ರಾಜ್ಯ

ತಮಿಳುನಾಡಿಗೆ ನೀರು ಬಿಡುವಂತೆ ಮತ್ತೆ ಆದೇಶ, ದೇವರನ್ನು ಪ್ರಾರ್ಥಿಸದೆ ಬೇರೆ ದಾರಿಯಿಲ್ಲ: ಡಿಕೆ.ಶಿವಕುಮಾರ್

Manjula VN

ಬೆಂಗಳೂರು: ಕೆಆರ್‌ಎಸ್ ಒಳಹರಿವು ಶೂನ್ಯಕ್ಕೆ ತಲುಪಿದೆ. ನಮ್ಮ ಹತ್ತಿರ ತಮಿಳುನಾಡಿಗೆ ಹರಿಸಲು ನೀರಿಲ್ಲ. ನೀರು ಬಿಡುವ ಶಕ್ತಿಯೂ ನಮ್ಮಲ್ಲಿ ಇಲ್ಲ. ಕುಡಿಯುವ ನೀರನ್ನು ಉಳಿಸಿಕೊಂಡರೆ ಸಾಕಾಗಿದೆ. ಇದನ್ನು ಸಂಬಂಧಪಟ್ಟವರಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮಂಗಳವಾರ ಹೇಳಿದರು.

ನವೆಂಬರ್ 1 ರಿಂದ ನವೆಂಬರ್ 15 ರವರೆಗೆ ತಮಿಳುನಾಡಿಗೆ ಪ್ರತಿದಿನ 2,600 ಕ್ಯೂಸೆಕ್ ನೀರು ಬಿಡುವಂತೆ ಸಿಡಬ್ಲ್ಯೂಆರ್‌ಸಿ ರಾಜ್ಯಕ್ಕೆ ಆದೇಶಿಸಿತ್ತು.

ಈ ಆದೇಶ ಕುರಿತು ಪ್ರತಿಕ್ರಿಯೆ ನೀಡಿದ ಡಿಕೆ.ಶಿವಕುಮಾರ್ ಅವರು, ಕರ್ನಾಟಕದಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿಲ್ಲ. ಕೆಆರ್ ಎಸ್ ಅಣೆಕಟ್ಟೆಗೆ ಒಳಹರಿವು ಬಹುತೇಕ ಶೂನ್ಯವಾಗಿದೆ. ಆದರೆ, ಕಬಿನಿ ಮತ್ತು ಕೆಆರ್ ಎಸ್ ಜಲಾಶಯಗಳಿಂದ 815 ಕ್ಯೂಸೆಕ್ ನೀರು ತಮಿಳುನಾಡಿಗೆ ನೈಸರ್ಗಿಕವಾಗಿ ಹರಿದು ಹೋಗುತ್ತಿದೆ. ಸದ್ಯ ನಮ್ಮಲ್ಲಿ ಕೇವಲ 51 ಟಿಎಂಸಿ ಅಡಿ ನೀರು ಇದ್ದು, ಕುಡಿಯುವ ನೀರನ್ನು ಉಳಿಸಿಕೊಂಡರೆ ಸಾಕಾಗಿದೆ ಎಂದು ಹೇಳಿದರು.

ಮಳೆ ಸುರಿದು ಜಲಾಶಯಗಳಲ್ಲಿ ನೀರು ಹರಿದು ಬರುಂತಾಗಲಿ. ದೇವರನ್ನು ಪ್ರಾರ್ಥಿಸುವ ಹೊರತಾಗಿ ತಮ್ಮಲ್ಲಿ ಬೇರೆ ದಾರಿ ಉಳಿದಿಲ್ಲ ಎಂದು ತಿಳಿಸಿದರು.

SCROLL FOR NEXT