ಎಚ್.ಡಿ ಕುಮಾರಸ್ವಾಮಿ 
ರಾಜ್ಯ

'ಸರಿ, ನಾವೆಲ್ಲಾ ಕಳ್ಳರೇ ಒಪ್ಕೊತೀನಿ: ಕುಮಾರಸ್ವಾಮಿಯವರೇ, ನೀವು ಸತ್ಯ ಹರಿಶ್ಚಂದ್ರ, ಏನೂ ತಿಂದಿಲ್ಲ ಅಂತಾ ಆಣೆ ಮಾಡಿ'

ಒಬ್ಬ ಮಾಜಿ ಮುಖ್ಯಮಂತ್ರಿ ಈ ರೀತಿ ಚಿಲ್ಲರೆಯಾಗಿ ಮಾತನಾಡಬಾರದು ಎಂದು ತಿರುಗೇಟು ನೀಡಿದರು. ಎರಡು ಸಲ‌ ಸಿ.ಎಂ ಆಗಿರುವ ಅವರು ತೂಕವಾಗಿ ಮತ್ತು ಸಮಯೋಚಿತವಾಗಿ ಮಾತನಾಡಬೇಕು ಎಂದರು. ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದರೆ ಏನಾಗುತ್ತದೆ

ರಾಮನಗರ: ಸರಿ ನಾವೆಲ್ಲಾ ಕಳ್ಳರೇ.. ಒಪ್ಕೊತೀವಿ. ನಾವೆಲ್ಲಾ ತಿಂದಿದ್ದೀವಿ.. ಹಾಗಾದರೆ ನೀವು ಸತ್ಯ ಹರಿಶ್ಚಂದ್ರ. ಏನೂ ತಿಂದಿಲ್ಲ ಅಂತ ಬಂದು ಆಣೆ ಮಾಡಿ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ.

ಸರ್ಕಾರಿ ನೌಕರರ ವರ್ಗಾವಣೆ, ನೇಮಕಾತಿಯಲ್ಲಿ ಹಣ ಪಡೆದಿಲ್ಲ ಎಂದು ಧರ್ಮಸ್ಥಳ ಅಥವಾ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಸಿದ್ಧ ಎಂಬ ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಸವಾಲಿಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ಏಯ್, ಥೂ.. ಅವರ ಬಾಲಿಶ ಹೇಳಿಕೆಗೆ ಉತ್ತರ ಕೊಡಲ್ಲ ನಡಿಯಪ್ಪಾ ಎನ್ನುತ್ತಲೇ ಮಾತಿಗಿಳಿದರು.

ನೀವು ಬಂದು ಆಣೆ ಮಾಡಿ ಅಂದ್ರೆ, ಅವರನ್ನು ಕರೆಯಿರಿ, ಇವರನ್ನ ಕರೆಯಿರಿ ಅನ್ನೊದಲ್ಲ. ನೀವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಯಿರಿ ಅಂದರೆ ಆಗುತ್ತದೆಯೇ? ನಾನು ಹೇಳಿರೋದು ನಿಮ್ಮ ಕುಟುಂಬದವರು ತಿಂದಿಲ್ವಾ ಅಂತಾ. ಅವರ ತಂದೆ ಎಚ್.ಡಿ. ದೇವೇಗೌಡ ಅವರನ್ನ ಕರೆಸಿ ಆಣೆ ಮಾಡಿಸ್ತಾರಾ ಕೇಳ್ರಿ ಎಂದು ಪ್ರಶ್ನಿಸಿದರು.

ಒಬ್ಬ ಮಾಜಿ ಮುಖ್ಯಮಂತ್ರಿ ಈ ರೀತಿ ಚಿಲ್ಲರೆಯಾಗಿ ಮಾತನಾಡಬಾರದು ಎಂದು ತಿರುಗೇಟು ನೀಡಿದರು. ಎರಡು ಸಲ‌ ಸಿ.ಎಂ ಆಗಿರುವ ಅವರು ತೂಕವಾಗಿ ಮತ್ತು ಸಮಯೋಚಿತವಾಗಿ ಮಾತನಾಡಬೇಕು ಎಂದರು. ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದರೆ ಏನಾಗುತ್ತದೆ? ಉಪವಾಸ ಮಾಡೋದು, ಬಿಡೋದು ಅವರಿಗೆ ಬಿಟ್ಟಿದ್ದು. ಸುಮ್ಮನೆ ಏನೇನೋ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

DIG ಸೋಮಶೇಖರ್ ಕಾಮಕಾಂಡ ಬಟಾಬಯಲು: ಅಪರಾಧಿ ಪತ್ನಿಗೆ ವಿಡಿಯೋ ಕಾಲ್; ಬೆತ್ತಲಾಗುವಂತೆ ಒತ್ತಡ!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!