ಬೆಂಗಳೂರು: ಹಳೆ ವೈಷಮ್ಯದ ಹಿನ್ನೆಲೆಯಲ್ಲಿಎದುರಾಳಿಯ ಹತ್ಯೆಗೈಯಲು ಹೋಗಿದ್ದ ರೌಡಿಶೀಟರ್, ಮಹಿಳೆಯೊಬ್ಬರ ಕೈ ಕತ್ತರಿಸಿರುವ ಘಟನೆ ಸುಬ್ರಹ್ಮಣ್ಯ ನಗರ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ರೌಡಿಶೀಟರ್ ಅಭಿಗೌಡ ಕೃತ್ಯ ಎಸಗಿದವನು.
ಮಹಿಳೆ ಕೈ ಕತ್ತರಿಸಿದ್ದ ರೌಡಿಶೀಟರ್ನನ್ನು ಸುಬ್ರಮಣ್ಯನಗರ ಪೊಲೀಸರು ಬಂಧಿಸಿದ್ದಾರೆ, ಅಭಿ ಅಲಿಯಾಸ್ ಅಮೂಲ್ ಬಂಧಿತ ಆರೋಪಿಯಾಗಿದ್ದು ಸುಬ್ರಮಣ್ಯನಗರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ .
ಹುಡುಗಿ ಓರ್ವಳ ವಿಚಾರಕ್ಕೆ ರಾಕೇಶ್ ಮತ್ತು ಅಭಿ ನಡುವೆ ವೈಷಮ್ಯ ಇತ್ತು. ಈ ಹಿನ್ನಲೆ ಹಲವಾರು ಬಾರಿ ಅಭಿ ಮತ್ತು ರಾಕೇಶ್ ಗಲಾಟೆ ಮಾಡಿಕೊಂಡಿದ್ದರು. ಕಳೆದ ಭಾನುವಾರ ಅಭಿ ರಾತ್ರಿ ರಾಕೇಶ್ ಮನೆಗೆ ಹಲ್ಲೆ ಮಾಡಲು ಹೋಗಿದ್ದನು. ಈ ವೇಳೆ ರಾಕೇಶ್ ಮನೆ ಬಾಗಿಲನ್ನು ಮಚ್ಚಿನಿಂದ ಬಡಿದಿದ್ದಾನೆ.
ಈ ವೇಳೆ ಮನೆಯಲ್ಲಿ ಬಾಡಿಗೆ ಇದ್ದ ಬೇರೊಬ್ಬ ಮಹಿಳೆ ಮನೆಯ ಬಾಗಿಲು ತೆಗೆದಿದ್ದಾರೆ. ಬಾಗಿಲು ತೆಗೆಯುತ್ತಿದ್ದಂತೆ ಅಭಿ ಮಹಿಳೆಗೆ ಮಚ್ಚು ಬೀಸಿದ್ದಾನೆ. ಸಂತ್ರಸ್ತೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದಾಗ, ಅಮುಲ್ ಮತ್ತೆ ಆಕೆಯ ಮೇಲೆ ದಾಳಿ ಮಾಡಿ ಆಕೆಯ ಎಡಗೈಯನ್ನು ಕತ್ತರಿಸಿದ್ದಾನೆ. ಘಟನೆ ನಡೆದಾಗ ವೀಣಾ ಅವರ ಪತಿ ಮತ್ತು ಮಗ ಅಲ್ಲಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಅಮುಲ್ ನನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಈತನ ವಿರುದ್ಧ ಯಲಹಂಕ, ಮಲ್ಲೇಶ್ವರಂ, ಸದಾಶಿವನಗರ ಮತ್ತು ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಅಮುಲ್ ನನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಈತನ ವಿರುದ್ಧ ಯಲಹಂಕ, ಮಲ್ಲೇಶ್ವರಂ, ಸದಾಶಿವನಗರ ಮತ್ತು ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.