ರಾಜ್ಯ

ತುಮಕೂರು: ನವಿಲು ಭೇಟೆಯಾಡಿ, ಮಾಂಸ ತಿಂದ ಮೂವರ ಬಂಧನ

Nagaraja AB

ತುಮಕೂರು: ಜಿಲ್ಲೆಯ ಪಂಡಿತನಹಳ್ಳಿ ಗ್ರಾಮದ ಸಮೀಪದ ಮಾರನಾಯಕನಪಾಳ್ಯದಲ್ಲಿರುವ ಇಟ್ಟಿಗೆ ಭಟ್ಟಿಯಲ್ಲಿ ನವಿಲು ಭೇಟೆಯಾಡಿ ಅದರ ಮಾಂಸವನ್ನು ತಿನ್ನುತ್ತಿದ್ದ ಮೂವರು ಕಾರ್ಮಿಕರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಒಡಿಶಾದ ಬಿಟ್ಟಿಂಗ್ ನಾಯಕ್, ಬೈಷಾಕ್ ದಾವು, ದುಬಾ ಕಾಪತ್ ಬಂಧಿತ ಆರೋಪಿಗಳು. 

ಖಚಿತ ಮಾಹಿತಿ ಮೇರೆಗೆ ಆರ್‌ಎಫ್‌ಒ ಪವಿತ್ರಾ ಮತ್ತು ಡಿಆರ್‌ಎಫ್‌ಒ ರಬ್ಬಾನಿ ನೇತೃತ್ವದ ಅರಣ್ಯ ತಂಡ ಎಸ್‌ಆರ್‌ಎಸ್ ಇಟ್ಟಿಗೆ ಭಟ್ಟಿಯಲ್ಲಿರುವ ಶೆಡ್ ಮೇಲೆ ದಾಳಿ ನಡೆಸಿ, ನವಿಲಿನ ಮಾಂಸವನ್ನು ಪತ್ತೆ ಹಚ್ಚಿದೆ. 1.5 ಕೆ.ಜಿ ತೂಕದ ಮಾಂಸ, ಗರಿಗಳು, ಬಲೆ, ಅಡುಗೆ ಮಾಡಲು ಬಳಸಿದ್ದ ಪಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಮಾದರಿಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ.

ಈ ಮಧ್ಯೆ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

SCROLL FOR NEXT