ರಾಜ್ಯ

ಈಗ ವರ್ಷವಿಡೀ ವೈರಲ್ ಸೋಂಕು ಕಾಡಲಿದೆ: ವೈದ್ಯರು

Manjula VN

ಬೆಂಗಳೂರು: ಹವಾಮಾನ ಬದಲಾದಂತೆ ಜನರಲ್ಲಿ ವೈರಲ್ ಸೋಂಕುಗಳು ಹೆಚ್ಚಾಗುತ್ತಿದ್ದು, ಈ ಸೋಂಕು ವರ್ಷವಿಡೀ ಕಾಡಲಿದೆ ಎಂದು ವೈದ್ಯರು ಹೇಳಿದ್ದಾರೆ.

ವೈರಲ್ ಜ್ವರ, RSV ಸೋಂಕು, ಡೆಂಗ್ಯೂ, ಚಿಕೂನ್‌ ಗುನ್ಯಾ, ಕಾಂಜಂಕ್ಟಿವಿಟಿಸ್, ಮಲೇರಿಯಾ ಮತ್ತು ಹೊಟ್ಟೆಯ ಸೋಂಕುಗಳಂತಹ ಇತರ ವೈರಲ್ ರೋಗಗಳು ವರ್ಷವಿಡೀ ಕಾಡಲಿದೆ ಎಂದು ಹೇಳಿದ್ದಾರೆ.

ಸಕ್ರಾ ವರ್ಲ್ಡ್ ಆಸ್ಪತ್ರೆಯ ಹಿರಿಯ ಸಲಹೆಗಾರ ಮತ್ತು ವಿಭಾಗದ ಮುಖ್ಯಸ್ಥ (ಪೀಡಿಯಾಟ್ರಿಕ್ಸ್ ಮತ್ತು ನಿಯೋನಾಟಾಲಜಿ) ಡಾ ರಜತ್ ಆತ್ರೇಯ ಅವರು ಮಾತನಾಡಿ, ವೈರಲ್ ಸೋಂಕಿನಿಂದ ಹಲವು ಬಳಲುತ್ತಿದ್ದು, ಆಸ್ಪತ್ರೆಯ ಹೊರರೋಗಿ ವಿಭಾಗಕ್ಕೆ ಪ್ರತಿನಿತ್ಯ 20 ಮಂದಿ ಬರುತ್ತಿರುತ್ತಾರೆ. ಈ ಪೈಕಿ ಓರ್ವರಿಗೆ ಆಸ್ಪತ್ರೆಗೆ ದಾಖಲಾಗುವ ಅಗತ್ಯವಾಗಿರುತ್ತಿದೆ. ಸೋಂಕಿಗೆ ಒಳಗಾದವರು, ಕೆಮ್ಮು, ಗಂಟಲು ನೋವು, ಜ್ವರ, ದೇಹದ ನೋವು ಮತ್ತು ತಲೆನೋವಿನಂತಹ ರೋಗಲಕ್ಷಣಗಳನ್ನು ಹೊಂದಿರುತ್ತಾರೆ. ಈ ಸೋಂಕು ಮೂರು-ಏಳು ದಿನಗಳವರೆಗೆ ಇರುತ್ತದೆ ಎಂದು ಹೇಳಿದ್ದಾರೆ.

ಕೋವಿಡ್ ವೇಳೆ ಹಲವು ವೈರಲ್ ಸೋಂಕುಗಳು ಕಾಣಿಸಿಕೊಳ್ಳಲಾರಂಭಿಸಿದ್ದವು. ಲಾಕ್ಡೌನ್ ಕಾರಣಗಳಿಂದಾಗಿ ಜನರಲ್ಲಿ ಹೆಚ್ಚಿ ಕಾಣಿಸಿಕೊಂಡಿರಲಿಲ್ಲ. ಇದೀಗ ಹವಾಮಾನ ಬದಲಾದಂತೆ ಜನರನ್ನು ಕಾಡಲು ಆರಂಭಿಸಿದೆ. ವೈರಲ್ ಗಳು ರೂಪಾಂತರಗಳು ಫ್ಲೂ ಪ್ರಕರಣಗಳಿಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.

ಜೂನ್ ತಿಂಗಳಿನಲ್ಲಿ ಮಳೆಗಾಲ ಆರಂಭವಾದ ಹಿನ್ನೆಲೆಯಲ್ಲಿ ನಗರದಲ್ಲಿ ಡೆಂಗ್ಯೂ, ಆರ್‌ಎಸ್‌ವಿ ಸೋಂಕುಗಳು, ನ್ಯುಮೋನಿಯಾ, ಕಾಂಜಂಕ್ಟಿವಿಟಿಸ್ ಮತ್ತು ಗ್ಯಾಸ್ಟ್ರೋಎಂಟರೈಟಿಸ್ ಪ್ರಕರಣಗಳು ಹೆಚ್ಚಾಗಿದ್ದವು.

ಕೋವಿಡ್ ಆತಂಕ ದೂರಾಗಿರುವ ಹಿನ್ನೆಲೆಯಲ್ಲಿ ಜನರು ಮಾಸ್ಕ್ ಧರಿಸುವುದನ್ನು ಹಾಗೂ ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವುದನ್ನು ನಿಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ವೈರಲ್ ಸೋಂಕುಗಳು ಜನರನ್ನು ಕಾಡಲು ಆರಂಭಿಸಿದೆ.

SCROLL FOR NEXT