ಸಾಂದರ್ಭಿಕ ಚಿತ್ರ 
ರಾಜ್ಯ

ಕುಡಿದು ವಾಹನ ಚಾಲನೆ ಮಾಡಿ ಪೊಲೀಸರೊಂದಿಗೆ ಗಲಾಟೆ: ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರನ ವಿರುದ್ಧ ಪೊಲೀಸ್ ಕೇಸ್

ಖ್ಯಾತ ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರ ಆ್ಯಡಂ ಬಿದ್ದಪ್ಪ ವಿರುದ್ಧ ಕುಡಿದು ವಾಹನ ಚಲಾಯಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಆರೋಪದ ಮೇರೆಗೆ ಪೊಲೀಸ್ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಖ್ಯಾತ ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರ ಆ್ಯಡಂ ಬಿದ್ದಪ್ಪ ವಿರುದ್ಧ ಕುಡಿದು ವಾಹನ ಚಲಾಯಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಆರೋಪದ ಮೇರೆಗೆ ಪೊಲೀಸ್ ಪ್ರಕರಣ ದಾಖಲಾಗಿದೆ.

ಮೂಲಗಳ ಪ್ರಕಾರ ಇತ್ತೀಚೆಗೆ ಆ್ಯಡಂ ಬಿದ್ದಪ್ಪ ಕುಡಿದು ವಾಹನ ಚಲಾಯಿಸಿದ್ದರು. ಯಲಹಂಕದ ರಸ್ತೆಯಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆ್ಯಡಂ ಬಿದ್ದಪ್ಪ ಕಂಠಪೂರ್ತಿ ಕುಡಿದು ಅತಿವೇಗದ ಚಾಲನೆ ಮಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ರಾಹುಲ್ ಎಂಬಾತ‌ ಹಿಂದೆಯಿಂದ ಕಾರ್ ಹಾರ್ನ್ ಮಾಡಿದ್ದ. ಅಷ್ಟಕ್ಕೇ ಆ್ಯಡಂ ಕಾರ್ ಓವರ್ ಟೇಕ್ ಮಾಡಿ ರೋಡ್ ಬ್ಲಾಕ್ ಮಾಡಿ ಗಲಾಟೆ ಮಾಡಿದ್ದಾರೆ.

ಆ್ಯಡಂ ರಂಪಾಟ ತಡೆಯಲಾಗದ ರಾಹುಲ್‌ ಕೂಡಲೇ ಪೊಲೀಸ್ ಎಮರ್ಜೆನ್ಸಿ ಸಂಖ್ಯೆ 112ಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ಪೊಲೀಸರ ಜೊತೆ ಕೂಡ ಬಿದ್ದಪ್ಪ ಕೂಗಾಟ ನಡೆಸಿದ್ದು, ಅಷ್ಟರಲ್ಲಾಗಲೇ ಯಲಹಂಕ ಸಂಚಾರಿ ಪೊಲೀಸರು ಸಹ ಸ್ಥಳಕ್ಕೆ ಬಂದರು. 

ಈ ವೇಳೆ ಆ್ಯಡಂ ಪರಿಶೀಲಿಸಲಾಗಿ ಕಂಠ ಪೂರ್ತಿ ಕುಡಿದಿರುವುದು ಪತ್ತೆಯಾಯ್ತು. ತಕ್ಷಣ ಯಲಹಂಕ ಸಂಚಾರಿ ಪೊಲೀಸರು ಆತನ ಕಾರ್ ಸೀಜ್ ಮಾಡಿದರು. ಬಳಿಕ ಯಲಹಂಕ ನ್ಯೂಟೌನ್ ಪೊಲೀಸರು ಆ್ಯಡಂ ಬಿದ್ದಪ್ಪನ ವಶಕ್ಕೆ ಪಡೆದರು. ಮತ್ತೊಂದೆಡೆ ರಾಹುಲ್ ದೂರಿನ ಹಿನ್ನೆಲೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆ್ಯಡಂ ವಶಕ್ಕೆ ಪಡೆದ ಪೊಲೀಸರು ಮೆಡಿಕಲ್ ಮಾಡಿಸಿದಾಗ ಕುಡಿದಿರುವುದು ಸ್ಪಷ್ಟವಾಗಿದೆ.  

ಅಂದಹಾಗೆ ಈ ಆ್ಯಡಂ ಬಿದ್ದಪ್ಪ ನಟ ಅಭಿಷೇಕ್‌ ಅಂಬರೀಶ್ ಅವರ ಪತ್ನಿ ಅವಿವಾ ಬಿದ್ದಪ್ಪ ಅವರ ಸಹೋದರ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

SCROLL FOR NEXT