ರಾಜ್ಯ

ಸಿಇಟಿ ಸೀಟುಗಳ ಬ್ಲಾಕ್ ಗೆ ಅಂತಿಮ ದಿನಾಂಕ ವಿಸ್ತರಿಸಿದ ಕೆಇಎ: ಪ್ರಕ್ರಿಯೆ ಹೇಗೆ?

Sumana Upadhyaya

ಬೆಂಗಳೂರು: ಕರ್ನಾಟಕ ಶಿಕ್ಷಣ ಪ್ರಾಧಿಕಾರ (KEA) ಸಾಮಾನ್ಯ ಪ್ರವೇಶ ಪರೀಕ್ಷೆ (CET) ಮೂಲಕ ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಸೀಟು ಪಡೆದವರಿಗೆ ಕಾಲೇಜುಗಳ ಆಯ್ಕೆ, ಶುಲ್ಕ ಪಾವತಿ ಮತ್ತು ಕಾಲೇಜುಗಳಿಗೆ ವರದಿ ಮಾಡುವ ದಿನಾಂಕಗಳನ್ನು ವಿಸ್ತರಿಸಿದೆ.ಇದರಿಂದ ವೃತ್ತಿಪರ ಶಿಕ್ಷಣ ಅಪೇಕ್ಷಿತ ವಿದ್ಯಾರ್ಥಿಗಳು ಕೊಂಚ ನಿರಾಳರಾಗಿದ್ದಾರೆ. 

ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಿ, ಕೆಇಎ, ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಅಗ್ರಿಕಲ್ಚರ್, ವೆಟರ್ನರಿ, ಫಾರ್ಮಸಿ, ಬಿಎಸ್ಸಿ (ನರ್ಸಿಂಗ್) ಮತ್ತು ಹೆಚ್ಚಿನ ಸೀಟುಗಳ ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಸೀಟು ಪಡೆದ ಅಭ್ಯರ್ಥಿಗಳಿಗೆ ಎರಡು ದಿನಗಳ ವಿಸ್ತರಣೆಯನ್ನು ನೀಡಿದೆ. 

ಅಭ್ಯರ್ಥಿಗಳ ಆಯ್ಕೆಯನ್ನು ಇಂದು ರಾತ್ರಿ 11:59 ರವರೆಗೆ ವಿಸ್ತರಿಸಲಾಗಿದೆ ಎಂದು ಕೆಇಎ ಕಳೆದ ಶನಿವಾರ ತಿಳಿಸಿತ್ತು. ಅಲ್ಲಿ ವಿದ್ಯಾರ್ಥಿಗಳು ಅವರು ನೀಡಿದ ನಾಲ್ಕು ಆಯ್ಕೆಗಳ ನಡುವೆ ಆಯ್ಕೆ ಮಾಡಬೇಕಾಗುತ್ತದೆ. ಇದಲ್ಲದೆ, ಚಾಯ್ಸ್-1 ಅಥವಾ ಚಾಯ್ಸ್-2 ಅಭ್ಯರ್ಥಿಗಳು ಮಾತ್ರ ಶುಲ್ಕ ಪಾವತಿಯನ್ನು ಬ್ಯಾಂಕಿಂಗ್ ಸಮಯದವರೆಗೆ ಸೆಪ್ಟೆಂಬರ್ 13 ರವರೆಗೆ ವಿಸ್ತರಿಸಲಾಗಿದೆ.

ಆಯ್ಕೆ-1 ಅಭ್ಯರ್ಥಿಗಳು ತಮ್ಮ ಪ್ರವೇಶ ಆದೇಶಗಳನ್ನು ಸೆಪ್ಟೆಂಬರ್ 13 ರವರೆಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಸೆಪ್ಟೆಂಬರ್ 14, ಸಂಜೆ 5:30 ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ಕೆಇಎ ನಿರ್ದೇಶಕಿ ರಮ್ಯಾ ಎಸ್ ತಿಳಿಸಿದ್ದಾರೆ. 

SCROLL FOR NEXT