂಗ್ರಹ ಚಿತ್ರ 
ರಾಜ್ಯ

ವೇಗವಾಗಿ ಬೈಕ್ ಓಡಿಸಬೇಡಿ ಎಂದಿದ್ದಕ್ಕೆ ಮಹಿಳಾ ಎಸ್ಐಗೆ ಬೈಕ್ ನಿಂದ ಡಿಕ್ಕಿ ಹೊಡೆಸಿ ಪುಂಡಾಟ; ಆರೋಪಿ ಬಂಧನ

ಅತಿವೇಗವಾಗಿ ಬೈಕ್ ಓಡಿಸಬೇಡಿ ಎಂದು ಬುದ್ದಿ ಮಾತು ಹೇಳಿದ ಪ್ರೊಬೇಷನರಿ ಮಹಿಳಾ ಸಬ್ ಇನ್ಸ್ ಪೆಕ್ಟರ್ ಮೇಲೆ ವ್ಯಕ್ತಿಯೊಬ್ಬ ಬುಲೆಟ್ ಬೈಕ್ ನಲ್ಲಿ ಡಿಕ್ಕಿ ಹೊಡೆದು, ಪುಂಡಾಟ ನಡೆಸಿದ ಘಟನೆ ನಡೆದಿದೆ.

ಬೆಂಗಳೂರು: ಅತಿವೇಗವಾಗಿ ಬೈಕ್ ಓಡಿಸಬೇಡಿ ಎಂದು ಬುದ್ದಿ ಮಾತು ಹೇಳಿದ ಪ್ರೊಬೇಷನರಿ ಮಹಿಳಾ ಸಬ್ ಇನ್ಸ್ ಪೆಕ್ಟರ್ ಮೇಲೆ ವ್ಯಕ್ತಿಯೊಬ್ಬ ಬುಲೆಟ್ ಬೈಕ್ ನಲ್ಲಿ ಡಿಕ್ಕಿ ಹೊಡೆದು, ಪುಂಡಾಟ ನಡೆಸಿದ ಘಟನೆ ನಡೆದಿದೆ.

ಪಿಎಸ್ಐ ಅವರ ಸ್ಕೂಟರ್'ಗೆ ಬುಲೆಟ್ ಗುದ್ದಿಸಿದ ಆರೋಪಿ, ಅವರನ್ನು ಕೆಳಗೆ ಬೀಳಿಸಿ, ಬಟ್ಟೆ ಹಿಡಿದು ಎಳೆದಾಡಿ, ಏಕವನದಲ್ಲಿ ನಿಂದಿಸಿದ್ದಾನೆಂದು ತಿಳಿದುಬಂದಿದೆ.

ಘಟನೆ ಸಂಬಂಧ ಆರೋಪಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಬಂಧಿತನನ್ನು ಮಾಳಗಾಳದ ಪಂಚಶೀಲನಗರದ ಭರತ್ ಎಂದು ಗುರ್ತಿಸಲಾಗಿದೆ.

ಮೂರು ದಿನಗಳ ಹಿಂದೆ ವಿಜಯನಗರದ ಸುಬ್ಬಣ್ಣ ಗಾರ್ಡನ್ ಬಳಿ ಗೋವಿಂದರಾಜನಗರ ಠಾಣೆಯ ಪಿಎಸ್ಐ ಅಶ್ವಿನಿ ಹಿಪ್ಪರಸಿ ಗಸ್ತಿನಲ್ಲಿದ್ದಾಗ ಈ ಘಟನೆ ನಡೆದಿದೆ.

ಕೃತ್ಯವೆಸಗಿ ಪರಾರಿಯಾಗಿದ್ದ ಆರೋಪಿಯನ್ನು ತಾಂತ್ರಿಕ ಮಾಹಿತಿ ಆಧರಿಸಿ ಗೋವಿಂದರಾಜನಗರ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಆರೋಪಿ ವಿರುದ್ಧ ಇದೀಗ ರೌಡಿಶೀಟರ್ ತೆರೆಯಲು ಪೊಲೀಸರು ಚಿಂತನೆ ನಡೆಸಿದ್ದಾರೆಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

SCROLL FOR NEXT