ರಾಜ್ಯ

ದೇಶದ ರಕ್ಷಣಾ ವ್ಯವಸ್ಥೆ ರಹಸ್ಯ ತಿಳಿದುಕೊಳ್ಳಲು ಸಂಚು: ಹೆಚ್ ಎಎಲ್ ಕೋರ್ಸ್ ಗೆ ಅರ್ಜಿ ಸಲ್ಲಿಸಿರುವ ಆರೋಪಿ ಮಾಝ್ ಮುನೀರ್ ಅಹ್ಮದ್!

Sumana Upadhyaya

ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಗೆ ಸೇರಿದ್ದ  ಮಾಝ್ ಮುನೀರ್ ಅಹ್ಮದ್ ಎಂಬಾತ ದೇಶದ ರಕ್ಷಣಾ ವ್ಯವಸ್ಥೆ ರಹಸ್ಯ ತಿಳಿದುಕೊಳ್ಳುವ ಉದ್ದೇಶದಿಂದ ಹೆಚ್ ಎಎಲ್ ಕೋರ್ಸ್ ಗೆ ಅರ್ಜಿ ಸಲ್ಲಿಸಿದ್ದ ಎಂಬ ಮಾಹಿತಿಯನ್ನು ಎನ್ಐಎ ವಿಶೇಷ ನ್ಯಾಯಾಲಯದ ಎದುರು ಬಹಿರಂಗಪಡಿಸಿದೆ.

ಹೆಚ್ಎಎಲ್ ನಿಂದ ಪಡೆದ ಸಾಮಾಜಿಕ ಜಾಲತಾಣ ಖಾತೆಗಳು ಹಾಗೂ ದಾಖಲೆಗಳ ಮೂಲಕ ಈ ಮಾಹಿತಿ ಲಭ್ಯವಾಗಿದೆ ಎಂದು ಎನ್ಐಎ ಹೇಳಿದೆ. 

ಇಸ್ಲಾಮಿಕ್ ಸ್ಟೇಟ್ ಚಟುವಟಿಕೆಗಳನ್ನು ವಿಸ್ತರಿಸಲು ಬಯಸಿದ್ದ ಮಾಝ್ ಮುನೀರ್ ಅಹ್ಮದ್, ಎಚ್‌ಎಎಲ್ ಮ್ಯಾನೇಜ್‌ಮೆಂಟ್ ಅಕಾಡೆಮಿಯಲ್ಲಿ ಪಿಜಿ ಡಿಪ್ಲೊಮಾ ಇನ್ ಏವಿಯೇಷನ್ ಮ್ಯಾನೇಜ್‌ಮೆಂಟ್ ಕೋರ್ಸ್  ಪ್ರವೇಶಕ್ಕೆ ಈತ ಅರ್ಜಿ ಸಲ್ಲಿಸಿದ್ದ. 

ಹೆಚ್ಎಎಲ್ ಮೂಲಕ ಭಾರತದ ರಕ್ಷಣಾ ವ್ಯವಸ್ಥೆಯನ್ನು ಕದಡಲು ಮುನೀರ್ ಗೆ ಆತನ ಆನ್ ಲೈನ್ ಹ್ಯಾಂಡ್ಲರ್ ಕರ್ನಲ್ ಎಂಬಾತ ನಿರ್ದೇಶನ ನೀಡಿದ್ದ ಎಂದು ಎನ್ಐಎ ಕೋರ್ಟ್ ಗೆ ನೀಡಿರುವ ಮಾಹಿತಿ ಮೂಲಕ ತಿಳಿದುಬಂದಿದೆ. 

ಮಾಝ್ ಎಸ್ ಕೆವೈಎಫ್ಐ ಲ್ಯಾಬ್ಸ್ ನಲ್ಲಿ 7 ರೋಬೋಟಿಕ್ಸ್ ಆನ್ ಲೈನ್ ಪ್ರಾಜೆಕ್ಟ್ ಆಧಾರಿತ ಕೋರ್ಸ್ ಗೆ ಸೇರಿ, ರೊಬೋಟಿಕ್ಸ್ ಕಿಟ್ ನ್ನೂ ಪಡೆದಿದ್ದ. ಈತನೊಂದಿಗೆ ಬಂಧನಕ್ಕೆ ಒಳಗಾಗಿದ್ದ ಮತ್ತೋರ್ವ ಆರೋಪಿ ಸಯೀದ್ ಯಾಸೀನ್ ಸಹ ಕರ್ನಲ್ ನಿರ್ದೇಶನದಂತೆ, ರೊಬೋಟಿಕ್ಸ್ ಕಲಿಯಲು ಮೊಬೈಲ್ ರೊಬೋಟಿಕ್ ಆನ್ ಲೈನ್ ಕೋರ್ಸ್ ಗೆ ಸೇರಿ ಕಿಟ್ ಪಡೆದಿದ್ದ ಎಂದು ತಿಳಿದುಬಂದಿದೆ.

ಬೆಂಗಳೂರಿನ ಫುಡ್ ಡೆಲಿವರಿ ಬಾಯ್ ಮತ್ತು ರಾಪಿಡೋ ರೈಡರ್ ಆಗಿ ಕೆಲಸ ಮಾಡುತ್ತಿದ್ದ ಹುಝೈರ್ ಫರ್ಹಾನ್ ಬೇಗ್ (22ವ) ಮತ್ತು ದಕ್ಷಿಣ ಕನ್ನಡದ ಎಂಜಿನಿಯರಿಂಗ್ ಪದವೀಧರ ಮಜಿನ್ ಅಬ್ದುಲ್ ರಹಮಾನ್ (22ವ) ಜಾಮೀನು ಅರ್ಜಿಗೆ ಸಲ್ಲಿಸಿದ ಆಕ್ಷೇಪಣೆಗಳ ಹೇಳಿಕೆಯಲ್ಲಿ ಎನ್‌ಐಎ ಈ ಸಂಗತಿಗಳನ್ನು ಬಹಿರಂಗಪಡಿಸಿದೆ.

2022ರ ಆಗಸ್ಟ್‌ನಲ್ಲಿ ಶಿವಮೊಗ್ಗದಲ್ಲಿ ನಡೆದ ಪ್ರೇಮ್ ಸಿಂಗ್ ಹತ್ಯೆಯ ನಂತರ ದೊಡ್ಡ ಸಂಚು ರೂಪಿಸಿದ ಎಂಟು ಆರೋಪಿಗಳಲ್ಲಿ ಇವರಿಬ್ಬರೂ ಸೇರಿದ್ದಾರೆ. ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ‘ಕರ್ನಲ್’ ನಿರ್ದೇಶನದ ಮೇರೆಗೆ ಪ್ರೆಶರ್ ಕುಕ್ಕರ್ ಬಾಂಬ್ ಸಿದ್ಧಪಡಿಸಿದ್ದನ್ನು ಎನ್‌ಐಎ ಬಹಿರಂಗಪಡಿಸಿದೆ. ಮಂಗಳೂರಿನ ಕದ್ರಿ ದೇವಸ್ಥಾನಕ್ಕೆ ಕುಕ್ಕರ್ ಬಾಂಬ್ ಹಾಕಲು ತೆರಳುತ್ತಿದ್ದ ವೇಳೆ ಬಾಂಬ್ ಸ್ಫೋಟಗೊಂಡಿದೆ.

‘ಕರ್ನಲ್’ ನಿರ್ದೇಶನದ ಮೇರೆಗೆ ಆರೋಪಿಗಳು ಶಿವಮೊಗ್ಗ, ಬ್ರಹ್ಮಾವರ ಮತ್ತು ಸುರತ್ಕಲ್‌ನಲ್ಲಿ ಹಿಂದೂಗಳಿಗೆ ಸೇರಿದ ಸರಕು ವಾಹನಗಳು, ಮದ್ಯ ಮಾರಾಟ ಮಳಿಗೆಗಳು ಮತ್ತು ಬಣ್ಣ ಮತ್ತು ಹಾರ್ಡ್‌ವೇರ್ ಅಂಗಡಿಗಳು ಮತ್ತು ಹೊನ್ನಾಳಿಯ ವಿಂಡ್‌ಮಿಲ್ ನಿಲ್ದಾಣವನ್ನು ಗುರಿಯಾಗಿಸಿಕೊಂಡಿದ್ದರು. 

ಕೊಡಗಿನಲ್ಲಿ ವೈಲ್ಡ್ ಸರ್ವೈವಲ್ ಅಕಾಡೆಮಿ ಆಯೋಜಿಸಿದ್ದ ಜಂಗಲ್ ಸರ್ವೈವಲ್ ಶಿಬಿರದಲ್ಲಿ ಶಾರಿಕ್ ಮತ್ತು ಮಾಜ್ ಭಾಗವಹಿಸಿದ್ದರು. ಶಿಬಿರದ ಸಮಯದಲ್ಲಿ ಶಾರಿಕ್ ಅವರು ಸ್ಥಳ ನಕ್ಷೆಗಾಗಿ ಬಳಸುತ್ತಿದ್ದ ಜಿಪಿಎಸ್ ಟ್ರ್ಯಾಕರ್ ನ್ನು ಖರೀದಿಸಿದರು. ಇದಲ್ಲದೆ, ಶಾರಿಕ್ ಮತ್ತು ಮಾಜ್ ಅವರು ಮುಂಬೈಗೆ ಭೇಟಿ ನೀಡಿದ್ದರು ಎಂದು ತೋರಿಸಲು ತಂಡವು ರೈಲ್ವೆಯಿಂದ ದಾಖಲೆಗಳನ್ನು ಸಂಗ್ರಹಿಸಿದೆ.

SCROLL FOR NEXT