ರಾಜ್ಯ

ರೀಟೇಲ್ ಬಿಯರ್ ಮಾರಾಟಗಳಿಗೆ ಹೊಸ ಪರವಾನಗಿ ನೀಡಲು ಸರ್ಕಾರ ಚಿಂತನೆ: ಸರ್ಕಾರ-ಗ್ರಾಹಕ ಇಬ್ಬರಿಗೂ ಲಾಭ

Sumana Upadhyaya

ಬೆಂಗಳೂರು: ಬಿಯರ್ ಪ್ರಿಯರಿಗೆ ಇದು ಸಿಹಿಸುದ್ದಿ. ಆದಾಯವನ್ನು ಹೆಚ್ಚಿಸಲು ಮತ್ತು ಟ್ಯಾಪ್ (ಡ್ರಾಫ್ಟ್) ಬಿಯರ್‌ಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಕ್ರಮದಲ್ಲಿ, ಚಿಲ್ಲರೆ ಮಾರಾಟದ ಬಿಯರ್ (RVB) ಮಳಿಗೆಗಳಿಗೆ ಹೊಸ ಸ್ವತಂತ್ರ ಅಥವಾ ಸ್ಟ್ಯಾಂಡ್ ಅಲೋನ್ ಪರವಾನಗಿಗಳನ್ನು ನೀಡುವ ಕುರಿತು ಸರ್ಕಾರವು ಚಿಂತನೆ ಮಾಡುತ್ತಿದೆ. ಆದರೆ, ಅದರ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಸಿಕ್ಕಿಲ್ಲ. 

ಡ್ರಾಟ್, ಅಥವಾ ಡ್ರಾಟ್ ಬಿಯರ್ ಟ್ಯಾಪ್‌ನಿಂದ ನೇರವಾಗಿ ಪೂರೈಸಲಾಗುತ್ತದೆ. ಬಾಟಲ್ ಬಿಯರ್‌ಗೆ ಹೋಲಿಸಿದರೆ ಇದು ತಾಜಾ ಆಗಿದ್ದು, ರುಚಿ ಮತ್ತು ಆಹ್ಲಾದಕರ ನೊರೆಯನ್ನು ಹೊಂದಿದೆ.

ಈಗಿನಂತೆ, ಆರ್ ವಿಬಿಯನ್ನು ಕ್ಲಬ್‌ಗಳು (CL4), ಹೋಟೆಲ್‌ಗಳು ಮತ್ತು ಬೋರ್ಡಿಂಗ್ ಲಾಡ್ಜ್‌ಗಳು (CL7), ಬಾರ್‌- ರೆಸ್ಟೋರೆಂಟ್‌ಗಳು (CL9) ಮತ್ತು ಸ್ಟಾರ್ ಹೋಟೆಲ್‌ಗಳು (CL-6A) ಗೆ ಲಗತ್ತಿಸಲಾದ ಪರವಾನಗಿಯಾಗಿ ನೀಡಲಾಗುತ್ತದೆ. ಆರ್ ವಿಬಿಗಾಗಿ ಅಬಕಾರಿ ಪರವಾನಗಿ ಶುಲ್ಕವು 15,000 ರೂಪಾಯಿ ಆಗಿದೆ, ಇದನ್ನು ವಾರ್ಷಿಕವಾಗಿ ಮುಖ್ಯ ಪರವಾನಗಿ ಶುಲ್ಕದೊಂದಿಗೆ ಪರವಾನಗಿದಾರರು ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ಪ್ರತಿಯೊಂದು ಪರವಾನಗಿ ವರ್ಗಗಳಿಗೆ ಮಳಿಗೆಗಳ ಸ್ಥಳವನ್ನು ಅವಲಂಬಿಸಿ ಪರವಾನಗಿ ಶುಲ್ಕವು ವಿಭಿನ್ನವಾಗಿದೆ. ನಗರ ಪಾಲಿಕೆ ಮಿತಿಯಲ್ಲಿರುವವರು ಅತ್ಯಂತ ದುಬಾರಿಯಾಗಿದೆ.

ಸ್ವತಂತ್ರ ಆರ್ ವಿಬಿಗಳಿಗೆ ಪರವಾನಗಿಗಳನ್ನು ನೀಡುವ ಅಭ್ಯಾಸವು ಮೊದಲು ಪ್ರಚಲಿತವಾಗಿದ್ದು, ದಶಕದ ಹಿಂದೆ ನಿಲ್ಲಿಸಲಾಯಿತು. ಕರ್ನಾಟಕದಲ್ಲಿರುವ 733 ಆರ್ ವಿಬಿ ಪರವಾನಗಿಗಳಲ್ಲಿ 64 ಮಾತ್ರ ಸ್ವತಂತ್ರ ಮಳಿಗೆಗಳಾಗಿವೆ. ಅವುಗಳಲ್ಲಿ ಹೆಚ್ಚಿನವು ಬೆಂಗಳೂರಿನಲ್ಲಿವೆ.

“ಬಿಯರ್ ಕುಡಿಯುವವರಲ್ಲಿ ಕೆಗ್ ಅಥವಾ ಟ್ಯಾಪ್ ಬಿಯರ್‌ಗೆ ದೊಡ್ಡ ಬೇಡಿಕೆಯಿದೆ. ಬೆಂಗಳೂರು, ಬೆಳಗಾವಿ, ಬಳ್ಳಾರಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಕಲಬುರಗಿ, ಶಿವಮೊಗ್ಗ, ತುಮಕೂರು ಮತ್ತು ವಿಜಯಪುರ -- ರಾಜ್ಯದ 11 ನಗರ ಪಾಲಿಕೆಗಳಲ್ಲಿ ಸ್ವತಂತ್ರ, ವಿಶಿಷ್ಟ ಆರ್‌ವಿಬಿ ಮಳಿಗೆಗಳಿಗೆ ಪರವಾನಗಿ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ವಿಷಯದ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಚರ್ಚೆಯು ಆರಂಭಿಕ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಹೊಸ ಸ್ವತಂತ್ರ ಆರ್ ವಿಬಿಗಾಗಿ ಪರವಾನಗಿ ಶುಲ್ಕವು ವಾರ್ಷಿಕವಾಗಿ ಸುಮಾರು 2 ಲಕ್ಷ ರೂಪಾಯಿಗಳಾಗಿರುತ್ತದೆ. ಆರ್ ವಿಬಿಯನ್ನು ಸ್ಥಾಪಿಸಲು ಷರತ್ತುಗಳಿವೆ. ಜನರಿಂದ ಪ್ರತಿಕ್ರಿಯೆಯನ್ನು ಪಡೆಯಲು ಸರ್ಕಾರವು ಸಾರ್ವಜನಿಕ ಸೂಚನೆಯನ್ನು ನೀಡುತ್ತದೆ. ಸೂಕ್ತ ಪ್ರಕ್ರಿಯೆಯ ನಂತರವೇ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು, ಭಾರತದ ಅತಿದೊಡ್ಡ ಟ್ಯಾಪ್ ಬಿಯರ್ ಮಾರುಕಟ್ಟೆ: ಉದ್ಯಮದ ಮೂಲಗಳ ಪ್ರಕಾರ, ಬೆಂಗಳೂರು ಟ್ಯಾಪ್ ಬಿಯರ್‌ಗೆ ಭಾರತದ ಅತಿದೊಡ್ಡ ಮಾರುಕಟ್ಟೆಯಾಗಿದೆ, ಇದರಲ್ಲಿ ಕ್ರಾಫ್ಟ್ ಬಿಯರ್ ನೀಡುವ ಮೈಕ್ರೋಬ್ರೂವರಿಗಳು ಸೇರಿವೆ.

ಬೆಂಗಳೂರಿನಲ್ಲಿ 65 ಮೈಕ್ರೋಬ್ರೂವರಿಗಳಿವೆ, ಕೆಲವು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಮುಚ್ಚಲ್ಪಟ್ಟವು. ನಗರವೊಂದರಲ್ಲೇ ಈಗ ಸುಮಾರು 35 ಹೊಸ ಮೈಕ್ರೋಬ್ರೂವರಿಗಳು ಕಾರ್ಯನಿರ್ವಹಣೆ ಆರಂಭ ಹಂತದಲ್ಲಿವೆ ಎಂದು ಆಹಾರ ಮತ್ತು ಪಾನೀಯ (F & ಬB) ಉದ್ಯಮದ ಮೂಲಗಳು ತಿಳಿಸಿವೆ.

ಸದ್ಯಕ್ಕೆ, ಡ್ರಾಟ್ ಬಿಯರ್ ವಿಭಾಗದಲ್ಲಿ ಕಿಂಗ್‌ಫಿಶರ್, ಬಡ್‌ವೈಸರ್, ಬಿರಾ, ಗೀಸ್ಟ್ ಮತ್ತು ಟಾಯ್ಟ್, ತಮ್ಮ ಸ್ವಂತ ಕ್ರಾಫ್ಟ್ ಬಿಯರ್ ಅನ್ನು ತಯಾರಿಸುವ ಮೈಕ್ರೋಬ್ರೂವರಿಗಳನ್ನು ಹೊಂದಿವ. 16 ರೀತಿಯ ಟ್ಯಾಪ್ ಬಿಯರ್‌ಗಳು ಲಭ್ಯವಿದ್ದು, ದಿನದಿಂದ ದಿನಕ್ಕೆ ಬೆಳೆಯುತ್ತಿವೆ ಎಂದರು.

SCROLL FOR NEXT