ಸಾಂದರ್ಭಿಕ ಚಿತ್ರ 
ರಾಜ್ಯ

ವೈಯಕ್ತಿಕ ಫೋಟೋಗಳೊಂದಿಗೆ ಮಹಿಳೆಗೆ ಬೆದರಿಕೆ, ಚೆನ್ನೈನಲ್ಲಿ ಆರೋಪಿ ಬಂಧನ

ವೈಯಕ್ತಿಕ ಫೋಟೋಗಳೊಂದಿಗೆ ಮಹಿಳೆಗೆ ಬೆದರಿಕೆ ಹಾಕಿದ್ದ 26 ವರ್ಷದ ಅಸ್ಸಾಂ ಮೂಲದ ಯುವಕನೊಬ್ಬನನ್ನು ಬೆಂಗಳೂರಿನ ಆಗ್ನೇಯ ವಿಭಾಗದ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ವಿಭಾಗದ ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದಾರೆ. ಅಮೀರ್ ಹುಸೇನ್ ಫೈಸಲ್ ಬಂಧಿತ ಆರೋಪಿಯಾಗಿದ್ದಾನೆ. 

ಬೆಂಗಳೂರು: ವೈಯಕ್ತಿಕ ಫೋಟೋಗಳೊಂದಿಗೆ ಮಹಿಳೆಗೆ ಬೆದರಿಕೆ ಹಾಕಿದ್ದ 26 ವರ್ಷದ ಅಸ್ಸಾಂ ಮೂಲದ ಯುವಕನೊಬ್ಬನನ್ನು ಬೆಂಗಳೂರಿನ ಆಗ್ನೇಯ ವಿಭಾಗದ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ವಿಭಾಗದ ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದಾರೆ. ಅಮೀರ್ ಹುಸೇನ್ ಫೈಸಲ್ ಬಂಧಿತ ಆರೋಪಿಯಾಗಿದ್ದಾನೆ. 

ಫೈಸಲ್‌ನಿಂದ ಬೆದರಿಕೆ ಸಂದೇಶಗಳ ಕುರಿತು ಕಾರ್ಪೊರೇಟ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಸಂತ್ರಸ್ತೆ  ದೂರು ದಾಖಲಿಸಿದ್ದರು. ನಂತರ ಪೊಲೀಸರು ತನಿಖೆ ಕೈಗೊಂಡಿದ್ದರು. ತನನ್ನು ಭೇಟಿಯಾಗುವಂತೆ ಮಹಿಳೆಯನ್ನು ಪೀಡಿಸುತ್ತಿದ್ದ ಆರೋಪಿ, ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯಿಸುತ್ತಿದ್ದ. ಒಂದು ವೇಳೆ ತನ್ನ ಅಗತ್ಯಕ್ಕೆ ಸ್ಪಂದಿಸದಿದ್ದರೆ ಆಕೆಯ ವೈಯಕ್ತಿಕ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. 

ಈ ಸಂಬಂಧ  ಐಪಿಸಿ ಸೆಕ್ಷನ್ 420( ವಂಚನೆ) ಮತ್ತು ಐಟಿ ಕಾಯ್ದೆ (ವಿದ್ಯುನ್ಮಾನ ಉಪಕರಣಗಳ ಮೂಲಕ ಅಪರಾಧ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕರೂರು ಕಾಲ್ತುಳಿತ ದುರಂತ: 36 ಮಂದಿ ಸಾವು; ತಮಿಳುನಾಡಿನಿಂದ ವರದಿ ಕೇಳಿದ ಕೇಂದ್ರ; TVK ವಿಜಯ್ ಪ್ರತಿಕ್ರಿಯೆ ಏನು?

ಕರೂರ್ ಕಾಲ್ತುಳಿತ ಘಟನೆ ತನಿಖೆಗೆ ಆಯೋಗ; ಮೃತರ ಕುಟುಂಬಗಳಿಗೆ 10 ಲಕ್ಷ ರೂ ಪರಿಹಾರ: ಸಿಎಂ ಸ್ಟಾಲಿನ್ ಘೋಷಣೆ

ನಟ ವಿಜಯ್‌ TVK ಪಕ್ಷದ ರ‍್ಯಾಲಿ ವೇಳೆ ಕಾಲ್ತುಳಿತ: 36ಕ್ಕೂ ಹೆಚ್ಚು ಮಂದಿ ಸಾವು; ಪ್ರಧಾನಿ ಸಂತಾಪ; ಸಿಎಂ ಸ್ಟಾಲಿನ್ ಹೇಳಿದ್ದು ಏನು?

Asia CUP 2025: ಭಾರತ-ಪಾಕ್ ಫೈನಲ್ ಪಂದ್ಯಕ್ಕೂ ಮುನ್ನ ಕಿಡಿ ಹೊತ್ತಿಸಿದ PCB ಮುಖ್ಯಸ್ಥ! ಏನಿದು?

ನಟ ವಿಜಯ್‌ TVK ಪಕ್ಷದ ರ‍್ಯಾಲಿ ವೇಳೆ ಕಾಲ್ತುಳಿತ: 8 ಮಕ್ಕಳು ಸೇರಿ 36 ಮಂದಿ ಸಾವು; 40 ಜನರಿಗೆ ಗಂಭೀರ ಗಾಯ!

SCROLL FOR NEXT