ಬಸ್ ಗಳಿಗೆ ಬೆಂಕಿ 
ರಾಜ್ಯ

ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ: ವರ್ಕ್ ಶಾಪ್ ನಲ್ಲಿ ಬೆಂಕಿ; ಹೊತ್ತಿ ಉರಿದ ಖಾಸಗಿ ಬಸ್​ಗಳು! ವಿಡಿಯೋ

ವೀರಭದ್ರ ನಗರದಲ್ಲಿ ಬೆಂಕಿ ಅನಾಹುತ ಉಂಟಾಗಿದ್ದು, ಹಲವು ಖಾಸಗಿ ಬಸ್ ಗಳು ಬೆಂಕಿಗಾಹುತಿಯಾಗಿರುವ ಬಗ್ಗೆ ವರದಿಯಾಗಿದೆ. ವೀರಭದ್ರನಗರದ ಬಸ್ ಗಳ ಬಾಡಿ ಬಿಲ್ಡಿಂಗ್ ಮತ್ತು ವೆಲ್ಡಿಂಗ್ ಮಾಡುವ ವರ್ಕ್ ಶಾಪ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬೆಂಗಳೂರು: ನಗರದ ವೀರಭದ್ರ ನಗರದಲ್ಲಿ ಬೆಂಕಿ ಅನಾಹುತ ಉಂಟಾಗಿದ್ದು, ಹಲವು ಖಾಸಗಿ ಬಸ್ ಗಳು ಬೆಂಕಿಗಾಹುತಿಯಾಗಿರುವ ಬಗ್ಗೆ ವರದಿಯಾಗಿದೆ. ವೀರಭದ್ರನಗರದ ಬಸ್ ಗಳ ಬಾಡಿ ಬಿಲ್ಡಿಂಗ್ ಮತ್ತು ವೆಲ್ಡಿಂಗ್ ಮಾಡುವ ವರ್ಕ್ ಶಾಪ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಈ ಬೆಂಕಿ ವರ್ಕ್​​ಶಾಪ್​ ನಲ್ಲಿರೋ ಇತರೆ ವಾಹನಗಳಿಗೆ ಬೆಂಕಿ ವ್ಯಾಪಿಸುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ. ಯಾವುದೇ ಪ್ರಾಣ ಹಾನಿ ನಡೆದಿರುವ ಬಗ್ಗೆ ವರದಿಯಾಗಿಲ್ಲ.

ಖಾಸಗಿ ಬಸ್​ಗಳನ್ನು ನಿಲ್ಲಿಸಿದ್ದ ಜಾಗ ಇದಾಗಿತ್ತು. ನೋಡ ನೋಡುತ್ತಲೇ ಒಂದರ ನಂತರ ಮತ್ತೊಂದು ಬಸ್​ಗೆ ಬೆಂಕಿ ಹೊತ್ತಿಕೊಂಡಿದೆ. ಒಳಗೆ 10 ಬಸ್ ಗಳನ್ನು ನಿಲ್ಲಿಸಲಾಗಿದೆ. ಇವು ಬೇರೆ ಬೇರೆ ಸಂಸ್ಥೆಗಳಿಗೆ ಸೇರಿರುವ ಬಸ್ ಗಳಾಗಿವೆ.

ಈ ಪೈಕಿ ಸದ್ಯ ಆರು ಬಸ್ ಗಳಿಗೆ ಬೆಂಕಿ ತಗುಲಿದೆ. ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವರ್ಕ್​ಶಾಪ್​ ನಿಂದ ಜನರನ್ನು ದೂರ ಕಳುಹಿಸಲಾಗುತ್ತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Mysuru Dasara: ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ; ಜಂಬೂ ಸವಾರಿಗೆ ಸಿಎಂ ಚಾಲನೆ

ಅಂಬೇಡ್ಕರ್ ಸಿದ್ಧಾಂತದಂತೆ ಬದುಕಿದ್ದೇವೆ: RSS ಕಾರ್ಯಕ್ರಮಕ್ಕೆ ಹೋಗಲ್ಲ- CJI ಗವಾಯಿ ತಾಯಿ

Asia Cup 2025: 'ಪಾಕಿಗಳ ನೋಡಿದ್ರೆ ಅವನ ರಕ್ತ ಕುದಿಯುತ್ತಿತ್ತು'; ಟೀಂ ಇಂಡಿಯಾ 'Hero' ಕೋಚ್ Kapil Dev Pandey ಮಾತು!

1st Test: ಮೊದಲ ದಿನದಾಟ ಅಂತ್ಯ, ವಿಂಡೀಸ್ ವಿರುದ್ಧ ಭಾರತ ಮೇಲುಗೈ, 41 ರನ್ ಹಿನ್ನಡೆ!

'RSS-BJP' ಸೈದ್ಧಾಂತಿಕತೆಯ ಹೃದಯದಲ್ಲಿ ಹೇಡಿತನವಿದೆ: ಕೊಲಂಬಿಯಾದಲ್ಲಿ ಗುಡುಗಿದ ರಾಹುಲ್ ಗಾಂಧಿ!

SCROLL FOR NEXT